S Jagathrakshakan: ಫೆಮಾ ಪ್ರಕರಣ: ಡಿಎಂಕೆ ಸಂಸದ ಎಸ್ ಜಗತ್ರಕ್ಷಕನ್ ಕುಟುಂಬಕ್ಕೆ ₹908 ಕೋಟಿ ದಂಡ ವಿಧಿಸಿದ ಇಡಿ

ಚೆನ್ನೈನಲ್ಲಿ ಜಾರಿ ನಿರ್ದೇಶನಾಲಯವು ತಮಿಳುನಾಡು ಸಂಸದ ಮತ್ತು ಉದ್ಯಮಿ ಜಗತ್ರಕ್ಷಕನ್ ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿತ ಭಾರತೀಯ ಘಟಕಗಳ ವಿರುದ್ಧ ಫೆಮಾ ಅಡಿಯಲ್ಲಿ ತನಿಖೆ ನಡೆಸಿತು. ಫೆಮಾದ ಸೆಕ್ಷನ್ 37ಎ ಅಡಿಯಲ್ಲಿ ವಶಪಡಿಸಿಕೊಂಡ 89.19 ಕೋಟಿ ರೂ.ಗಳನ್ನು ಜಪ್ತಿ ಮಾಡಲು ಆದೇಶಿಸಲಾಗಿದೆ ಎಂದು ಇಡಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

S Jagathrakshakan: ಫೆಮಾ ಪ್ರಕರಣ: ಡಿಎಂಕೆ ಸಂಸದ ಎಸ್ ಜಗತ್ರಕ್ಷಕನ್ ಕುಟುಂಬಕ್ಕೆ ₹908 ಕೋಟಿ ದಂಡ ವಿಧಿಸಿದ ಇಡಿ
ಜಗತ್ರಕ್ಷಕನ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 28, 2024 | 5:44 PM

ದೆಹಲಿ ಆಗಸ್ಟ್ 28: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಪ್ರಕರಣದಲ್ಲಿ ಡಿಎಂಕೆ ಸಂಸದ ಎಸ್ ಜಗತ್ರಕ್ಷಕನ್ (S Jagathrakshakan) ಮತ್ತು ಅವರ ಕುಟುಂಬಕ್ಕೆ ಜಾರಿ ನಿರ್ದೇಶನಾಲಯ (ED ) ₹908 ಕೋಟಿ ದಂಡ ವಿಧಿಸಿದೆ. ಈ ಮೊತ್ತದಲ್ಲಿ ₹89 ಕೋಟಿ ಮೌಲ್ಯದ ಜಪ್ತಿ ಆಸ್ತಿ ಸೇರಿದೆ ಎಂದು ಸಂಸ್ಥೆ ತಿಳಿಸಿದೆ. ಚೆನ್ನೈನಲ್ಲಿ ಜಾರಿ ನಿರ್ದೇಶನಾಲಯವು ತಮಿಳುನಾಡು ಸಂಸದ ಮತ್ತು ಉದ್ಯಮಿ ಜಗತ್ರಕ್ಷಕನ್ ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿತ ಭಾರತೀಯ ಘಟಕಗಳ ವಿರುದ್ಧ ಫೆಮಾ ಅಡಿಯಲ್ಲಿ ತನಿಖೆ ನಡೆಸಿತು. ಫೆಮಾದ ಸೆಕ್ಷನ್ 37ಎ ಅಡಿಯಲ್ಲಿ ವಶಪಡಿಸಿಕೊಂಡ 89.19 ಕೋಟಿ ರೂ.ಗಳನ್ನು ಜಪ್ತಿ ಮಾಡಲು ಆದೇಶಿಸಲಾಗಿದೆ ಎಂದು ಇಡಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಹೆಚ್ಚುವರಿಯಾಗಿ, ಸೋಮವಾರ ಹೊರಡಿಸಿದ ತೀರ್ಪಿನ ಆದೇಶದ ಮೂಲಕ ಸರಿಸುಮಾರು ₹ 908 ಕೋಟಿ ದಂಡವನ್ನು ವಿಧಿಸಲಾಗಿದೆ ಎಂದು ಅದು ಹೇಳಿದೆ. “ಫೆಮಾದ ಸೆಕ್ಷನ್ 37 ಎ ಪ್ರಕಾರ ವಶಪಡಿಸಿಕೊಂಡ ₹ 89.19 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಲಾಗಿದೆ. 26/08/2024 ರ ತೀರ್ಪಿನ ಆದೇಶದ ಪ್ರಕಾರ ₹ 908 ಕೋಟಿ ದಂಡವನ್ನು ವಿಧಿಸಲಾಗಿದೆ” ಎಂದು ಇಡಿ ಹೇಳಿದೆ.

