Virat Kohli: ಬಿಸಿಸಿಐ ಮೇಲೆ ಸಿಟ್ಟು: ಆಫ್ರಿಕಾ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ ಮಾಡಿದ ಅವಾಂತರ ನೋಡಿ
India vs South Africa: ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತ ಡಿಸೆಂಬರ್ 16 ರಂದು ಜೊಹಾನ್ಸ್‌ಬರ್ಗ್‌ಗೆ ತೆರಳಲಿದೆ. ಆದರೆ, ಬಿಸಿಸಿಐ ನಾಯಕತ್ವದಿಂದ ಕೆಳಗಿಳಿಸಿದ ವಿರಾಟ್ ಕೊಹ್ಲಿ ಇನ್ನೂ ಹೊರಬಂದಿಲ್ಲ ಎಂಬಂತೆ ಗೋಚರಿಸುತ್ತದೆ. ಇದಕ್ಕೆ ಬಲವಾದ ಕಾರಣ ಕೂಡ ಲಭ್ಯವಾಗಿದೆ.

ವಿರಾಟ್ ಕೊಹ್ಲಿ (Virat Kohli) ಅವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿದ್ದು ಕೇವಲ ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಸ್ವತಃ ಕೊಹ್ಲಿ ಅವರಿಗೂ ಆಘಾತ ಉಂಟುಮಾಡಿದೆ. ಏಕದಿನ ಕ್ರಿಕೆಟ್ನಲ್ಲಿ ನಾಯಕನಾಗಿ (ODI Captain) ಗೆಲುವಿನ ಸರಾಸರಿಯ ವಿಶೇಷ ಸಾಧನೆ ಮಾಡಿ ಕ್ಯಾಪ್ಟನ್ ಪಟ್ಟವನ್ನು ಬಿಟ್ಟುಕೊಡಲು ಮನಸ್ಸಿಲದಿದ್ದರೂ ಬಿಸಿಸಿಐ (BCCI) ಕೊಹ್ಲಿಯನ್ನು ಕಡೆಗಣಿಸಿ ಹೇಳದೆ ಕೇಳದೆ ರೋಹಿತ್ ಶರ್ಮಾ (Rohit Sharma) ಅವರಿಗೆ ಮಹತ್ವದ ಜವಾಬ್ದಾರಿ ನೀಡಿದೆ. ನೀವಾಗಿಯೇ ನಾಯಕನ ಸ್ಥಾನದಿಂದ ಕೆಳಗಿಳಿಯಿರಿ ಎಂದು ಬಿಸಿಸಿಐ ಕೊಹ್ಲಿ ಅವರಿಗೆ 48 ಗಂಟೆಗಳ ಕಾಲಾವಕಾಶ ನೀಡಿತ್ತಂತೆ, ಇದಕ್ಕೆ ವಿರಾಟ್ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ 49ನೇ ಗಂಟೆಯಲ್ಲಿ ಹೊಸ ನಾಯಕನ ಘೋಷಣೆ ಮಾಡಿತಂತೆ. ಈ ಬೇಸರ, ಕೋಪದಿಂದ ಕಿಂಗ್ ಕೊಹ್ಲಿ ಇನ್ನೂ ಹೊರಬಂದಿಲ್ಲ ಎಂಬಂತೆ ಗೋಚರಿಸುತ್ತದೆ. ಇದಕ್ಕೆ ಬಲವಾದ ಕಾರಣ ಕೂಡ ಲಭ್ಯವಾಗಿದೆ. ಮುಂಬೈನಲ್ಲಿ ಆಯೋಜಿಸಿದ್ದ ಪ್ಯಾಕ್ಟೀಸ್ ಸೆಷನ್ಗೆ (Virat Kohli Practice Sessiom) ವಿರಾಟ್ ಹಾಜರಾಗಿಲ್ಲವಂತೆ.
ಹೌದು, ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತ ಡಿಸೆಂಬರ್ 16 ರಂದು ಜೊಹಾನ್ಸ್‌ಬರ್ಗ್‌ಗೆ ತೆರಳಲಿದೆ. ಅಲ್ಲಿ ಮೂರು ಪಂದ್ಯಗಳ ಏಕದಿನ ಮತ್ತು ಟೆಸ್ಟ್ ಸರಣಿಯಲ್ಲಿ ಆಡಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮುಂಬೈನ ಹೊಟೇಲ್ವೊಂದರಲ್ಲಿ ಮೂರು ದಿನಗಳ ಕ್ವಾರಂಟೈನ್ ಆಗಬೇಕಿದೆ. ಈಗಾಗಲೇ ಕೆಲ ಆಟಗಾರರು ಕ್ವಾರಂಟೈನ್ನಲ್ಲಿದ್ದರೆ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಇಂದು ಹೊಟೇಲ್ಗೆ ಪ್ರವೇಶ ಪಡೆಯಲಿದ್ದಾರೆ.
ಕ್ವಾರಂಟೈನ್ಗೂ ಮುನ್ನ ಭಾರತದ ಬಹುತೇಕ ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಆದರೆ, ಯಾವುದೇ ಪ್ರ್ಯಾಕ್ಟೀಸ್ಗೆ ವಿರಾಟ್ ಕೊಹ್ಲಿ ಹಾಜರಿರಲ್ಲವಂತೆ. ಅಲ್ಲದೆ ಇಷ್ಟರವರೆಗೆ ಕ್ವಾರಂಟೈನ್ಗೂ ಒಳಪಟ್ಟಿಲ್ಲ. ಇಂದು ಕೊಹ್ಲಿ ಹೊಟೇಲ್ ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ. “ಕ್ಯಾಂಪ್ ಇರುವ ಬಗ್ಗೆ ಕೊಹ್ಲಿಗೆ ಮಾಹಿತಿ ನೀಡಿದ್ದೆವು. ಆದರೆ, ಅವರು ಬರಲಿಲ್ಲ. ಆಟಗಾರರು ಜೊಹಾನ್ಸ್‌ಬರ್ಗ್‌ಗೆ ತೆರಳುವ ಮುನ್ನ ಮೂರು ದಿನಗಳ ಕಡ್ಡಾಯ ಕ್ವಾರಂಟೈನ್ ಆಗಬೇಕು. ಕೊಹ್ಲಿ ಇಂದು ಬರುಬಹುದು” ಎಂದು ಬಿಸಿಸಿಐ ಮೂಲಗಳು ಇನ್ಸೈಡ್ ಸ್ಪೋರ್ಟ್ಸ್ಗೆ ತಿಳಿಸಿದೆ.
ಅಲ್ಲದೆ ಬಿಸಿಸಿಐಯ ಕೆಲ ಅಧಿಕಾರಿಗಳು ಕೊಹ್ಲಿಗೆ ಕರೆ ಕೂಡ ಮಾಡಿದ್ದರಂತೆ. ಆದರೆ, ಇದಕ್ಕೆ ಕೊಹ್ಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವಂತೆ, ಫೋನ್ ಕೂಡ ರಿಸಿವ್ ಮಾಡಿಲ್ಲ. ಇವರ ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮಾ ಬಳಿ ಕೇಳಿದಾಗ ವಿರಾಟ್ ಫೋನ್ ಸ್ವಿಚ್ ಆಫ್ ಆಗಿದೆ ಎಂದಿದ್ದಾರೆ ಎಂದು ಇನ್ಸೈಡ್ ಸ್ಫೋರ್ಟ್ಸ್ ಹೇಳಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಈಗಾಗಲೇ ಭಾರತ ತಂಡ ಪ್ರಕಟವಾಗಿದೆ. ಆದರೆ, ಏಕದಿನ ತಂಡ ಇನ್ನಷ್ಟೆ ಆಯ್ಕೆಯಾಗಬೇಕಿದೆ. ಭಾರತ ತಂಡ ಆಫ್ರಿಕಾ ವಿರುದ್ಧ ಡಿಸೆಂಬರ್ 26 ರಂದು ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ. ಜನವರಿ 15 ರಂದು ಟೆಸ್ಟ್ ಸರಣಿಯು ಕೊನೆಗೊಳ್ಳುವವರೆಗೆ ತಂಡವು ಬಯೋ ಬಬಲ್‌ನಲ್ಲಿ ಇರಲಿದೆ. ಆದರೆ ಏಕದಿನ ಸರಣಿಯಲ್ಲಿ ಭಾಗವಹಿಸುವ ಹೆಚ್ಚುವರಿ ಸದಸ್ಯರು ಎಂಟು ದಿನಗಳ ಕಾಲ ಬಯೋ ಬಬಲ್‌ನಲ್ಲಿ ಕಳೆಯ ಬೇಕಾಗುತ್ತದೆ. ಹೀಗಾಗಿ ಆಟಗಾರರು ಒಟ್ಟು 44 ದಿನಗಳ ಕಾಲ ಬಯೋ ಬಬಲ್‌ನಲ್ಲಿ ಉಳಿಯುತ್ತಾರೆ.
Venkatesh Iyer: ಸ್ಫೊಟಕ ಶತಕ ಸಿಡಿಸಿದ ವೇಳೆ ವೆಂಕಟೇಶ್ ಅಯ್ಯರ್ ಸಂಭ್ರಮಿಸಿದ ಸ್ಟೈಲ್ ನೋಡಿ: ವೈರಲ್ ವಿಡಿಯೋ
Virat Kohli: ವಿದೇಶಿ ತಂಡಕ್ಕೆ ನಡುಕ ಹುಟ್ಟಿಸಿದೆ ವಿರಾಟ್ ಕೊಹ್ಲಿ ಬಗ್ಗೆ ಗೌತಮ್ ಗಂಭೀರ್ ನೀಡಿದ ಆ ಒಂದು ಹೇಳಿಕೆ
(Virat Kohli skips practice match session against South Africa ahead of step down as team India captain)
Published On - 11:01 am, Mon, 13 December 21
