ನವದೆಹಲಿ, ಮೇ.19: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ(Ebrahim Raisi) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ (ಮೇ.19) ವಾಯುವ್ಯ ಇರಾನ್ನ ಜೋಲ್ಫಾದಲ್ಲಿ ಪತನವಾಗಿದೆ ಎಂದು ಇರಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿಕೂಲ ಹವಾಮಾನ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಅಧ್ಯಕ್ಷ ರೈಸಿ ಜತೆ ಇರಾನ್ ವಿದೇಶಾಂಗ ಸಚಿವ ಹುಸೇನ್ ಕೂಡ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ದಟ್ಟ ಮಂಜು ಆವರಿಸಿರುವುದರಿಂದ ಹೆಲಿಕಾಪ್ಟರ್ ಅವಘಡದ ಶಂಕೆ ವ್ಯಕ್ತವಾಗಿದ್ದು, ಇರಾನ್ ನಾಯಕರ ಜೀವಕ್ಕೆ ಕುತ್ತು ಉಂಟಾಗಿರುವ ಆತಂಕ ಎದುರಾಗಿದೆ. ಈ ಹಿನ್ನಲೆ ಭೂಮಾರ್ಗದ ಮೂಲಕ ತಲುಪಿ ಕಾರ್ಯಾಚರಣೆ ನಡೆಸಲು ತೀರ್ಮಾನ ಮಾಡಲಾಗಿದೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿರುವ ವಿಷಯ ತಿಳಿದು ಪ್ರಧಾನಿ ನರೇಂದ್ರ ಮೋದಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇಬ್ರಾಹಿಂ ರೈಸಿ ಅವರು ಸುರಕ್ಷಿತವಾಗಿ ಬರಲೆಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
Deeply concerned by reports regarding President Raisi’s helicopter flight today. We stand in solidarity with the Iranian people in this hour of distress, and pray for well being of the President and his entourage.
— Narendra Modi (@narendramodi) May 19, 2024
ಇದನ್ನೂ ಓದಿ:Malaysian Choppers Crash: ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್ಗಳ ಪತನ, 10 ಮಂದಿ ಸಾವು
63 ವರ್ಷದ ರೈಸಿ ಅವರು 2021 ರಲ್ಲಿ ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರು ಅಮೆರಿಕಾ ಹಾಗೂ ಇಸ್ರೇಲ್ನ ಕಟು ವಿರೋಧಿಯಾಗಿದ್ದಾರೆ. ಜಾಗತಿಕವಾಗಿ ಖಟ್ಟರ್ ಮುಸ್ಲಿಂ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಈ ರೈಸಿ ಈ ಹಿಂದೆ ದೇಶದ ನ್ಯಾಯಾಂಗವನ್ನು ಮುನ್ನಡೆಸಿದ್ದ ಕಟುವಾದಿ ಇತ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:28 pm, Sun, 19 May 24