Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Army: ಪಾಕಿಸ್ತಾನಿ ಭಯೋತ್ಪಾದಕನಿಗೆ ರಕ್ತ ನೀಡಿದ ಭಾರತೀಯ ಸೈನಿಕರು

ತಬಾರಕ್ ಹುಸೇನ್ ಎಂದು ಗುರುತಿಸಲಾದ ಭಯೋತ್ಪಾದಕನ ತೊಡೆ ಮತ್ತು ಭುಜದಲ್ಲಿ ಗುಂಡಿನ ಗಾಯಗಳಿಂದ ಬಳಲುತ್ತಿದ್ದು ಭಾರತೀಯ ಸೇನೆಯ ಸೌಲಭ್ಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Indian Army: ಪಾಕಿಸ್ತಾನಿ ಭಯೋತ್ಪಾದಕನಿಗೆ ರಕ್ತ ನೀಡಿದ ಭಾರತೀಯ ಸೈನಿಕರು
Pakistani terrorist
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 25, 2022 | 10:58 AM

ದೆಹಲಿ: ಕಳೆದ ಎರಡು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಇಬ್ಬರು ಉಗ್ರರರು ಒಳನುಸುಳುವಿಕೆ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ನೆಲಬಾಂಬ್ ಸ್ಫೋಟ ಮಾಡುವ ಪ್ರಯತ್ನವನ್ನು ಮಾಡಿದ ಪಾಕಿಸ್ತಾನಿ ಭಯೋತ್ಪಾದಕನನ್ನು ಸೆರೆಹಿಡಿಯಲಾಗಿದೆ ಮತ್ತು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ಬುಧವಾರ ತಿಳಿಸಿದೆ.

ಬಂಧಿತ ವ್ಯಕ್ತಿ ಈ ಹಿಂದೆ ಗಡಿ ನಿಯಂತ್ರಣ ರೇಖೆಯನ್ನು ದಾಟಿದ್ದಕ್ಕಾಗಿ ಬಂಧಿಸಲಾಗಿತ್ತು ಆದರೆ ಮಾನವೀಯ ಆಧಾರದ ಮೇಲೆ ವಾಪಸ್ ಕಳುಹಿಸಲಾಗಿತ್ತು. ಭಾರತೀಯ ಪೋಸ್ಟ್‌ನ ಮೇಲಿನ ದಾಳಿಗಾಗಿ ಪಾಕಿಸ್ತಾನದ ಸೇನೆಯ ಕರ್ನಲ್‌ನಿಂದ 30,000 ಪಾಕಿಸ್ತಾನಿ ರೂಪಾಯಿಗಳನ್ನು ನೀಡಲಾಯಿತು ಎಂದು ಹೇಳಿದ್ದಾನೆ.

ಆಗಸ್ಟ್ 21 ರಂದು ಮುಂಜಾನೆ, ನೌಶೇರಾ ಪ್ರದೇಶದ ಜಂಗರ್ ಸೆಕ್ಟರ್‌ನಲ್ಲಿ ನಿಯೋಜಿಸಲಾದ ಸೈನಿಕರು ನಿಯಂತ್ರಣ ರೇಖೆಯ ದಾಟಿ ಭಾರತದ ಒಳಗೆ ಬರಲು ನೋಡಿದ ಎರಡರಿಂದ ಮೂರು ಭಯೋತ್ಪಾದಕರ ಚಲನೆಯನ್ನು ಗಮನಿಸಿ ಸೆರೆಹಿಡಿಯಲಾಯಿತು ಎಂದು ಸೇನೆಯು ತಿಳಿಸಿದೆ. ನುಸುಳುಕೋರರಲ್ಲಿ ಒಬ್ಬ ಭಾರತೀಯ ಪೋಸ್ಟ್‌ಗೆ ಸಮೀಪದಲ್ಲಿದ್ದ ಮತ್ತು ಬೇಲಿಯನ್ನು ಕತ್ತರಿಸಲು ಪ್ರಯತ್ನಿಸಿದ. ಸೈನಿಕರನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದ ಆತನ ಮೇಲೆ ಭಾರತೀಯ ಸೈನಿಕರು ಗುಂಡು ಹಾರಿಸಿ ಸೆರೆಹಿಡಿದರು.

ಇನ್ನಿಬ್ಬರು ನುಸುಳುಕೋರರು ಕಾಡಿನ ಮೂಲಕ ತಪ್ಪಿಸಿಕೊಂಡು ಪಾಕಿಸ್ತಾನಕ್ಕೆ ಸೇರಿದ್ದಾರೆ. ಗಾಯಗೊಂಡ ಪಾಕಿಸ್ತಾನಿ ಭಯೋತ್ಪಾದಕನನ್ನು ಜೀವಂತವಾಗಿ ಸೆರೆಹಿಡಿಯಲಾಯಿತು ಮತ್ತು ತಕ್ಷಣದ ವೈದ್ಯಕೀಯ ನೆರವು ಮತ್ತು ಜೀವರಕ್ಷಕ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಸೇನೆ ತಿಳಿಸಿದೆ.

ಆತನನ್ನು ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಸಬ್‌ಕೋಟ್ ಗ್ರಾಮದ ನಿವಾಸಿ ತಬಾರಕ್ ಹುಸೇನ್ ಎಂದು ಗುರುತಿಸಲಾಗಿದೆ. ಆತನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕರ್ನಲ್ ಯೂನಸ್ ಚೌಧರಿ ಕಳುಹಿಸಿದ್ದಾರೆ ಎಂದು ವಿಚಾರಣೆ ವೇಳೆ ಆತ ಬಹಿರಂಗಪಡಿಸಿದ್ದಾನೆ ಎಂದು ಸೇನೆ ತಿಳಿಸಿದೆ. ಆತನು ಕರ್ನಲ್ ನೀಡಿದ 30,000 ಪಾಕಿಸ್ತಾನಿ ರೂಪಾಯಿಗಳನ್ನು ಒಯ್ಯುತ್ತಿದ್ದರು ಎಂದು ಹೇಳಿದ್ದಾರೆ.

