ದೆಹಲಿ ಜನವರಿ 29: ದೆಹಲಿಯಲ್ಲಿರುವ (Delhi) ಹೇಮಂತ್ ಸೊರೆನ್ (Hemant Soren) ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ ಜಾರಿ ನಿರ್ದೇಶನಾಲಯದ ತಂಡಕ್ಕೆ ಜಾರ್ಖಂಡ್ (Jharkhand) ಮುಖ್ಯಮಂತ್ರಿಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಟಿವಿ ವರದಿಗಳು ತಿಳಿಸಿವೆ. ಜಾರ್ಖಂಡ್ ಮುಖ್ಯಮಂತ್ರಿ ಜನವರಿ 27 ರಂದು ರಾಂಚಿಯಿಂದ ದೆಹಲಿಗೆ ಬಂದಿದ್ದರು. ಜನವರಿ 29 ಅಥವಾ ಜನವರಿ 31 ರಂದು ವಿಚಾರಣೆಗೆ ಹಾಜರಾಗಲು ದೃಢೀಕರಿಸುವಂತೆ ಕಳೆದ ವಾರ ಜಾರಿ ನಿರ್ದೇಶನಾಲಯ ಸೊರೆನ್‌ಗೆ ಹೊಸ ಸಮನ್ಸ್‌ಗಳನ್ನು ನೀಡಿತ್ತು. ಸೊರೆನ್ ಅವರು ಇಡಿಗೆ ಪ್ರತಿಕ್ರಿಯೆ ಕಳುಹಿಸಿದ್ದಾರೆ. ಆದರೆ ವಿಚಾರಣೆಯ ದಿನಾಂಕ ಮತ್ತು ಸಮಯವನ್ನು ಖಚಿತಪಡಿಸಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.
ದೆಹಲಿ ಪೊಲೀಸ್ ಸಿಬ್ಬಂದಿಯೊಂದಿಗೆ ತನಿಖಾ ಸಂಸ್ಥೆಯ ಅಧಿಕಾರಿಗಳು ಬೆಳಿಗ್ಗೆ 9 ಗಂಟೆಗೆ ದಕ್ಷಿಣ ದೆಹಲಿಯ 5/1 ಶಾಂತಿ ನಿಕೇತನ ಕಟ್ಟಡವನ್ನು ತಲುಪಿದರು, ಹಲವಾರು ಪತ್ರಿಕಾ ಛಾಯಾಗ್ರಾಹಕರು, ವರದಿಗಾರರು ಮತ್ತು ಕ್ಯಾಮೆರಾ ತಂಡಗಳು ಹೊರಗೆ ನಿಂತಿದ್ದವು. ಆದರೆ, ಜಾರ್ಖಂಡ್ ಮುಖ್ಯಮಂತ್ರಿ ತಮ್ಮ ನಿವಾಸದಲ್ಲಿ ಇರಲಿಲ್ಲ.
VIDEO | ED officials arrive at Jharkhand CM Hemant Soren’s Delhi residence.
Last week, the ED issued a fresh summon to the Jharkhand CM, asking him to join the investigation in a money laundering case next week. pic.twitter.com/ONkbnr6jlW
— Press Trust of India (@PTI_News) January 29, 2024
ಜನವರಿ 20 ರಂದು ರಾಂಚಿಯಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ 7 ಗಂಟೆಗಳ ಸುದೀರ್ಘ ವಿಚಾರಣೆಯ ನಂತರ ಇಡಿ ಪ್ರಕರಣದಲ್ಲಿ ಮೊದಲ ಬಾರಿಗೆ ಸೊರೆನ್ ಅವರ ಹೇಳಿಕೆಯನ್ನು ದಾಖಲಿಸಿತ್ತು. ತನಿಖೆಯು ಜಾರ್ಖಂಡ್‌ನಲ್ಲಿ “ಮಾಫಿಯಾದಿಂದ ಭೂಮಿಯ ಮಾಲೀಕತ್ವದ ಅಕ್ರಮ ಬದಲಾವಣೆಯ ಬೃಹತ್ ದಂಧೆಗೆ” ಸಂಬಂಧಿಸಿದೆ ಎಂದು ಸಂಸ್ಥೆ ತಿಳಿಸಿದೆ.
ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರು ಮತ್ತು ರಾಂಚಿಯ ಡೆಪ್ಯುಟಿ ಕಮಿಷನರ್ ಆಗಿ ಸೇವೆ ಸಲ್ಲಿಸಿದ 2011 ರ ಬ್ಯಾಚ್ ಐಎಎಸ್ ಅಧಿಕಾರಿ ಛವಿ ರಂಜನ್ ಸೇರಿದಂತೆ 14 ಜನರನ್ನು ಇಡಿ ಈ ಪ್ರಕರಣದಲ್ಲಿ ಬಂಧಿಸಿದೆ.
ಇದನ್ನೂ ಓದಿ: Pariksha Pe Charcha: ಪರೀಕ್ಷೆಯ ಕುರಿತು ಮಕ್ಕಳಲ್ಲಿದ್ದ ಆತಂಕ ದೂರ ಮಾಡಿದ ಪ್ರಧಾನಿ ಮೋದಿ
ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ದೆಹಲಿ ನಿವಾಸಕ್ಕೆ ಜಾರಿ ನಿರ್ದೇಶನಾಲಯ ತಂಡ ಭೇಟಿ ನೀಡಿದ ವರದಿಗಳ ಹಿನ್ನೆಲೆಯಲ್ಲಿ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿರುವ ಸಿಎಂ ಮನೆ, ರಾಜಭವನ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಜನವರಿ 29 ರಂದು ಚೈಬಾಸಾದಲ್ಲಿ, ಜನವರಿ 30 ರಂದು ಪಲಮುದಲ್ಲಿ ಮತ್ತು ಜನವರಿ 31 ರಂದು ಗಿರಿದಿಹ್‌ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಸೋರೆನ್ ಭಾಗವಹಿಸಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