ಉತ್ತರ ಪ್ರದೇಶದ ಗ್ಯಾಂಗಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿಗೆ (Mukhtar Ansari) ಸೇರಿದ ಕನಿಷ್ಟ 11 ಸ್ಥಳಗಲ ಮೇಲೆ ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅನ್ಸಾರಿಯ ಕುಟುಂಬ ಸದಸ್ಯರು, ಚಾರ್ಟರ್ಡ್ ಅಕೌಂಟಂಟ್ ಮತ್ತು ಸಹಚರರ ಮನೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಶೋಧಕಾರ್ಯದಲ್ಲಿ ತೊಡಗಿದ್ದಾರೆ.
ಗುರುವಾರದಂದು ದಾಳಿಗೊಳಗಾಗಿರುವ ಮನೆಗಳಲ್ಲಿ ಅನ್ಸಾರಿಯ ಆಪ್ತರಾದ ವಿಕ್ರಮ್ ಅಗ್ರಹಾರಿ, ಗಣೇಶ ಮಿಶ್ರಾ ಮತ್ತು ಖಾನ್ ಬಸ್ ಸರ್ವಿಸ್ ಮಾಲೀಕನ ಮನೆಗಳೂ ಸೇರಿವೆ. ಮೊಹಮ್ಮಾದಾಬಾದ್ನಲ್ಲಿರುವ ಅನ್ಸಾರಿಯ ಮನೆಯ ಮೇಲೂ ಅಧಿಕಾರಿಗಳು ರೇಡ್ ಮಾಡಿದ್ದಾರೆ.
ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುವ ಮೊದಲು ಉತ್ತರ ಪ್ರದೇಶದಲ್ಲಿ ಕುಖ್ಯಾತ ಗ್ಯಾಂಗಸ್ಟರ್ ಆಗಿದ್ದ ಅನ್ಸಾರಿಯನ್ನು ರಕ್ಷಿಸಲು ಹಿಂದಿನ ಪಂಜಾಬ್ ಸರ್ಕಾರ ರೂ 55 ಲಕ್ಷ ಮಾಡಿದ್ದನ್ನು ಈಗಿನ ಆಪ್ ನೇತೃತ್ವದ ಸರ್ಕಾರ ಇತ್ತೀಚಿಗೆ ತನಿಖೆಗೆ ಆದೇಶಿಸಿತ್ತು.
ಆಗ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಅನ್ಸಾರಿ ವಿರುದ್ಧ ಸುಪ್ರೀಮ್ ಕೋರ್ಟ್ ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅವನ ಪರ ವಾದಿಸಲು ಖ್ಯಾತ ವಕೀಲರೊಬ್ಬರಿಗೆ ಪ್ರತಿ ವಿಚಾರಣೆಗೆ ರೂ 11 ಲಕ್ಷದ ಹಾಗೆ ಒಟ್ಟು 55 ಲಕ್ಷ ರೂ. ನೀಡಿದ್ದರು ಅನ್ನೋದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಬಂಧಿಖಾನೆ ಸಚಿವ ಹರ್ಜೋತ್ ಬೇನ್ಸ್ ಅವರು ನೀಡಿರುವ ಮಾಹಿತಿ ಪ್ರಕಾರ ಸದರಿ ವಕೀಲರು ವಿಚಾರಣೆ ಇಲ್ಲದ ದಿನ ಕೂಡ ಪ್ರತಿದಿನಕ್ಕೆ ರೂ. 5 ಲಕ್ಷ ಫೀಸು ಪಡೆದಿದ್ದಾರಂತೆ.