ಹುಸೇನ್ ತೊಡೆ ಮತ್ತು ಭುಜಕ್ಕೆ ಎರಡು ಗುಂಡಿನ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ. ಸೇನಾ ಅಧಿಕಾರಿಗಳು ಭಯೋತ್ಪಾದಕನಿಗೆ ರಕ್ತದಾನ ಮಾಡಿದರು ಮತ್ತು ಅವರ ಜೀವವನ್ನು ಉಳಿಸಬೇಕಾದ ಇತರ ರೋಗಿಗಳಂತೆ ಚಿಕಿತ್ಸೆ ನೀಡಲಾಯಿತು ಎಂದು ಬ್ರಿಗೇಡಿಯರ್ ರಾಜೀವ್ ನಾಯರ್ ಹೇಳಿದರು. ನಮ್ಮ ತಂಡದ ಸದಸ್ಯರು ಅವರಿಗೆ ಮೂರು ಬಾಟಲಿ ರಕ್ತವನ್ನು ನೀಡಿದರು, ಅವರನ್ನು ಶಸ್ತ್ರಚಿಕಿತ್ಸೆ ಮಾಡಿ ಐಸಿಯುನಲ್ಲಿ ಇರಿಸಲಾಯಿತು. ಅವರು ಈಗ ಸ್ಥಿರವಾಗಿದ್ದಾರೆ ಆದರೆ ಸುಧಾರಿಸಲು ಕೆಲವು ವಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಬ್ರಿಗೇಡಿಯರ್ ನಾಯರ್ ಹೇಳಿದರು.

ವ್ಯಕ್ತಿಯನ್ನು ಈ ಹಿಂದೆ 2016 ರಲ್ಲಿ ಅದೇ ಸೆಕ್ಟರ್‌ನಿಂದ ಭಾರತೀಯ ಸೇನೆಯು ತನ್ನ ಸಹೋದರ ಹರೂನ್ ಅಲಿಯೊಂದಿಗೆ ಸೆರೆಹಿಡಿಯಲಾಗಿತ್ತು ಮತ್ತು 2017ರ ನವೆಂಬರ್‌ನಲ್ಲಿ ಮಾನವೀಯ ಆಧಾರದ ಮೇಲೆ ಸ್ವದೇಶಕ್ಕೆ ಕಳುಹಿಸಲಾಯಿತು ಎಂದು ಸೇನೆಯು ಹೇಳಿದೆ.

ಆಗಸ್ಟ್ 22 ರಂದು ರಾತ್ರಿ ಎರಡರಿಂದ ಮೂರು ಭಯೋತ್ಪಾದಕರ ಗುಂಪು ಅದೇ ಪ್ರದೇಶದ ಲ್ಯಾಮ್ ಸೆಕ್ಟರ್‌ನಲ್ಲಿ ನುಸುಳಲು ಪ್ರಯತ್ನಿಸಿತು. ನಮ್ಮ ಪಡೆಗಳು ಭಯೋತ್ಪಾದಕರನ್ನು ಗಮನಿಸಿದೆ ಸೇನೆ ಹೇಳಿದೆ.

ಇಬ್ಬರು ಭಯೋತ್ಪಾದಕರು ಸ್ಥಳದಲ್ಲೇ ಹತ್ಯೆ ಮಾಡಲಾಗಿದೆ ಎಂದು ಹೇಳಿದೆ. ಆತನ ಜೊತೆಗಿದ್ದವರು ಗುಂಡಿನಿಂದ ಗಾಯಗೊಂಡಿದ್ದು ಅಲ್ಲಿಂದ ಪರಾರಿಯಾಗಿ ಪಾಕಿಸ್ತಾನವನ್ನು ಸೇರಿದ್ದಾರೆ. ಗುಂಡೇಟಿನಿಂದ ಹತ್ಯೆ ಮಾಡಲಾಗಿದ ಉಗ್ರರ ಶವವನ್ನು ಮರುದಿನ ಬೆಳಿಗ್ಗೆ ಕ್ವಾಡ್‌ಕಾಪ್ಟರ್ ಬಳಸಿ ಗುರುತಿಸಲಾಯಿತು ಮತ್ತು ನಂತರ ಒಂದು AK-56 ರೈಫಲ್ ಜೊತೆಗೆ ಬುಲೆಟ್‌ಗಳು ಮತ್ತು ಪಡಿತರವನ್ನು ವಶಪಡಿಸಿಕೊಳ್ಳಲಾಯಿತು. ಈ ಪ್ರದೇಶದಲ್ಲಿ ಭಾರೀ ಗಣಿಗಾರಿಕೆ ನಡೆಸಲಾಗಿರುವುದರಿಂದ, ಶೋಧ ಕಾರ್ಯಾಚರಣೆಯನ್ನು ಎಚ್ಚರಿಕೆಯಿಂದ ನಡೆಸಲಾಗುತ್ತಿದೆ ಮತ್ತು ಇನ್ನೂ ಪ್ರಗತಿಯಲ್ಲಿದೆ.

Published On - 10:58 am, Thu, 25 August 22

ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು