ಇವಿಎಂ, ವಿವಿ ಪ್ಯಾಟ್ ಮೇಲೆ ಅನುಮಾನ: ಚುನಾವಣೆ ಆಯೋಗದಿಂದ ದೇಶವ್ಯಾಪಿ ಜಾಗೃತಿ ಕಾರ್ಯಕ್ರಮ

ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಬಗ್ಗೆ ಹಲವರಲ್ಲಿ ಅನುಮಾನ, ಗೊಂದಲಗಳು ಇವೆ. ಇದನ್ನು ಪರಿಹರಿಸುವ ಸಲುವಾಗಿ ಕೇಂದ್ರ ಚುನಾವಣಾ ಆಯೋಗವು ಇವಿಎಂ) ಬಳಕೆ ಹಾಗೂ ವಿವಿ ಪ್ಯಾಟ್ ಕಾರ್ಯವೈಖರಿ ಕುರಿತಂತೆ ಪ್ರಾತ್ಯಕ್ಷತೆ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇವಿಎಂ, ವಿವಿ ಪ್ಯಾಟ್ ಮೇಲೆ ಅನುಮಾನ: ಚುನಾವಣೆ ಆಯೋಗದಿಂದ ದೇಶವ್ಯಾಪಿ ಜಾಗೃತಿ ಕಾರ್ಯಕ್ರಮ
Follow us
|

Updated on: Jan 18, 2024 | 10:06 PM

ನವದೆಹಲಿ, (ಜನವರಿ 18): ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಹಾಗೂ ವಿವಿ ಪ್ಯಾಟ್​ ಬಗ್ಗೆ ಸೃಷ್ಟಿಯಾಗಿರುವ ಅನುಮಾನ, ಗೊಂದಲ ನಿವಾರಿಸಲು ಭಾರತದ ಚುನಾವಣಾ ಆಯೋಗವು ಒಂದು ಮಹತ್ವದ ಕಾರ್ಯವನ್ನು ಹಮ್ಮಿಕೊಂಡಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಚುನಾವಣಾ ಆಯೋಗವು EVM ಮತ್ತು VVPAT ಗಳ ಕುರಿತು ರಾಷ್ಟ್ರವ್ಯಾಪಿ ಜಾಗೃತಿ ಕಾರ್ಯಕ್ರಮವನ್ನು(EVMs and VVPATs Awareness Program) ಪ್ರಾರಂಭಿಸಿದೆ. ಇವಿಎಂ ಹೇಗೆಲ್ಲಾ ಕಾರ್ಯನಿರ್ವಹಿಸಲಿದೆ ಅಂತೆಲ್ಲಾ ಸಾರ್ವಜನಿಕರಿಗೆ ತೋರಿಸಲಾಗುತ್ತದೆ.

ಈ ಜಾಗೃತಿ ಕಾರ್ಯಕ್ರಮವು 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 613 ಜಿಲ್ಲೆಗಳ 3,464 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮತ್ತು ಜಾಗೃತಿ ಮೂಡಿಸುವ ಕಾರ್ಯ ನಡೆಯಲಿದೆ ಎಂದು ಚುನಾವಣಾ ಆಯೋಗ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಇದರೊಂದಿಗೆ ಚುನಾವಣಾ ಆಯೋಗ ಲೋಕಸಭಾ ಚುನಾವಣೆಗೂ ಮುನ್ನವೇ ಸದ್ಯ ದೇಶದಲ್ಲಿ ಜಾರಿಯಲ್ಲಿರುವ ಇವಿಎಂ ಯಂತ್ರಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳಿಂದ ಜನರನ್ನು ಹೊರ ತರುವ ಪ್ರಯತ್ನ ಮಾಡುತ್ತಿದೆ.

ಇನ್ನು ಸಾರ್ವಜನಿಕರಿಗೆ ಇವಿಎಂ/ವಿವಿಪ್ಯಾಟ್ ಹೇಗೆಲ್ಲಾ ಕಾರ್ಯ ನಿರ್ವಹಿಸಲಿವೆ ಎನ್ನುವುದನ್ನು ಪ್ರಾತ್ಯಕ್ಷಿಕೆಯಾಗಿ ತೋರಿಸಲು 3,500 ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆ ಕೇಂದ್ರಗಳು ಮತ್ತು ಸುಮಾರು 4,250 ಮೊಬೈಲ್ ವ್ಯಾನ್‌ಗಳನ್ನು ಸ್ಥಾಪಿಸಲಾಗಿದೆ. ಇನ್ನು ಈ ಜಾಗೃತಿ ಕಾರ್ಯಕ್ರಮದ ವ್ಯಾಪ್ತಿಯನ್ನು ಹೆಚ್ಚಿಸಲು ಸಿಇಒಗಳು ಮತ್ತು ಡಿಇಒಗಳು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಲಿದ್ದಾರೆ ಎಂದು ಆಯೋಗ ತಿಳಿಸಿದೆ.

ಈ ಹಿಂದೆ ಲೋಕಸಭಾ ಚುನಾವಣೆಗಳಲ್ಲಿ ಇವಿಎಂ ಕಾರ್ಯನಿರ್ವಹಣೆ ಬಗ್ಗೆ ಹಲವು ರಾಜಕೀಯ ಪಕ್ಷಗಳು ಆಕ್ಷೇಪ ಎತ್ತಿವೆ. ಇದೀಗ ಈ ಬಾರಿಯ ಲೋಕಸಭಾ ಚುನಾವಣೆಗೂ ಮುನ್ನವೇ ಕೇಂದ್ರ ಚುನಾವಣೆ ಆಯೋಗವು, ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ಯಂತ್ರದ ಕಾರ್ಯ ವೈಖರಿ ಕುರಿತು ಪ್ರಾತ್ಯಕ್ಷಿಕೆ ನಡೆಸಲು ಮುಂದಾಗಿದೆ.