ದೆಹಲಿ, ಎನ್‌ಸಿಆರ್‌ನಲ್ಲಿ ಭೂಕಂಪ ಸಂಭವಿಸಿದೆ. ಪಂಜಾಬ್, ಚಂಡೀಗಢ, ಗಾಜಿಯಾಬಾದ್ನಲ್ಲೂ ಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನ ಎನ್ನಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 6.1 ತೀವ್ರತೆಯ ಪ್ರಬಲ ಭೂಕಂಪವೇ ಸಂಭವಿಸಿದೆ ಎನ್ನಲಾಗಿದೆ. ಭೂಕಂಪ ಸಂಭವಿಸಿದ ತಕ್ಷಣ ಮನೆ, ಕಚೇರಿಯಿಂದ ಜನರು ಹೊರಗಡೆ ಓಡಿ ಬಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಪಾಂಚಲ್ ಪ್ರದೇಶದ ದಕ್ಷಿಣದಲ್ಲಿಯೂ ಭೂಕಂಪದ ಅನುಭವವಾಗಿದೆ. ಈ ಭೂಕಂಪದ ಕಂಪನಗಳು ಭಾರತ ಮಾತ್ರವಲ್ಲದೆ ನೆರೆಯ ಪಾಕಿಸ್ತಾನದಲ್ಲೂ ಸಂಭವಿಸಿದೆ. ಭೂಮಿಯು ಟೆಕ್ಟೋನಿಕ್ ಪ್ಲೇಟ್ಗಳ ಮೇಲೆ ನೆಲೆಗೊಂಡಿದೆ.
ಭೂಕಂಪದಿಂದ ಯಾವುದೇ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ. ಪಾಕಿಸ್ತಾನದ ಲಾಹೋರ್ ಮತ್ತು ಪೂಂಚ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ.
ಇತ್ತೀಚಿನ ದಿನಗಳಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಭೂಕಂಪನಗಳು ನಿರಂತರವಾಗಿ ಸಂಭವಿಸುತ್ತಿವೆ ಎಂಬುದು ಗಮನಾರ್ಹ. ದೆಹಲಿ-ಎನ್‌ಸಿಆರ್ ಭೂಕಂಪನ ವಲಯ 4 ರಲ್ಲಿದೆ. ಭೂಕಂಪದ ದೃಷ್ಟಿಕೋನದಿಂದ ಇದನ್ನು ಅತ್ಯಂತ ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:04 pm, Thu, 11 January 24