ಅಕ್ರಮ ಗಣಿಗಾರಿಕೆ ಪ್ರಕರಣ: ರಾಂಚಿಯ ಉದ್ಯಮಿ ಪ್ರೇಮ್ ಪ್ರಕಾಶ್​​​ನ್ನು ಬಂಧಿಸಿದ ಇಡಿ

| Updated By: ರಶ್ಮಿ ಕಲ್ಲಕಟ್ಟ

Updated on: Aug 25, 2022 | 9:53 AM

ರಾಂಚಿ ಮೂಲದ ಉದ್ಯಮಿ ಪ್ರೇಮ್ ಪ್ರಕಾಶ್ ನಿವಾಸದ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಎರಡು ಎಕೆ-47 ರೈಫಲ್‌ಗಳು ಮತ್ತು 60 ಜೀವಂತ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದೆ.

ಅಕ್ರಮ ಗಣಿಗಾರಿಕೆ ಪ್ರಕರಣ: ರಾಂಚಿಯ ಉದ್ಯಮಿ ಪ್ರೇಮ್ ಪ್ರಕಾಶ್​​​ನ್ನು ಬಂಧಿಸಿದ ಇಡಿ
ಇಡಿ ದಾಳಿ
Follow us on

ರಾಂಚಿ (ಜಾರ್ಖಂಡ್):  ಜಾರ್ಖಂಡ್‌ನಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಪ್ರೇಮ್ ಪ್ರಕಾಶ್​​​ನ್ನು  ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯ (PMLA) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕಾಶ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ರಾಂಚಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ರಾಂಚಿ ಮೂಲದ ಉದ್ಯಮಿ ಪ್ರೇಮ್ ಪ್ರಕಾಶ್ (Prem Prakash) ನಿವಾಸದ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ (Enforcement Directorate) , ಎರಡು ಎಕೆ-47 ರೈಫಲ್‌ಗಳು ಮತ್ತು 60 ಜೀವಂತ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದೆ. ಪ್ರೇಮ್ ಪ್ರಕಾಶ್ ಅವರ ಮನೆಯಿಂದಲೂ ಇಡಿ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇಬ್ಬರು ಭದ್ರತಾ ಸಿಬ್ಬಂದಿಗೆ ಶಸ್ತ್ರಾಸ್ತ್ರಗಳನ್ನು ನೀಡಲಾಗಿತ್ತು. ಅವರು ಪ್ರೇಮ್ ಅವರ ನಿವಾಸದಲ್ಲಿ ಅವುಗಳನ್ನು ಇಟ್ಟುಕೊಂಡು ತಮ್ಮ ಮನೆಗಳಿಗೆ ತೆರಳಿದರು ಎಂದು ರಾಂಚಿ ಪೊಲೀಸರು ಹೇಳಿದ್ದಾರೆ. ಈ ರೀತಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಇಬ್ಬರನ್ನೂ ಅಮಾನತು ಮಾಡಲಾಗಿದೆ. ವಸುಂಧರಾ ಅಪಾರ್ಟ್‌ಮೆಂಟ್‌ನಲ್ಲಿರುವ ಪ್ರಕಾಶ್ ಅವರ ಫ್ಲಾಟ್, ಹರ್ಮು ಚೌಕ್ ಬಳಿಯ ಅವರ ನಿವಾಸ ‘ಶೈಲೋದಯ’ ಮತ್ತು ಹರ್ಮುನಲ್ಲಿರುವ ಅವರ ಕಚೇರಿ ಸೇರಿದಂತೆ ರಾಂಚಿಯ 11 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಬಿಹಾರ, ಚೆನ್ನೈ ಮತ್ತು ಎನ್‌ಸಿಆರ್‌ನಲ್ಲಿರುವ ಪ್ರಕಾಶ್ ಅವರ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ.


ಜಾರ್ಖಂಡ್ ಆಡಳಿತ, ಉದ್ಯಮಿಗಳು ಮತ್ತು ರಾಜಕಾರಣಿಗಳ ನಡುವೆ ಅಕ್ರಮ ಗಣಿಗಾರಿಕೆ, ಅಕ್ರಮ ಹಣ ವರ್ಗಾವಣೆ ಮತ್ತು ಶಂಕಿತ ಕ್ರಿಮಿನಲ್ ಸಂಬಂಧಕ್ಕೆ ಸಂಬಂಧಿಸಿದಂತೆ ಜಾರ್ಖಂಡ್, ಬಿಹಾರ, ತಮಿಳುನಾಡು ಮತ್ತು ದೆಹಲಿ ಎನ್‌ಸಿಆರ್ ಸೇರಿದಂತೆ 17 ಸ್ಥಳಗಳಲ್ಲಿ ಬುಧವಾರ ಇಡಿ ದಾಳಿ ನಡೆಸಿತ್ತು.

Published On - 9:35 am, Thu, 25 August 22