ಪಶ್ಚಿಮ ಬಂಗಾಳ: ಭವಾನಿಪುರ (Bhabanipur) ಉಪಚುನಾವಣೆಯ ಮತ ಎಣಿಕೆಯ ಸಮಯದಲ್ಲಿ ಅಥವಾ ನಂತರ ಯಾವುದೇ ವಿಜಯೋತ್ಸವ, ಮೆರವಣಿಗೆ ನಡೆಯದಂತೆ ನೋಡಿಕೊಳ್ಳುವಂತೆ ಚುನಾವಣಾ ಆಯೋಗ (Election Commission) ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಚುನಾವಣೋತ್ತರ ಹಿಂಸಾಚಾರ ಸಂಭವಿಸದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಯೋಗ ಬಂಗಾಳ ಸರ್ಕಾರಕ್ಕೆ ಹೇಳಿದೆ. ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಭವಾನಿಪುರದಲ್ಲಿ ಗೆಲ್ಲಲೇಬೇಕು, ಹಾಗಾಗಿ ಎಲ್ಲರ ದೃಷ್ಟಿ ಪಶ್ಚಿಮ ಬಂಗಾಳದ ಭವಾನಿಪುರದ ಮೇಲೆ ಕೇಂದ್ರೀಕೃತವಾಗಿವೆ.
ಪಶ್ಚಿಮ ಬಂಗಾಳದಲ್ಲಿ ಮೂರು ಮತ್ತು ಒಡಿಶಾದಲ್ಲಿ ಒಂದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಭಾನುವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು ಪ್ರಸ್ತುತ ನಡೆಯುತ್ತಿದೆ. ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳು ಭವಾನಿಪುರ, ಜಂಗೀಪುರ ಮತ್ತು ಸಂಸರ್‌ಗಂಜ್, ಒಡಿಶಾದಲ್ಲಿ ಪಿಪಿಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.
ಪಶ್ಚಿಮ ಬಂಗಾಳ ಸಿಎಂ ಮತ್ತು ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಾರ್ಚ್-ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸುವೇಂದು ಅಧಿಕಾರಿಯ ವಿರುದ್ಧ ನಂದಿಗ್ರಾಮದಲ್ಲಿ ಪರಾಭವಗೊಂಡಿದ್ದರು. ಚುನಾವಣೆ ಗೆಲ್ಲದೇ ಇದ್ದರೂ ಮುಖ್ಯಮಂತ್ರಿಯಾಗಿರುವ ಮಮತಾ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಭವಾನಿಪುರದಲ್ಲಿ ಗೆಲ್ಲಲೇ ಬೇಕಿದೆ. ಪ್ರತಿಷ್ಠೆಯ ಕಣವಾಗಿರುವ ಇಲ್ಲಿ ಬಿಜೆಪಿ ಪ್ರಿಯಾಂಕಾ ಟಿಬರೆವಾಲ್ ಅವರನ್ನು ಕಣಕ್ಕಿಳಿಸಿದೆ.
#WATCH | TMC workers & supporters celebrate outside the residence of West Bengal CM Mamata Banerjee in Kolkata as she leads by 28,825 votes in Bhabanipur bypolls after 9th round of counting pic.twitter.com/XlZhaJPB0n
— ANI (@ANI) October 3, 2021
ಮಮತಾ ಬ್ಯಾನರ್ಜಿಯ ನಿವಾಸಕ್ಕೆ ಅಭಿಷೇಕ್ ಬ್ಯಾನರ್ಜಿ ಆಗಮನ
ಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಗೆಲುವಿನತ್ತ ದಾಪುಗಾಲು ಹಾಕಿದ ತಕ್ಷಣ ಅವರ ನಿವಾಸವನ್ನು ತಲುಪಿದರು. 11 ಸುತ್ತುಗಳ ಎಣಿಕೆ ಮುಗಿದಿದ್ದು, ಮಮತಾ 31,000 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಅಖಿಲೇಶ್ ಯಾದವ್ ಅಭಿನಂದನೆ ಸಲ್ಲಿಕೆ
ये जो ‘ममता दीदी जी’ की जीत है
वही तो ‘सत्यमेव जयते’ की रीत है@MamataOfficial @AITCofficial— Akhilesh Yadav (@yadavakhilesh) October 3, 2021
ಮಮತಾ ಮುಖರ್ಜಿ ಮುನ್ನಡೆ
13 ಸುತ್ತಿನ ಮತ ಎಣಿಕೆಯ ನಂತರ ಮಮತಾ ಬ್ಯಾನರ್ಜಿ 36,457 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಇದನ್ನೂ ಓದಿ: West Bengal By-Election Results: ಪಶ್ಚಿಮ ಬಂಗಾಳದ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಎಂಸಿ ಮುನ್ನಡೆ
Published On - 2:03 pm, Sun, 3 October 21