ಮೋದಿ, ಶಾ ತಂತ್ರಕ್ಕೆ ಪ್ರತಿತಂತ್ರ , ಜಾರ್ಖಂಡ್​ಗೀಗ ಹೇಮಂತ್ ಸೋರೆನ್ ಸಾರ್ಮಾಟ

ಮೋದಿ, ಶಾ ತಂತ್ರಕ್ಕೆ ಪ್ರತಿತಂತ್ರ , ಜಾರ್ಖಂಡ್​ಗೀಗ ಹೇಮಂತ್ ಸೋರೆನ್ ಸಾರ್ಮಾಟ

ಜಾರ್ಖಂಡ್ ಚುನಾವಣೆ ರಿಸಲ್ಟ್​ನಲ್ಲಿ ಚುನಾವಣೋತ್ತರ ಸಮೀಕ್ಷೆಯ ಭವಿಷ್ಯ ನಿಜವಾಗಿದೆ. ಕಾಂಗ್ರೆಸ್, ಜೆಎಂಎಂ ಮತ್ತು ಆರ್​ಜೆಡಿ ನೇತೃತ್ವದ ಮೈತ್ರಿಕೂಟಕ್ಕೆ ಬಹುದೊಡ್ಡ ಗೆಲುವಾಗಿದೆ. ಮತ್ತೊಂದ್ಕಡೆ ಕೇಸರಿ ಪಾಳಯದ ಶಕ್ತಿಶಾಲಿ ಜೋಡಿಯ ರಣತಂತ್ರ ಬೇಧಿಸಿದ ಹೇಮಂತ್ ಸೊರೆನ್ ಬಗ್ಗೆ ರಾಜಕೀಯ ವಲಯದಲ್ಲೀಗೆ ಭಾರಿ ಚರ್ಚೆ ನಡೀತಿದೆ. ಜಾರ್ಖಂಡ್ ಚುಣಾವಣೆಯಲ್ಲಿ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದ ಕಮಲ ಪಾಳಯಕ್ಕೆ ಶಾಕ್ ಸಿಕ್ಕಿದೆ. ಈ ಹಿಂದೆ ಹರಿಯಾಣದಲ್ಲಿ ಅತಿ ಆತ್ಮವಿಶ್ವಾಸ ಬಿಜೆಪಿಗೆ ಮುಳುವಾಗಿ ಪರಿಣಮಿಸಿತ್ತು. ಮಹಾರಾಷ್ಟ್ರದಲ್ಲಿ ಹಠಮಾರಿತನದಿಂದಾಗಿ ಸರ್ಕಾರ ರಚನೆ ಅವಕಾಶವಿದ್ದರೂ ಪ್ರತಿಪಕ್ಷದಲ್ಲಿ ವಿರಾಜಮಾನವಾಗಿದೆ. ಇವುಗಳಿಂದ ಪಾಠ […]

sadhu srinath

|

Dec 24, 2019 | 8:14 AM

ಜಾರ್ಖಂಡ್ ಚುನಾವಣೆ ರಿಸಲ್ಟ್​ನಲ್ಲಿ ಚುನಾವಣೋತ್ತರ ಸಮೀಕ್ಷೆಯ ಭವಿಷ್ಯ ನಿಜವಾಗಿದೆ. ಕಾಂಗ್ರೆಸ್, ಜೆಎಂಎಂ ಮತ್ತು ಆರ್​ಜೆಡಿ ನೇತೃತ್ವದ ಮೈತ್ರಿಕೂಟಕ್ಕೆ ಬಹುದೊಡ್ಡ ಗೆಲುವಾಗಿದೆ. ಮತ್ತೊಂದ್ಕಡೆ ಕೇಸರಿ ಪಾಳಯದ ಶಕ್ತಿಶಾಲಿ ಜೋಡಿಯ ರಣತಂತ್ರ ಬೇಧಿಸಿದ ಹೇಮಂತ್ ಸೊರೆನ್ ಬಗ್ಗೆ ರಾಜಕೀಯ ವಲಯದಲ್ಲೀಗೆ ಭಾರಿ ಚರ್ಚೆ ನಡೀತಿದೆ.

