AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big Breaking: ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನವಾಬ್​​ ಮಲಿಕ್​​ರನ್ನು ಬಂಧಿಸಿದ ಇ.ಡಿ.

ಕಳೆದ ವಾರ ಇ.ಡಿ.  ಮುಂಬೈನಲ್ಲಿ ದಾವೂದ್​ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಸಂಬಂಧಪಟ್ಟ 10ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರೇಡ್​ ಮಾಡಿತ್ತು. ರಾಷ್ಟ್ರೀಯ ತನಿಖಾ ದಳ (NIA) ದಾಖಲಿಸಿದ್ದ ಎಫ್​ಐಆರ್​ ಆಧಾರದಲ್ಲಿ ಇ.ಡಿ. ಈ ದಾಳಿ ನಡೆಸಿ, ತನಿಖೆ ಕೈಗೆತ್ತಿಕೊಂಡಿದೆ. 

Big Breaking: ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನವಾಬ್​​ ಮಲಿಕ್​​ರನ್ನು ಬಂಧಿಸಿದ ಇ.ಡಿ.
ನವಾಬ್​ ಮಲ್ಲಿಕ್​
TV9 Web
| Edited By: |

Updated on:Feb 23, 2022 | 4:41 PM

Share

ಭೂಗತ ಪಾತಕಿ ದಾವೂದ್​ ಇಬ್ರಾಹಿಂ (Dawood Ibrahim) ಮತ್ತು ಅಂಡರ್​ವರ್ಲ್ಡ್​​ನ ಇನ್ನಿತರ ಕೇಸ್​ಗೆ ಸಂಬಂಧಪಟ್ಟಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದ ಬೆನ್ನತ್ತಿರುವ ಜಾರಿ ನಿರ್ದೇಶನಾಲಯ ಅದರ ಒಂದು ಭಾಗವಾಗಿ ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನವಾಬ್​ ಮಲಿಕ್​ರನ್ನೂ ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ಮುಗಿದ ತಕ್ಷಣ ಇ.ಡಿ. ಅಧಿಕಾರಿಗಳು (Enforcement Directorate) ನವಾಬ್​ ಮಲ್ಲಿಕರ್​ರನ್ನು ಬಂಧಿಸಿದ್ದಾರೆ.

ಭೂಗತ ಪಾತಕಿ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ದಾವೂದ್​ ಇಬ್ರಾಹಿಂ, ಆತನ ಸಹೋದರ ಅನೀಸ್​ ಇಕ್ಬಾಲ್​, ಸಹಾಯಕ ಚೋಟಾ ಶಕೀಲ್​ ಮತ್ತು ಇತರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಅಕ್ರಮ ಹಣವರ್ಗಾವಣೆ ಕೇಸ್​ ದಾಖಲಿಸಿರುವ ಇ.ಡಿ., ಇದೇ ವಿಚಾರದಲ್ಲಿ ಅನೇಕ ರಾಜಕಾರಣಿಗಳ ಮೇಲೆ ಕಣ್ಗಾವಲು ಇಟ್ಟಿತ್ತು. ದಾವೂದ್ ಇಬ್ರಾಹಿಂ ಹಲವು ರಾಜಕಾರಣಿಗಳೊಂದಿಗೆ ಆಸ್ತಿ, ಹಣಕಾಸು ವ್ಯವಹಾರ ನಡೆಸಿದ್ದಾನೆ ಎಂಬ ಶಂಕೆಯಡಿ ವಿಚಾರಣೆ ನಡೆಸುತ್ತಿದೆ. ಹಾಗೇ, ನವಾಬ್​ ಮಲಿಕ್​​ರನ್ನು ಇಂದು ಬೆಳಗ್ಗೆ 8ಗಂಟೆಯಿಂದ ಇ.ಡಿ.ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

