ವರ್ಗಾವಣೆ ಬೇಕಿದ್ದರೆ ರಾತ್ರಿ ನಿನ್ನ ಹೆಂಡತಿಯನ್ನು ಕಳಿಸಿಕೊಡು ಎಂದ ಬಾಸ್; ಮನನೊಂದ ಉದ್ಯೋಗಿ ಆತ್ಮಹತ್ಯೆ

ಬಾಸ್ ಮಾತಿನಿಂದ ಮನನೊಂದ 45ರ ಹರೆಯದ ಗೋಕುಲ್ ಪ್ರಸಾದ್ ಲಖಿಂಪುರದ ಜೂನಿಯರ್ ಇಂಜಿನಿಯರ್ ಕಚೇರಿಯ ಹೊರಗೆ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.

ವರ್ಗಾವಣೆ ಬೇಕಿದ್ದರೆ ರಾತ್ರಿ ನಿನ್ನ ಹೆಂಡತಿಯನ್ನು ಕಳಿಸಿಕೊಡು ಎಂದ ಬಾಸ್; ಮನನೊಂದ ಉದ್ಯೋಗಿ ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 11, 2022 | 8:06 PM

ಲಖನೌ: ವರ್ಗಾವಣೆ ಬೇಕಿದ್ದರೆ ನಿನ್ನ ಪತ್ನಿಯನ್ನು ರಾತ್ರಿ ನನ್ನಲ್ಲಿಗೆ ಕಳುಹಿಸು ಎಂದು ಹಿರಿಯ ಅಧಿಕಾರಿಯೊಬ್ಬರು ಕೇಳಿದ್ದಕ್ಕೆ ಉತ್ತರ ಪ್ರದೇಶದ (Uttar Pradesh) ವಿದ್ಯುತ್ ಇಲಾಖೆಯ ಉದ್ಯೋಗಿಯೊಬ್ಬರು ಆತ್ಮಹತ್ಯೆ (suicide) ಮಾಡಿಕೊಂಡಿದ್ದಾರೆ. ಬಾಸ್ ಮಾತಿನಿಂದ ಮನನೊಂದ 45ರ ಹರೆಯದ ಗೋಕುಲ್ ಪ್ರಸಾದ್ ಲಖಿಂಪುರ(Lakhimpur) ಜೂನಿಯರ್ ಇಂಜಿನಿಯರ್ ಕಚೇರಿಯ ಹೊರಗೆ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ ಎಂದು ಎನ್​​​ ಡಿಟಿವಿ ವರದಿ ಮಾಡಿದೆ. ಜೂನಿಯರ್ ಇಂಜಿನಿಯರ್ ನಾಗೇಂದ್ರ ಕುಮಾರ್ ಹಾಗೂ ಗುಮಾಸ್ತರನ್ನು ಅಮಾನತು ಮಾಡಲಾಗಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ.  ಗೋಕುಲ್ ಪ್ರಸಾದ್ ಅವರು ಬೆಂಕಿ ಹಚ್ಚಿಕೊಂಡ ನಂತರ ಚಿತ್ರೀಕರಿಸಿದ ವಿಡಿಯೊದಲ್ಲಿ, ತನ್ನ ದುಃಖ ಏನೆಂಬುದನ್ನು ಅವರು ವಿವರಿಸಿದ್ದಾರೆ. ಜೂನಿಯರ್ ಇಂಜಿನಿಯರ್ ಮತ್ತು ಅವರ ಸಹಾಯಕರು ತನಗೆ ಕಿರುಕುಳ ನೀಡುತ್ತಿದ್ದರು ಮತ್ತು ಪೊಲೀಸರನ್ನು ಸಂಪರ್ಕಿಸಿದರೂ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ಅವರು ಆರೋಪಿಸಿದ್ದಾರೆ.  ಇನ್ನೊಂದು ವಿಡಿಯೊದಲ್ಲಿ ಆರೋಪಿಗಳು ಕಳೆದ ಮೂರು ವರ್ಷಗಳಿಂದ ಗೋಕುಲ್‌ಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಆತನ ಪತ್ನಿ ಆರೋಪಿಸಿದ್ದಾರೆ.

ಅವರು ಖಿನ್ನತೆಗೆ ಒಳಗಾದರು, ಔಷಧಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು, ಆದರೆ ಅವರು ಅವನನ್ನು ಬಿಡಲಿಲ್ಲ. ಅವರನ್ನು ಅಲಿಗಂಜ್‌ಗೆ ವರ್ಗಾಯಿಸಲಾಯಿತು. ಅಲ್ಲಿಗೆ ಪ್ರಯಾಣಿಸಲು ಕಷ್ಟವಾಗುತ್ತಿತ್ತು. ಆದ್ದರಿಂದ ಅವರು ಮನೆ ಹತ್ತಿರಕ್ಕೆ ವರ್ಗಾಯಿಸುವಂತೆ ಕೇಳಿದರು. ಆಗ ಅವರ ಬಾಸ್, ‘ನಿನ್ನ ಹೆಂಡತಿಯನ್ನು ನಮ್ಮೊಂದಿಗೆ ಮಲಗುವಂತೆ ಮಾಡಿ. ನಾವು ನಿಮ್ಮನ್ನು ವರ್ಗಾವಣೆ ಮಾಡುತ್ತೇವೆ” ಎಂದು ಹೇಳಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಪತ್ನಿ.

ಯಾರೂ ಅವನಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ. ಜೂನಿಯರ್ ಇಂಜಿನಿಯರ್ ಅಲ್ಲೇ ನಿಂತು ನೋಡುತ್ತಿದ್ದರು ಎಂದಿದ್ದಾರೆ ಉದ್ಯೋಗಿಯ ಪತ್ನಿ.

ಹಿರಿಯ ಪೊಲೀಸ್ ಅಧಿಕಾರಿ ಸಂಜೀವ್ ಸುಮನ್ ಮಾತನಾಡಿ, ”ಜೂನಿಯರ್ ಇಂಜಿನಿಯರ್ ವರ್ಗಾವಣೆಗೆ ಕೋರಿದಾಗ ಲೈನ್‌ಮ್ಯಾನ್ ಹಣದ ಬೇಡಿಕೆ ಮತ್ತು ಅಸಭ್ಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ನಾವು ಪ್ರಕರಣ ದಾಖಲಿಸಿದ್ದೇವೆ, ಇಲಾಖಾ ಮಟ್ಟದಲ್ಲಿ ಜೂನಿಯರ್ ಎಂಜಿನಿಯರ್ ಅನ್ನು ಅಮಾನತುಗೊಳಿಸಲಾಗಿದೆ ಮತ್ತು ವಿಚಾರಣೆ ನಡೆಸಲಾಗಿದೆ. ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: CUET ತಮಿಳುನಾಡು ವಿಧಾನಸಭೆಯಲ್ಲಿ ಸಿಯುಇಟಿ ವಿರುದ್ಧ ನಿರ್ಣಯ ಅಂಗೀಕಾರ

Published On - 8:05 pm, Mon, 11 April 22