ಹೆಸರು ಮತ್ತು ಚಿಹ್ನೆ ಬಗ್ಗೆ ನೋಟಿಸ್‌ಗೆ ಉತ್ತರ ನೀಡಲು ಎನ್​​ಸಿಪಿಯ ಶರದ್ ಪವಾರ್, ಅಜಿತ್ ಬಣಗಳಿಗೆ 3 ವಾರಗಳ ಕಾಲಾವಕಾಶ

|

Updated on: Aug 16, 2023 | 8:37 PM

ಶರದ್ ಪವಾರ್ ನೇತೃತ್ವದ ಬಣವು ಬಂಡಾಯ ಗುಂಪಿನ ಹಕ್ಕುಗಳನ್ನು ಚುನಾವಣಾ ಸಮಿತಿಯು ಅರಿಯುವವರೆಗೆ ಚುನಾವಣಾ ಆಯೋಗವನ್ನು ಸ್ಥಳಾಂತರಿಸದಿರಲು ನಿರ್ಧರಿಸಿದೆ. ಜುಲೈ 3 ರಂದು, ಏಕನಾಥ್ ಶಿಂಧೆ-ದೇವೇಂದ್ರ ಫಡ್ನವಿಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಿತ್ ಪವಾರ್ ಸೇರಿದಂತೆ ಒಂಬತ್ತು ಎನ್‌ಸಿಪಿ ಶಾಸಕರ ವಿರುದ್ಧ ಪವಾರ್ ಬಣ ಅನರ್ಹಗೊಳಿಸುವಂತೆ ಮನವಿ ಮಾಡಿತ್ತು.

ಹೆಸರು ಮತ್ತು ಚಿಹ್ನೆ ಬಗ್ಗೆ ನೋಟಿಸ್‌ಗೆ ಉತ್ತರ ನೀಡಲು ಎನ್​​ಸಿಪಿಯ ಶರದ್ ಪವಾರ್, ಅಜಿತ್ ಬಣಗಳಿಗೆ 3 ವಾರಗಳ ಕಾಲಾವಕಾಶ
ಶರದ್ ಪವಾರ್- ಅಜಿತ್ ಪವಾರ್
Follow us on

ಮುಂಬೈ ಆಗಸ್ಟ್ 16: ಪಕ್ಷದ ಹೆಸರು ಮತ್ತು ಅಧಿಕೃತ ಚಿಹ್ನೆಗೆ ಸಂಬಂಧಿಸಿದ ನೋಟಿಸ್‌ಗೆ ಪ್ರತಿಕ್ರಿಯಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (Nationalist Congress Party) ಬಣಗಳಿಗೆ ಚುನಾವಣಾ ಆಯೋಗವು (Election Commission) ಬುಧವಾರ ಮೂರು ವಾರಗಳ ಕಾಲಾವಕಾಶ ನೀಡಿದೆ. ಶರದ್ ಪವಾರ್(Sharad Pawar) ಬಣ ಚುನಾವಣಾ ಸಮಿತಿಗೆ ಪತ್ರ ಬರೆದು ನಾಲ್ಕು ವಾರಗಳ ಕಾಲಾವಕಾಶ ಕೋರಿತ್ತು. ಎರಡೂ ಬಣಗಳು ಸೆಪ್ಟೆಂಬರ್ 8 ರಂದು ನೋಟಿಸ್‌ಗೆ ಉತ್ತರಿಸಬೇಕಾಗುತ್ತದೆ.  ಜುಲೈ 27 ರಂದು, ಚುನಾವಣಾ ಸಮಿತಿಯು ಅಜಿತ್ ಪವಾರ್ ಮತ್ತು ಶರದ್ ಪವಾರ್ ಎರಡೂ ಬಣಗಳಿಗೆ ನೋಟಿಸ್ ಜಾರಿ ಮಾಡಿದ್ದು, ಆಗಸ್ಟ್ 17 ರೊಳಗೆ ಅಂದರೆ ನಾಳೆಯೊಳಗೆ ಉತ್ತರವನ್ನು ನೀಡುವಂತೆ ಕೇಳಿತ್ತು. ಚುನಾವಣಾ ಸಮಿತಿಯು 40 ಸಂಸದರು, ಶಾಸಕರು ಮತ್ತು ಎಂಎಲ್‌ಸಿಗಳಿಂದ ಅಫಿಡವಿಟ್‌ಗಳನ್ನು ಸ್ವೀಕರಿಸಿದೆ. ಇತ್ತ ಬಂಡಾಯ ಬಣದ ಸದಸ್ಯರ ನಿರ್ಣಯದೊಂದಿಗೆ ಅಜಿತ್ ಪವಾರ್ ಅವರನ್ನು ಎನ್‌ಸಿಪಿ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದೆ.