ಯಾರು ಈ ಎಸ್ ಜಗತ್ರಕ್ಷಕನ್?

76 ವರ್ಷದ ಎಸ್ ಜಗತ್ರಕ್ಷಕನ್ ಅವರು ಡಿಎಂಕೆ ಟಿಕೆಟ್‌ನಲ್ಲಿ ಅರಕ್ಕೋಣಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಚೆನ್ನೈ ಮೂಲದ ಅಕಾರ್ಡ್ ಗ್ರೂಪ್‌ನ ಸಂಸ್ಥಾಪಕರಾಗಿದ್ದಾರೆ. ಇದು ಆತಿಥ್ಯ, ಔಷಧೀಯ, ಮದ್ಯ ತಯಾರಿಕೆಯಲ್ಲಿ ಆಸಕ್ತಿ ಹೊಂದಿದೆ. ಭಾರತ್ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (BIHER) ಕೂಡಾ ಇವರ ಒಡೆತನದ್ದೇ.

ಡಿಎಂಕೆ ಸಂಸದ ಎಸ್ ಜಗತ್ರಕ್ಷಕನ್ ವಿರುದ್ಧ ಇಡಿ ಪ್ರಕರಣವೇನು?

ಡಿಸೆಂಬರ್ 1, 2021 ರಂದು, ಡಿಎಂಕೆ ಸಂಸದ ಜಗತ್ರಕ್ಷಕನ್, ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿತ ಕಂಪನಿಯ ವಿರುದ್ಧ ಫೆಮಾದ ಸೆಕ್ಷನ್ 16 ರ ಅಡಿಯಲ್ಲಿ ಕೇಂದ್ರ ಏಜೆನ್ಸಿಯು ಫೆಮಾ ದೂರು ದಾಖಲಿಸಿದೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

ದೂರಿನಲ್ಲಿ ವಿವಿಧ ಫೆಮಾ ನಿಬಂಧನೆಗಳನ್ನು ಸಂಸದರು ಉಲ್ಲಂಘಿಸಿದ್ದಾರೆ, ವಿಶೇಷವಾಗಿ 2017 ರಲ್ಲಿ ಸಿಂಗಾಪುರದ ಶೆಲ್ ಕಂಪನಿಯಲ್ಲಿ ₹42 ಕೋಟಿ ಹೂಡಿಕೆ, ಕುಟುಂಬ ಸದಸ್ಯರ ನಡುವೆ ಸಿಂಗಾಪುರದ ಷೇರುಗಳ ಸ್ವಾಧೀನ ಮತ್ತು ವರ್ಗಾವಣೆ ಮತ್ತು ಸುಮಾರು ಶ್ರೀಲಂಕಾದ ಘಟಕದಲ್ಲಿ 9 ಕೋಟಿ ರೂ ಹೂಡಿಕೆ ಮಾಡಲಾಗಿದೆ. ಸೆಪ್ಟೆಂಬರ್ 11, 2020 ರಂದು ವಶಪಡಿಸಿಕೊಂಡ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ದೂರಿನಲ್ಲಿ ಕೋರಲಾಗಿದೆ.

ಇದನ್ನೂ ಓದಿ: ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಸಮಾಜದ ‘ಸಾಮೂಹಿಕ ವಿಸ್ಮೃತಿ’ ಟೀಕಿಸಿದ ರಾಷ್ಟ್ರಪತಿ

ಆಪಾದಿತ ಉಲ್ಲಂಘನೆಗಳು ಮತ್ತು ಸಲ್ಲಿಸಿದ ಲಿಖಿತ ಉತ್ತರಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಉಲ್ಲಂಘನೆಗಳು ಸಾಬೀತಾಗಿದೆ ಎಂದು ನಿರ್ಧರಿಸಲಾಯಿತು ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