ನವದೆಹಲಿ: ಪಶ್ಚಿಮಬಂಗಾಳದ ನಂದಿಗ್ರಾಮದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಯವರಿಗೆ ಚುನಾವಣಾ ಆಯೋಗ ನೋಟಿಸ್ ನೋಡಿದೆ. ಕಳೆದ ತಿಂಗಳು ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡುವಾಗ ಕೋಮು ಸೌಹಾರ್ದ ಕದಡುವ ಮಾತುಗಳನ್ನು ಆಡುವ ಮೂಲಕ, ನಿಯಮ ಉಲ್ಲಂಘನೆ ಮಾಡಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಿದ್ದಾಗಿ ಚುನಾವಣಾ ಆಯೋಗ ತಿಳಿಸಿದೆ. ಹಾಗೇ, 24ಗಂಟೆಯಲ್ಲಿ ನೋಟಿಸ್ಗೆ ಉತ್ತರ ನೀಡಲು ಸೂಚನೆ ನೀಡಿದೆ.
ಮಾ.29ರಂದು ಸುವೇಂದು ಅಧಿಕಾರಿ ನಂದಿಗ್ರಾಮದಲ್ಲಿ ಭಾಷಣ ಮಾಡುವಾಗ ದ್ವೇಷಪೂರಿತ ಮಾತುಗಳನ್ನು ಆಡಿದ್ದಾರೆ ಎಂದು ಸಿಪಿಐ ಎಂಎಲ್ ಕೇಂದ್ರ ಸಮಿತಿಯ ಕವಿತಾ ಕೃಷ್ಣನ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಯಾವುದೇ ರಾಜಕೀಯ ಮುಖಂಡರು, ಕಾರ್ಯಕರ್ತರ ವಿರುದ್ಧ ಮಾಡುವ ಆರೋಪವು ಅವರ ಕೆಲಸ, ಯೋಜನೆಗಳು, ಹಳೇ ದಾಖಲೆಗಳನ್ನು ಆಧರಿಸಿ ಇರಬೇಕು. ಅದು ಬಿಟ್ಟು ಸಾಬೀತಾಗದ ಅಪರಾಧವನ್ನು ಉಲ್ಲೇಖಿಸುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಅಲ್ಲದೆ, ಸುವೇಂದು ಅಧಿಕಾರಿಯವರ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು ಸ್ಪಷ್ಟವಾಗಿದೆ ಎಂದೂ ಹೇಳಿದೆ.
ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿಯವರೇ ಕಣಕ್ಕೆ ಇಳಿದಿದ್ದಾರೆ. ಮಾರ್ಚ್ 29ರಂದು ಚುನಾವಣಾ ಪ್ರಚಾರ ನಡೆಸಿದ್ದ ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿಯವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು.
ಇದನ್ನೂ ಓದಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ 2ನೇ ನೋಟಿಸ್ ನೀಡಿದ ಚುನಾವಣಾ ಆಯೋಗ
ಪಶ್ಚಿಮ ಬಂಗಾಳ ಚುನಾವಣೆ: 3ನೇ ಹಂತದ ಬಹುತೇಕ ಕ್ಷೇತ್ರಗಳಲ್ಲಿ ಟಿಎಂಸಿ ಉಕ್ಕಿನ ಹಿಡಿತ, ಮುಸ್ಲಿಂ ಮತದಾರರೇ ನಿರ್ಣಾಯಕ
(Election Commission Sends Notice To Nandigram BJP Candidate Suvendu Adhikari)