ಶರದ್ ಪವಾರ್ ನೇತೃತ್ವದ ಬಣವು ಬಂಡಾಯ ಗುಂಪಿನ ಹಕ್ಕುಗಳನ್ನು ಚುನಾವಣಾ ಸಮಿತಿಯು ಅರಿಯುವವರೆಗೆ ಚುನಾವಣಾ ಆಯೋಗವನ್ನು ಸ್ಥಳಾಂತರಿಸದಿರಲು ನಿರ್ಧರಿಸಿದೆ. ಜುಲೈ 3 ರಂದು, ಏಕನಾಥ್ ಶಿಂಧೆ-ದೇವೇಂದ್ರ ಫಡ್ನವಿಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಿತ್ ಪವಾರ್ ಸೇರಿದಂತೆ ಒಂಬತ್ತು ಎನ್‌ಸಿಪಿ ಶಾಸಕರ ವಿರುದ್ಧ ಪವಾರ್ ಬಣ ಅನರ್ಹಗೊಳಿಸುವಂತೆ ಮನವಿ ಮಾಡಿತ್ತು.

ಮೂರು ದಿನಗಳ ನಂತರ, ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಮತ್ತು ಪ್ರಧಾನ ಕಾರ್ಯದರ್ಶಿ ಸುನಿಲ್ ತಟ್ಕರೆ ಸೇರಿದಂತೆ ಎಲ್ಲಾ ಒಂಬತ್ತು ಶಾಸಕರನ್ನು ಪವಾರ್ ಬಣ ಉಚ್ಚಾಟಿಸಿತು. ದೆಹಲಿಯಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಪ್ರತ್ಯೇಕ ಬೆಳವಣಿಗೆಯಲ್ಲಿ, ಪವಾರ್ ಅವರು ತಮ್ಮ ಸೋದರಳಿಯ ಅಜಿತ್ ಪವಾರ್ ಅವರೊಂದಿಗೆ ಪುಣೆಯಲ್ಲಿ ಸಭೆಯನ್ನು ನಡೆಸಿದ್ದು ಇದು ಹೆಚ್ಚಿನ ಊಹಾಪೋಹಗಳನ್ನು ಹುಟ್ಟುಹಾಕಿದ. ಕೈಗಾರಿಕೋದ್ಯಮಿಯೊಬ್ಬರ ಮನೆಯಲ್ಲಿ ಮೂರು ಗಂಟೆಗಳ ಕಾಲ ಸುದೀರ್ಘ ಸಭೆ ನಡೆದಿತ್ತು.

ಇದನ್ನೂ ಓದಿ: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರನ್ನು ತುಳಸಿ ಭಾಯಿ ಎಂದು ಕರೆದು ಸ್ವಾಗತಿಸಿದ ಮೋದಿ, ನನಗೆ ಆ ಹೆಸರು ಇಷ್ಟ ಎಂದ ಘೆಬ್ರೆಯೆಸಸ್

ಸಭೆಯ ಬಗ್ಗೆ ಕೇಳಿದಾಗ, ಪವಾರ್ ಇದು ರಹಸ್ಯ ಸಮಾಲೋಚನೆ ಅಲ್ಲ ಎಂದು ಹೇಳಿದ್ದಾರೆ. ಅದೇ ವೇಳೆ ತಾವು ಎಂದಿಗೂ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.“ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷನಾಗಿ ನಾನು ನನ್ನ ಪಕ್ಷ (ಎನ್‌ಸಿಪಿ) ಬಿಜೆಪಿಯೊಂದಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಬಿಜೆಪಿಯೊಂದಿಗಿನ ಯಾವುದೇ ಸಂಬಂಧವು ಎನ್‌ಸಿಪಿಯ ರಾಜಕೀಯ ನೀತಿಗೆ ಹೊಂದಿಕೆಯಾಗುವುದಿಲ್ಲ” ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