AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಹಣ ವರ್ಗಾವಣೆ ಪ್ರಕರಣ; ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ಇಡಿ ವಶಕ್ಕೆ

Iqbal Kaskar: ಜಾರಿ ನಿರ್ದೇಶನಾಲಯ ಇಂದು ದಾವೂದ್ ಇಬ್ರಾಹಿಂ ಸಹೋದರ ಇಬ್ರಾಹಿಂ ಕಸ್ಕರ್​ನನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಕಸ್ಕರ್​ನನ್ನು ಬಂಧಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ; ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ಇಡಿ ವಶಕ್ಕೆ
ಇಕ್ಬಾಲ್ ಕಸ್ಕರ್ (ಸಂಗ್ರಹ ಚಿತ್ರ)
TV9 Web
| Updated By: shivaprasad.hs|

Updated on:Feb 18, 2022 | 4:14 PM

Share

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಮತ್ತು ಆತನ ಸಹಾಯಕರ ವಿರುದ್ಧ ದಾಖಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್​ನನ್ನು (Iqbal Kaskar) ಜಾರಿ ನಿರ್ದೇಶನಾಲಯ ಇಂದು (ಶುಕ್ರವಾರ, ಫೆ.18) ತನ್ನ ವಶಕ್ಕೆ ತೆಗೆದುಕೊಂಡಿದೆ. ಕಸ್ಕರ್ ಥಾಣೆ ಜೈಲಿನಲ್ಲಿದ್ದ. ಶೀಘ್ರದಲ್ಲೇ ವಿಶೇಷ ನ್ಯಾಯಾಲಯಕ್ಕೆ ಕಸ್ಕರ್​ನನ್ನು ಹಾಜರುಪಡಿಸಲಾಗುವುದು. ಈ ವಾರದ ಆರಂಭದಲ್ಲಿ, ಕಸ್ಕರ್ ಅವರನ್ನು ಪ್ರಶ್ನಿಸಲು ಅನುಮತಿ ಕೋರಿ ಇಡಿ ಅರ್ಜಿ ಸಲ್ಲಿಸಿತ್ತು. ನಂತರ ನ್ಯಾಯಾಲಯವು ಕಸ್ಕರ್ ವಿರುದ್ಧ ಪ್ರೊಡಕ್ಷನ್ ವಾರಂಟ್ ಹೊರಡಿಸಿತ್ತು. ಕಸ್ಕರ್ ವಿರುದ್ಧ 2017 ರಲ್ಲಿ ಥಾಣೆ ಪೊಲೀಸರು ಮೂರು ಸುಲಿಗೆ ಪ್ರಕರಣಗಳನ್ನು ದಾಖಲಿಸಿ, ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಆರೋಪ ಹೊರಿಸಿ ಜೈಲಿನಲ್ಲಿಟ್ಟಿದ್ದರು. ಸುಲಿಗೆ, ಮಾದಕವಸ್ತು ಕಳ್ಳಸಾಗಣೆ, ನಾಗ್ಪಾಡಾ ಮತ್ತು ಭೆಂಡಿ ಬಜಾರ್‌ನಲ್ಲಿ ರಿಯಲ್ ಎಸ್ಟೇಟ್ ಮಾರಾಟದ ಮೂಲಕ ಅಕ್ರಮವಾಗಿ ಹಣ ಪಡೆದುದಕ್ಕೆ ಸಂಬಂಧಿಸಿದ ಹಲವಾರು ಹವಾಲಾ ವಹಿವಾಟುಗಳನ್ನು ಪತ್ತೆಹಚ್ಚಿದ ನಂತರ ಇಬ್ರಾಹಿಂ, ಇಕ್ಬಾಲ್ ಮಿರ್ಚಿ, ಛೋಟಾ ಶಕೀಲ್, ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್ ಮತ್ತು ಜಾವೇದ್ ಚಿಕ್ನಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಇಡಿ ನಡೆಸುತ್ತಿದೆ.

1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಇಬ್ರಾಹಿಂ ಜತೆ ನಂಟು ಹೊಂದಿರುವ 10 ಸ್ಥಳಗಳಲ್ಲಿ ಇಡಿ ಶೋಧ ನಡೆಸಿದೆ. ಇದರ ಭಾಗವಾಗಿ ಕಸ್ಕರ್, ಛೋಟಾ ಶಕೀಲ್‌ನ ಸೋದರ ಮಾವ ಸಲೀಂ ಮತ್ತು ಪಾರ್ಕರ್ ಅವರ ಮಗ ಸೇರಿದಂತೆ ಮುಂಬೈನ 10 ನಿವೇಶನಗಳನ್ನು ಶೋಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ನ್ಯಾಯಾಲಯ ಕಸ್ಕರ್ ವಿರುದ್ಧ ಪ್ರೊಡಕ್ಷನ್ ವಾರೆಂಟ್ ಜಾರಿ ಮಾಡಿತ್ತು.

ಪ್ರೊಡಕ್ಷನ್ ವಾರೆಂಟ್ ಹೊರಡಿಸಿದ ವಿಶೇಷ ನ್ಯಾಯಾಧೀಶ ಎಂ.ಜಿ.ದೇಶಪಾಂಡೆ, ಆರೋಪಿಯನ್ನು ಫೆ.18ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಇಡಿ ಎಲ್ಲ ವ್ಯವಸ್ಥೆಗಳನ್ನು ಮಾಡಲಿದೆ ಎಂದು ಹೇಳಿದರು. ಇಬ್ರಾಹಿಂ ಮತ್ತು ಇತರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇತ್ತೀಚೆಗೆ ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಪ್ರಕರಣವನ್ನು ದಾಖಲಿಸಿದೆ.

ಇದನ್ನೂ ಓದಿ:

ಎನ್​ಎಸ್​ಇ ಮಾಜಿ ಸಿಇಒ ಚಿತ್ರ ರಾಮಕೃಷ್ಣ ವಿರುದ್ಧ ಲುಕ್​ಔಟ್ ನೊಟೀಸ್ ಜಾರಿ ಮಾಡಿದ ಸಿಬಿಐ

ನಾನು ಜಗತ್ತಿನ ಸ್ವೀಟೆಸ್ಟ್ ಟೆರರಿಸ್ಟ್ ; ಕುಮಾರ್ ವಿಶ್ವಾಸ್ ಆರೋಪ ನಿರಾಕರಿಸಿದ ಕೇಜ್ರಿವಾಲ್

Published On - 3:58 pm, Fri, 18 February 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?