ಕ್ಯಾಪ್ರಿಕೊರ್ನಿಯನ್ ಕಂಪನಿ ಮೇಲೆ ಇಡಿ ದಾಳಿ; ವಾಷಿಂಗ್ ಮಷೀನ್ನಲ್ಲಿ ಸಿಕ್ತು ಕಂತೆ-ಕಂತೆ ಹಣ
ಕ್ಯಾಪ್ರಿಕೊರ್ನಿಯನ್ ಶಿಪ್ಪಿಂಗ್ ಆ್ಯಂಡ್ ಲಾಜಿಸ್ಟಿಕ್ ಪ್ರೈವೆಟ್ ಲಿಮಿಟೆಡ್ ಕಂಪನಿ ಮತ್ತು ಅದರ ನಿರ್ದೇಶಕರು, ಪಾಲುದಾರ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಈ ವೇಳೆ ವಾಷಿಂಗ್ ಮೆಷೀನ್ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ.
ನವದೆಹಲಿ, ಮಾ.26: ಕ್ಯಾಪ್ರಿಕೊರ್ನಿಯನ್ ಶಿಪ್ಪಿಂಗ್ ಆ್ಯಂಡ್ ಲಾಜಿಸ್ಟಿಕ್ ಪ್ರೈವೆಟ್ ಲಿಮಿಟೆಡ್ ಕಂಪನಿ ಮತ್ತು ಅದರ ನಿರ್ದೇಶಕರು, ಪಾಲುದಾರ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯದ (Enforcement Directorate-ED) ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಈ ವೇಳೆ ದಾಖಲೆಗಳು, ಡಿಜಿಟಲ್ ಸಾಧನಗಳು ಪತ್ತೆಯಾಗಿದ್ದು, ವಾಷಿಂಗ್ ಮೆಷೀನ್ನಲ್ಲಿ ಬಚ್ಚಿಟ್ಟಿದ್ದ ಕಂತೆ ಕಂತೆ ಹಣವೂ ಇಡಿ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಬೃಹತ್ ಕಾರ್ಯಾಚರಣೆ ನಡೆಸಿದೆ. ಫೆಮಾ ಕಾಯಿದೆ ಉಲ್ಲಂಘನೆಯ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಿದ್ದು, ಕೋಟ್ಯಾಂತರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಇ.ಡಿ. ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಮಾಹಿತಿ ನೀಡಿದ್ದು, ವಾಷಿಂಗ್ ಮೆಷಿನ್‌ನಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಫೋಟೋ ಬಿಡುಗಡೆ ಮಾಡಿದೆ.
ಇದನ್ನೂ ಓದಿ: Arvind Kejriwal: ಇಡಿ ಕಸ್ಟಡಿಯಿಂದಲೇ ಎರಡನೇ ಸರ್ಕಾರಿ ಆದೇಶ ಹೊರಡಿಸಿದ ಸಿಎಂ ಅರವಿಂದ್ ಕೇಜ್ರಿವಾಲ್
ಫೆಮಾ ಕಾಯಿದೆಯ ಉಲ್ಲಂಘನೆಯ ಆರೋಪದಲ್ಲಿ ಕ್ಯಾಪ್ರಿಕೊರ್ನಿಯನ್ ಶಿಪ್ಪಿಂಗ್ ಆ್ಯಂಡ್ ಲಾಜಿಸ್ಟಿಕ್ ಪ್ರೈ. ಲಿ. ಮತ್ತು ಇದರ ನಿರ್ದೇಶಕರಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಸಂಜಯ್ ಗೋಸ್ವಾಮಿ ಮತ್ತು ಇದರ ಪಾಲುದಾರ ಘಟಕಗಳಾದ ಲಕ್ಷ್ಮಿಟನ್ ಮ್ಯಾರಿಟೈಮ್, ಹಿಂದೂಸ್ತಾನ್ ಇಂಟರ್ನ್ಯಾಷನಲ್, ರಾಜನಂದಿನಿ ಆವರಣದಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ಜಾರಿನಿರ್ದೇಶನಾಲಯ (ಇಡಿ) ಎಕ್ಸ್ ಪೋಸ್ಟ್
ED has conducted searches under the provisions of FEMA,1999 at the premises of M/s. Capricornian Shipping & Logistics Pvt Ltd and its directors Vijay Kumar Shukla and Sanjay Goswami and associated entities M/s. Laxmiton Maritime, M/s. Hindustan International, M/s. Rajnandini… pic.twitter.com/0EDzrjrlRJ
— ED (@dir_ed) March 26, 2024
ಅಲ್ಲದೆ, ಮೆಟಲ್ಸ್ ಲಿಮಿಟೆಡ್, ಸ್ಟಾವರ್ಟ್ ಅಲಾಯ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಭಾಗ್ಯನಗರ ಲಿಮಿಟೆಡ್, ವಿನಾಯಕ್ ಸ್ಟೀಲ್ಸ್ ಲಿಮಿಟೆಡ್, ವಶಿಷ್ಟ ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕರು/ಪಾಲುದಾರರಾದ ಸಂದೀಪ್ ಗಾರ್ಗ್, ವಿನೋದ್ ಕೇಡಿಯಾ ಮತ್ತು ಇತರರಿಗೆ ಸಂಬಂಧಪಟ್ಟ ದೆಹಲಿಯ, ಹೈದರಾಬಾದ್, ಮುಂಬೈ, ಕುರುಕ್ಷೇತ್ರ ಮತ್ತು ಕೋಲ್ಕತ್ತಾದಲ್ಲಿನ ವಿವಿಧ ಸ್ಥಳಗಳಲ ಮೇಲೂ ದಾಳಿ ನಡೆಸಿ ಶೋಧ ನಡೆಸಲಾಗಿದೆ.
ಶೋಧಕಾರ್ಯದ ಸಮಯದಲ್ಲಿ, ವಿವಿಧ ದೋಷಾರೋಪಣೆಯ ದಾಖಲೆಗಳು, ಡಿಜಿಟಲ್ ಸಾಧನಗಳು ಮತ್ತು 2.54 ಕೋಟಿ ರೂಪಾಯಿ ಪತ್ತೆಯಾಗಿದ್ದು, ಇದನ್ನು ವಶಪಡಿಸಿಕೊಳ್ಳಲಾಗಿದೆ. 47 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಇಡಿ ಪೋಸ್ಟ್ನಲ್ಲಿ ತಿಳಿಸಲಾಗಿದೆ. ಇದಕ್ಕೂ ಮುನ್ನ 124.57 ಕೋಟಿ ರೂಪಾಯಿ ಮೌಲ್ಯದ ಅಸ್ಥಿರ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:23 pm, Tue, 26 March 24