ಕಳೆದ ವಾರ ಇ.ಡಿ.  ಮುಂಬೈನಲ್ಲಿ ದಾವೂದ್​ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಸಂಬಂಧಪಟ್ಟ 10ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರೇಡ್​ ಮಾಡಿತ್ತು. ರಾಷ್ಟ್ರೀಯ ತನಿಖಾ ದಳ (NIA) ದಾಖಲಿಸಿದ್ದ ಎಫ್​ಐಆರ್​ ಆಧಾರದಲ್ಲಿ ಇ.ಡಿ. ಈ ದಾಳಿ ನಡೆಸಿ, ತನಿಖೆ ಕೈಗೆತ್ತಿಕೊಂಡಿದೆ.  ಈ ಹಿಂದೆ ದೇವೇಂದ್ರ ಫಡ್ನವೀಸ್​ ಮತ್ತು ನವಾಬ್​ ಮಲಿಕ್ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗಿತ್ತು. ಫಡ್ನವೀಸ್​ಗೆ ಭೂಗತ ಜಗತ್ತಿನ ನಂಟಿದೆ ಎಂದು ಮಲಿಕ್ ಆರೋಪಿಸಿದ್ದರು. ಅಷ್ಟೇ ಅಲ್ಲ, ಕೆಲವು ಅಂಡರ್​ವರ್ಲ್ಡ್​​ ಡಾನ್​​ಗಳ ಜತೆ ದೇವೇಂದ್ರ ಫಡ್ನವೀಸ್​ ಮತ್ತು ಅವರ ಪತ್ನಿ ಅಮೃತಾ ಫಡ್ನವೀಸ್ ನಿಂತಿದ್ದ ಫೋಟೋವನ್ನೂ ಬಿಡುಗಡೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಆರೋಪ ಮಾಡಿದ್ದ ದೇವೇಂದ್ರ ಫಡ್ನವೀಸ್​, ಮಹಾರಾಷ್ಟ್ರ ಸಚಿವ ನವಾಬ್​ ಮಲಿಕ್​ ಭೂಗತ ಲೋಕದೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರು ಸರ್ದಾರ್​ ಶಹವ್ಲಿ ಖಾನ್​ ಮತ್ತು ಸಲೀಂ ಪಟೇಲ್​​ನಿಂದ ಕೋಟ್ಯಂತರ ರೂಪಾಯಿ ಆಸ್ತಿಯನ್ನು ಕೇವಲ 30 ಲಕ್ ರೂಪಾಯಿಗೆ ಖರೀದಿ ಮಾಡಿದ್ದಾರೆ ಎಂದು ಹೇಳಿದ್ದರು. ಇದರಲ್ಲಿ ಶಹವ್ಲಿ ಖಾನ್​ ಎಂಬಾತ ದಾವೂದ್​ ಇಬ್ರಾಹಿಂನ ಆಪ್ತರಲ್ಲಿ ಒಬ್ಬ. ಹಾಗೇ, ಸಲೀಂ ಪಟೇಲ್​ ಎಂದರೆ ದಾವೂದ್ ಸಹೋದರಿ ಹಸೀನಾ ಪರ್ಕರ್​​ಗೆ ಅಂಗರಕ್ಷಕನಾಗಿದ್ದವನು.  ಈ ಆಸ್ತಿ ವ್ಯವಹಾರದ ಬಗ್ಗೆ ಸಹ ಇ.ಡಿ. ತನಿಖೆ ನಡೆಸುತ್ತಿದೆ.

