ಪಂಜಾಬ್ನಲ್ಲಿ ಪೊಲೀಸರು (Punjab Police) ಮತ್ತು ಗಾಯಕ ಸಿಧು ಮೂಸೆವಾಲ (Sidhu Moose Wala) ಪ್ರಕರಣದ ಶಂಕಿತ ಗ್ಯಾಂಗ್ಸ್ಟರ್ಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು ಜನರು ಮನೆಯಿಂದ ಹೊರಗೆ ಬರಬಾರದು ಎಂದು ಪೊಲೀಸರು ಆದೇಶಿಸಿದ್ದಾರೆ. ಪಂಜಾಬ್ ಪೊಲೀಸರ ಗ್ಯಾಂಗ್ಸ್ಟರ್ ನಿಗ್ರಹ ಪಡೆ ಅಮೃತಸರದ ಚೀಚಾ ಭಕ್ನಾಗ್ರಾಮದಲ್ಲಿ ಎನ್ಕೌಂಟರ್ ನಡೆಸಿದೆ. ಪ್ರಸ್ತುತ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದು, ಜನರು ಹೊರಗೆ ಬರದಂತೆ ಆದೇಶಿಸಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ನಾಲ್ವರು ಗ್ಯಾಂಗ್ಸ್ಟರ್ಗಳು ಹತ್ಯೆಯಾಗಿದ್ದು ಐದು ಪೊಲೀಸರಿಗೆ ಗಾಯಗಳಾಗಿವೆ. ಶುಹುದೀಪ್ ಸಿಂಗ್ ಸಿಧು ಅಲಿಯಾಸ್ ಸಿಧು ಮೂಸೆವಾಲರನ್ನು ಮೇ 29ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ದು ಗ್ಯಾಂಗ್ಸ್ಟರ್ಗಳಾದ ಜಗರೂಪ್ ಸಿಂಗ್ ರೂಪಾ ಮತ್ತು ಮನಪ್ರೀತ್ ಸಿಂಗ್ ಅಲಿಯಾಸ್ ಮನ್ನು ಕುಸ್ಗಾಗಾಗಿ ಪೊಲೀಸರು ಹುಡುಕಾಡುತ್ತಿದ್ದರು.
#WATCH | Encounter ensuing between police & gangsters at Cheecha Bhakna village of Amritsar district in Punjab pic.twitter.com/7UA0gEL23z
— ANI (@ANI) July 20, 2022
ಮೂಸೆವಾಲ ಅವರಿಗೆ ಎಕೆ-47ನಿಂದ ಮೊದಲು ಶೂಟ್ ಮಾಡಿದ್ದು ಮನ್ನು ಕುಸ್ಸಾ ಎಂದು ಹೇಳಲಾಗುತ್ತಿದೆ
ಪಂಜಾಬ್, ದೆಹಲಿ ಮತ್ತು ಮುಂಬೈ ಪೊಲೀಸರು ಮೂಸೆವಾಲ ಪ್ರಕರಣದಲ್ಲಿ ಹಲವಾರು ಮಂದಿಯನ್ನು ಬಂಧಿಸಿದ್ದಾರೆ. ಕೆನಡಾ ಮೂಲದ ಗೋಲ್ಡಿ ಬ್ರಾರ್ ಮತ್ತು ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಹತ್ಯೆಯ ಹೊಣೆ ಹೊತ್ತುಕೊಂಡಿದ್ದರು. ಈ ಪ್ರಕರಣದಲ್ಲಿ ಮೂವರು ಶೂಟರ್ಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಇದರಲ್ಲಿ ಇಬ್ಬರು ಶೂಟೌಟ್ ನಡೆಸಿದ್ದು ದೀಪಕ್ ಮುಂಡಿ ಎಂಬಾತನನ್ನು ಇನ್ನೂ ಪತ್ತೆ ಹಚ್ಚಲು ಆಗಲಿಲ್ಲ.
Published On - 2:07 pm, Wed, 20 July 22