ಜಾರ್ಖಂಡ್ ಚುಣಾವಣೆಯಲ್ಲಿ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದ ಕಮಲ ಪಾಳಯಕ್ಕೆ ಶಾಕ್ ಸಿಕ್ಕಿದೆ. ಈ ಹಿಂದೆ ಹರಿಯಾಣದಲ್ಲಿ ಅತಿ ಆತ್ಮವಿಶ್ವಾಸ ಬಿಜೆಪಿಗೆ ಮುಳುವಾಗಿ ಪರಿಣಮಿಸಿತ್ತು. ಮಹಾರಾಷ್ಟ್ರದಲ್ಲಿ ಹಠಮಾರಿತನದಿಂದಾಗಿ ಸರ್ಕಾರ ರಚನೆ ಅವಕಾಶವಿದ್ದರೂ ಪ್ರತಿಪಕ್ಷದಲ್ಲಿ ವಿರಾಜಮಾನವಾಗಿದೆ. ಇವುಗಳಿಂದ ಪಾಠ ಕಲಿತು ಜಾರ್ಖಂಡ್​ನಲ್ಲಿ ವಿಜಯ ಪತಾಕೆ ಹಾರಿಸುತ್ತೆ ಅನ್ನೋ ನಿರೀಕ್ಷೆ ಹುಸಿಯಾಗಿದ್ದು, ಆಡಳಿತ ವಿರೋಧಿ ಅಲೆಯಲ್ಲಿ ಬಿಜೆಪಿ ಕೊಚ್ಚಿ ಹೋಗಿದೆ. ಬಿಜೆಪಿ ಸೋಲೋದು ಇರಲಿ, ಸಿಎಂ ಆಗಿದ್ದ ರಘುಬರ್​ದಾಸ್ ಕೂಡ ಸೋತಿದ್ದಾರೆ. ಈ ಮೂಲಕ ಜಾರ್ಖಂಡ್ ಮತದಾರರು ಹೇಮಂತ್ ಸೋರೆನ್ ನೇತತ್ವದ ಜೆಎಂಎಂ-ಕಾಂಗ್ರೆಸ್-ಆರ್​ಜೆಡಿಗೆ ಜೈ ಎಂದಿದ್ದಾರೆ.

ದೇಶದಲ್ಲಿ ಬಿಜೆಪಿ ಪಡೆದುಕೊಳ್ತಿರೋ ರಾಜ್ಯಗಳಿಗಿಂತಲೂ ಕಳೆದುಕೊಳ್ತಿರೋ ರಾಜ್ಯಗಳೇ ಹೆಚ್ಚಾಗ್ತಿವೆ. ಇದಕ್ಕೆ ಲೇಟೆಸ್ಟ್ ಸೇರ್ಪಡೆ ಜಾರ್ಖಂಡ್. ಇದೇ ಮೊದಲ ಬಾರಿ 5 ವರ್ಷ ಪೂರ್ಣಾವಧಿ ಪೂರೈಸಿದ ಹೆಗ್ಗಳಿಕೆಗೆ ಗುರಿಯಾಗಿ, ಮತ್ತೊಮ್ಮೆ ಅಧಿಕಾರ ನಡೆಸಲು ಅವಕಾಶ ನೀಡುವಂತೆ ಮನವಿಮಾಡುತ್ತಾ ಸಿಎಂ ರಘುಬರ್​ದಾಸ್ ಜನರ ಬಳಿಗೆ ಹೋಗಿದ್ದರು. ಪೂರ್ಣಾವಧಿ ಪೂರೈಸಿದ ಮಾತ್ರಕ್ಕೆ ಮತ್ತೆ ಅವಕಾಶ ಕೊಡೊಕಾಗುತ್ತಾ ಅನ್ನೋ ರೀತಿ ಮತದಾರರು ಬಿಜೆಪಿಯನ್ನು ಸೋಲಿಸಿ ಪ್ರತಿಪಕ್ಷದ ಸ್ಥಾನಕ್ಕೆ ದೂಡಿದ್ದಾರೆ. ಬಿಜೆಪಿ ಸೋಲೋದಿರಲಿ. ಸ್ವತಃ ಸಿಎಂ ರಘುಬರ್​ದಾಸ್ ಸೋತು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಇಷ್ಟಕ್ಕೂ ಜಾರ್ಖಂಡ್​ನಲ್ಲಿ ಬಿಜೆಪಿ ಈ ಪರಿ ಸೋತು ಸುಣ್ಣವಾಗಿರೋದ್ಯಾಕೆ ಅನ್ನೋದನ್ನ ಇಲ್ಲಿ ನೋಡಿ.

‘ತಾವರೆ’ ಮುದುಡಿದ್ದು ಹೇಗೆ..? 2014ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ವೇಳೆ ಎಜೆಎಸ್​ಯು ಬೆಂಬಲ ಪಡೆದಿದ್ದ ಬಿಜೆಪಿ, ಬುಡಕಟ್ಟು ಜನಾಂಗಗಳ ಪ್ರಾಬಲ್ಯವಿದ್ದ ರಾಜ್ಯದಲ್ಲಿ ರಘುಬರ್​ದಾಸ್​ರನ್ನ ಸಿಎಂ ಮಾಡಿತ್ತು. ಅಲ್ದೆ, ಈ ಬಾರಿಯೂ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಅಂತಾ ಬಿಂಬಿಸಿತ್ತು. ಇದು ಬಿಜೆಪಿಗೆ ಮಾರಕವಾಗಿದೆ. ಇದರ ಜೊತೆಗೆ ಸರ್ಕಾರದ ಭಾಗವಾಗಿದ್ದ ಆಲ್​ ಜಾರ್ಖಂಡ್ ಸ್ಟೂಡೆಂಟ್ ಯೂನಿಯನ್, ಲೋಕ ಜನಶಕ್ತಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಿದ್ದರಿಂದ ಬಿಜೆಪಿ ಮತ್ತು ಮಿತ್ರಪಕ್ಷಗಳ ಮತಗಳು ಒಡೆದಿವೆ. ಎಲ್ಲಕ್ಕಿಂತಾ ಮುಖ್ಯವಾಗಿ ಬಿಜೆಪಿಯ ಪ್ರಮುಖ ನಾಯಕ, ಆರ್​ಎಸ್​ಎಸ್​ನ ಮಾಜಿ ನಾಯಕ ಗೋವಿಂದಾಚಾರ್ಯರ ಬೆಂಬಲಿಗ ಸರಯೂ ರಾಯ್ ಸಿಎಂ ರಘುಬರ್​ದಾಸ್ ವಿರುದ್ಧ ಬಂಡಾಯ ಎದ್ದಿದ್ರು.

