ಭೂಗತ ಲೋಕದ ನಂಟಿನ ಸಂಕಟ; ಎನ್​ಸಿಪಿ ನಾಯಕ ನವಾಬ್​ ಮಲಿಕ್​ ಬಂಧನದ ಬೆನ್ನಲ್ಲೇ ಸೋದರನಿಗೂ ಸಮನ್ಸ್​ ನೀಡಿದ ಇ.ಡಿ.

| Updated By: Lakshmi Hegde

Updated on: Feb 24, 2022 | 2:56 PM

ಭೂಗತ ಪಾತಕಿ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ದಾವೂದ್​ ಇಬ್ರಾಹಿಂ ಆತನ ಸಹೋದರ ಅನೀಸ್​ ಇಕ್ಬಾಲ್​, ಸಹಾಯಕ ಚೋಟಾ ಶಕೀಲ್​ ಮತ್ತು ಇತರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಅಕ್ರಮ ಹಣವರ್ಗಾವಣೆ ಕೇಸ್ ದಾಖಲಾಗಿದೆ.

ಭೂಗತ ಲೋಕದ ನಂಟಿನ ಸಂಕಟ; ಎನ್​ಸಿಪಿ ನಾಯಕ ನವಾಬ್​ ಮಲಿಕ್​ ಬಂಧನದ ಬೆನ್ನಲ್ಲೇ ಸೋದರನಿಗೂ ಸಮನ್ಸ್​ ನೀಡಿದ ಇ.ಡಿ.
ಜಾರಿ ನಿರ್ದೇಶನಾಲಯ
Follow us on

ಭೂಗತ ಪಾತಕಿಗಳೊಂದಿಗೆ ಆಸ್ತಿ ವ್ಯವಹಾರ, ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಬಂಧಿಸಲ್ಪಟ್ಟಿರುವ ಮಹಾರಾಷ್ಟ್ರದ ಸಚಿವ ನವಾಬ್​ ಮಲಿಕ್ (Nawab Malik) ಸೋದರ, ಕಪ್ತನ್​ ಮಲಿಕ್​​ಗೂ ಕೂಡ ಜಾರಿ ನಿರ್ದೇಶನಾಲಯ ಸಮನ್ಸ್​ ನೀಡಿದೆ. ದಾವೂದ್​ ಇಬ್ರಾಹಿಂ (Dawood Ibrahim) ಮತ್ತು ಆತನ ಸಹಚರರ ವಿರುದ್ಧ ಅಕ್ರಮ ಹಣ ವರ್ಗಾವಣೆ, ಭ್ರಷ್ಟಾಚಾರ ಪ್ರಕರಣ ದಾಖಲಿಸಿರುವ ಇ.ಡಿ. ಸಂಬಂಧಪಟ್ಟ ಸ್ಥಳಗಳ ಮೇಲೆ ರೇಡ್​ ಮಾಡುತ್ತಿದೆ. ಹಾಗೇ, ಈ ಕೇಸ್​​ನಲ್ಲಿ ಸಂಪರ್ಕ ಹೊಂದಿರುವ ಹಲವರ ಮೇಲೆ ನಿಗಾ ಇಟ್ಟಿದೆ. ನವಾಬ್​ ಮಲಿಕ್​​ ಬಂಧನಕ್ಕೆ ಕಾರಣವಾದ ಪ್ರಕರಣದಡಿಯಲ್ಲೇ ಅವರ ಸೋದರನಿಗೂ ಸಮನ್ಸ್​ ನೀಡಿದ್ದಾಗಿ ಇ.ಡಿ. ಮೂಲಗಳು ತಿಳಿಸಿವೆ.  ಅಷ್ಟೇ ಅಲ್ಲ, ನವಾಬ್​ ಮಲಿಕ್​ ಸೋದರಿಯೂ ಇಂದು ಇ.ಡಿ. ಕಚೇರಿಗೆ ಭೇಟಿ ನೀಡಿದ್ದರು. ಈ ಮಧ್ಯೆ ನವಾಬ್​ ಮಲಿಕ್​​​ರನ್ನು ಮಾರ್ಚ್​ 3ರವರೆಗೂ ಇ.ಡಿ.ಕಸ್ಟಡಿಗೆ ವಹಿಸಲಾಗಿದೆ.

ಭೂಗತ ಪಾತಕಿ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ದಾವೂದ್​ ಇಬ್ರಾಹಿಂ, ಆತನ ಸಹೋದರ ಅನೀಸ್​ ಇಕ್ಬಾಲ್​, ಸಹಾಯಕ ಚೋಟಾ ಶಕೀಲ್​ ಮತ್ತು ಇತರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಅಕ್ರಮ ಹಣವರ್ಗಾವಣೆ ಕೇಸ್​ ದಾಖಲಿಸಿರುವ ಇ.ಡಿ. ಕಳೆದ ವಾರ ಮುಂಬೈನಲ್ಲಿ ದಾವೂದ್​ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಸಂಬಂಧಪಟ್ಟ 10ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರೇಡ್​ ಮಾಡಿತ್ತು. ರಾಷ್ಟ್ರೀಯ ತನಿಖಾ ದಳ (NIA) ದಾಖಲಿಸಿದ್ದ ಎಫ್​ಐಆರ್​ ಆಧಾರದಲ್ಲಿ ಇ.ಡಿ. ಈ ದಾಳಿ ನಡೆಸಿ, ತನಿಖೆ ಕೈಗೆತ್ತಿಕೊಂಡಿದೆ.

ಮಹಾರಾಷ್ಟ್ರದಲ್ಲಿ ಇ.ಡಿ.ಬಂಧಿಸುತ್ತಿರುವ ಎರಡನೇ ಸಚಿವ ಈ ನವಾಬ್​ ಮಲಿಕ್​. ಈ ಹಿಂದೆ 2021ರ ನವೆಂಬರ್​1ರಂದು ತಡರಾತ್ರಿ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿಯಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​​ರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.  ಅವರನ್ನು ಬಂಧಿಸುವುದಕ್ಕೂ ಮೊದಲು ಸತತ 12 ಗಂಟೆ ವಿಚಾರಣೆಗೆ ಒಳಪಡಿಸಲಾಗಿತ್ತು. ಪೊಲೀಸ್‌ ಇಲಾಖೆಯಲ್ಲಿ ₹100 ಕೋಟಿ ರೂಪಾಯಿ ಲಂಚ ವಸೂಲಿ, ಸುಲಿಗೆ ಕುರಿತು ಮುಂಬೈ ಪೊಲೀಸ್‌ ಕಮಿಷನರ್‌ ಪರಮ್‌ಬೀರ್‌ ಸಿಂಗ್‌ ಅವರು ದೇಶ್​ಮುಖ್​ ವಿರುದ್ಧ ಆರೋಪ ಮಾಡಿದ್ದರು.

ಇದನ್ನೂ ಓದಿ: Stock Market Crash: ಸೆನ್ಸೆಕ್ಸ್ 2000ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ; 1 ಗಂಟೆಗೂ ಕಡಿಮೆ ಸಮಯದಲ್ಲಿ 8 ಲಕ್ಷ ಕೋಟಿ ನಷ್ಟ