Rohit Sharma: ತಂಡಕ್ಕೆ ಹೋರಾಟದ ಮನೋಭಾವ ಕಲಿಸಿದ್ದಾರೆ! ಕೊಹ್ಲಿ ನಾಯಕತ್ವವನ್ನು ಹೊಗಳಿದ ರೋಹಿತ್
Rohit Sharma: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ್ದು ನಮಗೆ ಉತ್ತಮ ಅನುಭವ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ನಾವು ಒಟ್ಟಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ ಮತ್ತು ಪ್ರತಿ ಸಂದರ್ಭ ಮತ್ತು ಕ್ಷಣವನ್ನು ಆನಂದಿಸಿದ್ದೇವೆ.

ಡಿಸೆಂಬರ್ 8 ರಂದು, ರೋಹಿತ್ ಶರ್ಮಾ ಸಂಪೂರ್ಣವಾಗಿ ಟೀಮ್ ಇಂಡಿಯಾದ ವೈಟ್ ಬಾಲ್ ನಾಯಕರಾಗಿ ಆಯ್ಕೆಯಾದರು. ರೋಹಿತ್ ಈಗಾಗಲೇ ಟಿ20 ನಾಯಕತ್ವವನ್ನು ವಹಿಸಿಕೊಂಡಿದ್ದರು. ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಈ ಕಮಾಂಡ್ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಸುಮಾರು 5 ವರ್ಷಗಳ ಕಾಲ ಟೀಮ್ ಇಂಡಿಯಾದ ವೈಟ್ ಬಾಲ್ ನಾಯಕರಾಗಿದ್ದರು. 2017 ರಲ್ಲಿ, ಅವರು ಭಾರತೀಯ ತಂಡದ ಬಿಳಿ ಚೆಂಡಿನ ನಾಯಕತ್ವವನ್ನು ಪೂರ್ಣ ಪ್ರಮಾಣದ ರೀತಿಯಲ್ಲಿ ವಹಿಸಿಕೊಂಡರು. ಆದರೆ, 2021ರ ಅಂತ್ಯದ ವೇಳೆಗೆ ಈಗ ಅಧಿಕಾರ ರೋಹಿತ್ ಶರ್ಮಾ ಕೈಗೆ ಹಸ್ತಾಂತರಿಸಲಾಗಿದೆ. ಮೆನ್ ಇನ್ ಬ್ಲೂ ತಂಡದ ಪೂರ್ಣ ಸಮಯದ ನಾಯಕನಾದ ನಂತರ ರೋಹಿತ್ ವಿರಾಟ್ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಅವರ ನಾಯಕತ್ವದ ಅವಧಿಯನ್ನು ಶ್ಲಾಘಿಸಿದ ಅವರು ತಂಡಕ್ಕೆ ಹೋರಾಟವನ್ನು ಕಲಿಸಿದರು ಎಂದು ಹೇಳಿದರು. ಮೈದಾನಕ್ಕೆ ಬಂದಾಗಲೆಲ್ಲ ಮುಂಚೂಣಿಯಿಂದ ಮುನ್ನಡೆಸುವ ಉದ್ದೇಶ ಇಟ್ಟುಕೊಂಡಿದ್ದರು ಎಂದಿದ್ದಾರೆ.
ಬಿಸಿಸಿಐ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ರೋಹಿತ್ ಶರ್ಮಾ ಮಾತನಾಡಿದ್ದಾರೆ. ಅವರು 5 ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದರು. ಅವರು ಪ್ರತಿ ಪಂದ್ಯದಲ್ಲೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದರು. ಮತ್ತು ಇಡೀ ತಂಡಕ್ಕೆ ಅದೇ ಸಂದೇಶವನ್ನು ನೀಡಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ಹಿಂತಿರುಗಿ ನೋಡಲಿಲ್ಲ ಎಂದಿದ್ದಾರೆ.
ವಿರಾಟ್ ನಾಯಕತ್ವದಲ್ಲಿ ಆಡಿದ್ದು ಉತ್ತಮ ಅನುಭವ: ರೋಹಿತ್ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ್ದು ನಮಗೆ ಉತ್ತಮ ಅನುಭವ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ನಾವು ಒಟ್ಟಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ ಮತ್ತು ಪ್ರತಿ ಸಂದರ್ಭ ಮತ್ತು ಕ್ಷಣವನ್ನು ಆನಂದಿಸಿದ್ದೇವೆ. ಈಗ ನಾವು ಭವಿಷ್ಯದಲ್ಲಿಯೂ ಅದೇ ರೀತಿ ಮಾಡುತ್ತೇವೆ. ನಾವು ತಂಡವಾಗಿ ಉತ್ತಮಗೊಳ್ಳಬೇಕು ಹೀಗಾಗಿ ನಮ್ಮ ಗಮನವು ಅದರ ಮೇಲೆ ಕೇಂದ್ರೀಕೃತವಾಗಿದೆ.
ನೀವು ಭಾರತಕ್ಕಾಗಿ ಕ್ರಿಕೆಟ್ ಆಡುವಾಗ, ನಿಮ್ಮ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ಅನೇಕ ಜನರು ಧನಾತ್ಮಕ ಮತ್ತು ಋಣಾತ್ಮಕವಾಗಿ ಮಾತನಾಡುತ್ತಾರೆ. ಆದರೆ ಕ್ರಿಕೆಟಿಗನಾಗಿ ನನ್ನ ಕೆಲಸವೆಂದರೆ ಆಟದ ಮೇಲೆ ಕೇಂದ್ರೀಕರಿಸುವುದು. ಏಕೆಂದರೆ ಜನರು ಏನು ಹೇಳುತ್ತಿದ್ದಾರೆ ಎಂಬುದನ್ನು ನಾವು ನಿಯಂತ್ರಿಸಲಾಗುವುದಿಲ್ಲ, ಅಂತಹ ಪರಿಸ್ಥಿತಿಯಲ್ಲಿ, ಇಡೀ ತಂಡವು ತನ್ನ ಆಟದ ಮೇಲೆ ಕೇಂದ್ರೀಕರಿಸುತ್ತದೆ ಎಂದಿದ್ದಾರೆ.
Published On - 2:43 pm, Mon, 13 December 21
