ಎಐಎಡಿಎಂಕೆ ಎರಡು ಎಲೆ ಚಿಹ್ನೆ ಬಳಕೆ ಸ್ಥಗಿತ ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿದ ಮನವಿ ವಜಾ ಮಾಡಿದ ಸುಪ್ರೀಂ
AIADMK ಪಿಎ ಜಾಸೆಫ್ ಎಂಬ ಅರ್ಜಿದಾರರು ರಾಜ್ಯದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಮತ್ತು ಶಾಂತಿಯನ್ನು ಕಾಪಾಡಲು ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಒ ಪನ್ನೀರ ಸೆಲ್ವಂ ನಡುವಿನ ವಿವಾದ ಪರಿಹಾರವಾಗುವ ತನಕ...
ದೆಹಲಿ: ಎಐಎಡಿಎಂಕೆಯ (AIADMK) “ಎರಡು ಎಲೆ” ಚಿಹ್ನೆ ಫ್ರೀಜ್ ಮಾಡಲು ಭಾರತದ ಚುನಾವಣಾ ಆಯೋಗಕ್ಕೆ (Election Commission) ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂಕೋರ್ಟ್ (Supreme Court) ಗುರುವಾರ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್ ನ್ಯಾಯಪೀಠ ಬುಧವಾರ ಈ ಅರ್ಜಿ ವಿಚಾರಣೆ ನಡೆಸಿದೆ. ಈ ಅರ್ಜಿಯು ಸಮಯ ವ್ಯರ್ಥ ಮಾಡುತ್ತದೆ ಎಂದು ಹೇಳಿ ಸಿಜೆಐ ಅರ್ಜಿ ವಜಾ ಮಾಡಿದ್ದಾರೆ. ಪಿಎ ಜಾಸೆಫ್ ಎಂಬ ಅರ್ಜಿದಾರರು ರಾಜ್ಯದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಮತ್ತು ಶಾಂತಿಯನ್ನು ಕಾಪಾಡಲು ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಒ ಪನ್ನೀರ ಸೆಲ್ವಂ ನಡುವಿನ ವಿವಾದ ಪರಿಹಾರವಾಗುವ ತನಕ ಎಐಎಡಿಎಂಕೆಯ ಪ್ರತಿಸ್ಪರ್ಧಿ ಗುಂಪುಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಮತ್ತು “ಎರಡು ಎಲೆ” ಚಿಹ್ನೆಯನ್ನು ಸ್ಥಗಿತಗೊಳಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಈ ಹಿಂದೆ ಮದ್ರಾಸ್ ಹೈಕೋರ್ಟ್‌ಗೆ ಮನವಿ ಮಾಡಿದ್ದರು.
ಮದ್ರಾಸ್ ಹೈಕೋರ್ಟ್ನಲ್ಲಿ ಈ ಅರ್ಜಿ ವಿಚಾರಣೆ ಮಾಡಿದ್ದ ಮುಖ್ಯ ನ್ಯಾಯಾಧೀಶ ಎಂಎನ್ ಭಂಡಾರಿ ಮತ್ತು ನ್ಯಾಯಾಧೀಶರಾದ ಎನ್ ಮಾಲಾ ಅವರ ನ್ಯಾಯಪೀಠವು, ಪ್ರಚಾರಕ್ಕಾಗಿ ಈ ಮನವಿ ಸಲ್ಲಿಸಲಾಗಿದೆ ಎಂದು ಹೇಳಿ ಅರ್ಜಿ ವಜಾ ಮಾಡಿದ್ದರು. ಅದೇ ವೇಳೆ ಅರ್ಜಿದಾರರಿಗೆ ರೂ 25,000 ದಂಡವನ್ನೂ ವಿಧಿಸಿದ್ದರು. ನಮ್ಮ ಪಿಐಎಲ್ ವಡಾ ಮಾಡಿದ್ದಲ್ಲದ್ದೆ ನಮ್ಮ ಮೇಲೆ ರೂ 25,000 ದಂಡವನ್ನೂ ವಿಧಿಸಲಾಗಿದೆ ಎಂದು ಅರ್ಜಿದಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದಾರೆ. ಅದೇ ವೇಳೆ ನನ್ನ ಆತಂಕಗಳು ಆಧಾರ ರಹಿತವಾಗಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ನಾವು ನಿಮಗೆ ಎಷ್ಟು ದಂಡ ವಿಧಿಸಬೇಕು? ಅವರು ನಿಮಗೆ 25,000 ದಂಡ ವಿಧಿಸಿದರು. ನಾವು ನಿಮ್ಮ ಮೇಲೆ 25,000 ದಂಡವನ್ನು ವಿಧಿಸುತ್ತೇವೆ. ನೀವು ಬ್ಯುಸಿ ಮನುಷ್ಯ. ನಿಮಗೇನೂ ಕೆಲಸವಿಲ್ಲ. ಅರ್ಜಿ ವಜಾಗೊಳಿಸಲಾಗಿದೆ ಎಂದಿದ್ದಾರೆ.
Published On - 1:15 pm, Thu, 18 August 22