ಇಂದು ಬಂಧಿತರಾದ ಬಳಿಕ ಪ್ರತಿಕ್ರಿಯೆ ನೀಡಿದ ನವಾಬ್​ ಮಲಿಕ್​, “ನಾನು ಖಂಡಿತ ಗೆಲ್ಲುತ್ತೇನೆ, ಯಾವುದೇ ಕಾರಣಕ್ಕೂ ತಲೆ ಬಾಗುವುದಿಲ್ಲ,” ಎಂದು ಹೇಳಿದ್ದಾರೆ.  ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಬಂಧನವಾದಾಗ, ಆ ಕೇಸ್​ ಉಸ್ತುವಾರಿ ವಹಿಸಿದ್ದ ಎನ್​ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ನವಾಬ್​ ಮಲಿಕ್​ ಸಮರ ಸಾರಿದ್ದು ಗೊತ್ತೇ ಇದೆ. ಸಮೀರ್​ ವಾಂಖೆಡೆ ಜಾತಿಯ ಬಗ್ಗೆಯೂ ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಮೀರ್ ವಾಂಖೆಡೆ, ಡ್ರಗ್ಸ್​ ಕೇಸ್​​​ನಲ್ಲಿ ನವಾಬ್​ ಮಲಿಕ್ ಅಳಿಯನನ್ನು ಅಂದರೆ ಮಗಳ ಗಂಡನನ್ನು ಬಂಧಿಸಿದ್ದಕ್ಕೆ ನನ್ನ ವಿರುದ್ಧ ದ್ವೇಷ ಸಾಧಿಸುತ್ತಾರೆ ಎಂದಿದ್ದರು. ಹೀಗೆ ನವಾಬ್​ ಮಲಿಕ್​ ಕಳೆದ ಹಲವು ತಿಂಗಳುಗಳಿಂದಲೂ ವಿವಾದದ ಕೇಂದ್ರಬಿಂದುವಾಗಿ ಉಳಿದಿದ್ದರು.

ಬಂಧಿತರಾದ ಎರಡನೇ ಸಚಿವ ಮಹಾರಾಷ್ಟ್ರದಲ್ಲಿ ಇ.ಡಿ.ಬಂಧಿಸುತ್ತಿರುವ ಎರಡನೇ ಸಚಿವ ಈ ನವಾಬ್​ ಮಲಿಕ್​. ಈ ಹಿಂದೆ 2021ರ ನವೆಂಬರ್​1ರಂದು ತಡರಾತ್ರಿ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿಯಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​​ರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.  ಅವರನ್ನು ಬಂಧಿಸುವುದಕ್ಕೂ ಮೊದಲು ಸತತ 12 ಗಂಟೆ ವಿಚಾರಣೆಗೆ ಒಳಪಡಿಸಲಾಗಿತ್ತು. ಪೊಲೀಸ್‌ ಇಲಾಖೆಯಲ್ಲಿ ₹100 ಕೋಟಿ ರೂಪಾಯಿ ಲಂಚ ವಸೂಲಿ, ಸುಲಿಗೆ ಕುರಿತು ಮುಂಬೈ ಪೊಲೀಸ್‌ ಕಮಿಷನರ್‌ ಪರಮ್‌ಬೀರ್‌ ಸಿಂಗ್‌ ಅವರು ದೇಶ್​ಮುಖ್​ ವಿರುದ್ಧ ಆರೋಪ ಮಾಡಿದ್ದರು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಇ.ಡಿ., ಅನಿಲ್​ ದೇಶ್​ಮುಖ್​ ಯಾವ ಪ್ರಶ್ನೆಗಳಿಗೂ ಸರಿಯಾಗಿ ಉತ್ತರಿಸುತ್ತಿಲ್ಲ. ನುಣುಚಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರನ್ನು ಬಂಧಿಸಲಾಗುತ್ತಿದೆ ಎಂದು ಹೇಳಿತ್ತು.

ಇದನ್ನೂ ಓದಿ: Health Tips: ವರ್ಕ್​ಔಟ್ ಮಾಡುವಾಗ ಎಷ್ಟು ಲೀಟರ್ ನೀರು ಕುಡಿಯಬೇಕು?; ಸರಿಯಾಗಿ ನೀರು ಕುಡಿಯದಿದ್ದರೆ ಏನಾಗುತ್ತದೆ?

Published On - 3:22 pm, Wed, 23 February 22

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