ಈ ಬಂಡಾಯ ಶಮನ ಮಾಡೋ ಬದಲಿಗೆ ಅವರನ್ನೇ ಎದುರು ಹಾಕಿಕೊಂಡಿದ್ದರಿಂದ ಬಿಜೆಪಿಗೆ, ರಘುಬರ್​ದಾಸ್​ಗೂ ಹೊಡೆತ ಬಿದ್ದಿದೆ. ಮಹಾರಾಷ್ಟ್ರ, ಹರಿಯಾಣದಂತೆ ಜಾರ್ಖಂಡ್​ನಲ್ಲೂ ಸ್ಥಳೀಯ ನಾಯಕರ ಬದಲು ಮೋದಿ ಮೇಲೆ ಅತಿಯಾಗಿ ಅವಲಂಬಿತವಾಗಿದ್ದು ಮುಳುವಾಗಿದೆ. ಏನೇ ಆಡಳಿತ ವಿರೋಧಿ ಇದ್ರೂ, ಈ ಮಟ್ಟಿಗೆ ಬಿಜೆಪಿ ಸೋಲಿಗೆ ಕಾರಣ ಅಂದ್ರೆ, ಬುಡಕಟ್ಟು ಜನರ ಭೂ ಮಾಲೀಕತ್ವ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿತ್ತು. ಇದು ಸಹ ಬಿಜೆಪಿಗೆ ಶಾಕ್ ಕೊಟ್ಟಿದೆ. ಇನ್ನು, ಅರೆಕಾಲಿಕ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗಳನ್ನ ಸರ್ಕಾರ ಸರಿಯಾಗಿ ನಿಭಾಯಿಸಿರಲಿಲ್ಲ. ಇದರ ಜೊತೆಗೆ ಕಳೆದೆರಡು ವರ್ಷಗಳಿಂದ ಜಾರ್ಖಂಡ್​ ಲೋಕಸೇವಾ ಆಯೋಗ, ಜೆಎಸ್​ಎಸ್​ಸಿಯಲ್ಲಿ ಉದ್ಯೋಗಗಳ ಕೊರತೆ ಎದುರಾಗಿತ್ತು.

ಇದರ ಒಟ್ಟಾರೆ ಪರಿಣಾಮ ಗ್ರಾಮೀಣ ಆರ್ಥಿಕತೆಯಲ್ಲಿ ಕುಸಿತ ಕಂಡು ಬಂದಿತ್ತು. ಜೊತೆಗೆ ಬಿಜೆಪಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾರಿ ಗೊಂದಲ ಮಾಡಿಕೊಂಡಿತ್ತು. ಇದ್ರಿಂದ ಕೊನೆ ಕ್ಷಣದವರೆಗೆ ಯಾರಿಗೆ ಟಿಕೆಟ್ ಕೊಡ್ತಾರೆ ಅನ್ನೋ ಸ್ಪಷ್ಟತೆ ಇಲ್ಲದೆ ಬಿಜೆಪಿ ಸೋತಿದೆ. ಇದಕ್ಕೆ ವಿರುದ್ಧವಾಗಿ ಹೇಮಂತ್ ಸೋರೆನ್ ಸಿಎಂ ಎಂದು ಬಿಂಬಿಸಿ ಜೆಎಂಎಂ-ಕಾಂಗ್ರೆಸ್ ಭರ್ಜರಿ ಪ್ರಚಾರ ಮಾಡಿದ್ವು. ತಮ್ಮ ಪ್ರಚಾರದಲ್ಲಿ ಕೇಂದ್ರ ಮತ್ತು ರಘುಬರ್​ದಾಸ್ ಸರ್ಕಾರದ ವೈಫಲ್ಯಗಳನ್ನ ಜನರಿಗೆ ತಲುಪಿಸಲು ಜೆಎಂಎಂ-ಕಾಂಗ್ರೆಸ್​ ಸಕ್ಸಸ್ ಕಂಡಿದೆ. ಇದೆಲ್ಲದ್ರಿಂದಾಗಿ, ಜಾರ್ಖಂಡ್​ನಲ್ಲಿ ಕಮಲ ಮುದುಡಿದೆ.

Follow us on

Related Stories

Most Read Stories

Click on your DTH Provider to Add TV9 Kannada