ಮೀರತ್‌ಗೆ ತೆರಳದಂತೆ ರಾಹುಲ್, ಪ್ರಿಯಾಂಕಾಗೆ ತಡೆ

ಮೀರತ್‌ಗೆ ತೆರಳದಂತೆ ರಾಹುಲ್, ಪ್ರಿಯಾಂಕಾಗೆ ತಡೆ

ಲಕ್ನೋ: ಉತ್ತರ ಪ್ರದೇಶದ ಪೊಲೀಸರು ಇಂದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಇಬ್ಬರನ್ನೂ ಮೀರತ್​ಗೆ ತೆರಳದಂತೆ ಮೀರತ್ ಬಳಿಯೇ ತಡೆದಿದ್ದಾರೆ. ಕಳೆದ ವಾರ ಮೀರತ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ 6 ಪ್ರತಿಭಟನಾಕಾರರು ಮೃತಪಟ್ಟಿದ್ದರು. ಮೃತಪಟ್ಟ ಕುಟುಂಬಸ್ಥರ ಭೇಟಿಗಾಗಿ ತೆರಳಿದ್ದ ವೇಳೆ ಮೀರತ್​ನಲ್ಲೇ ಕಾಂಗ್ರೆಸ್​ನ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯನ್ನು ತಡೆದಿದ್ದಾರೆ. ಹಾಗೂ ಮೀರತ್​ನಲ್ಲಿ ನಿಷೇಧಾಜ್ಞೆ ಇರುವುದರಿಂದ ಹೋಗಲಾಗುವುದಿಲ್ಲ ಆದರಿಂದ ನಿಮ್ಮ ಭೇಟಿಯನ್ನು ಮುಂದೂಡಿ ಎಂದು ಉತ್ತರ ಪ್ರದೇಶ ಪೊಲೀಸರು […]

sadhu srinath

|

Dec 24, 2019 | 2:39 PM

ಲಕ್ನೋ: ಉತ್ತರ ಪ್ರದೇಶದ ಪೊಲೀಸರು ಇಂದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಇಬ್ಬರನ್ನೂ ಮೀರತ್​ಗೆ ತೆರಳದಂತೆ ಮೀರತ್ ಬಳಿಯೇ ತಡೆದಿದ್ದಾರೆ. ಕಳೆದ ವಾರ ಮೀರತ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ 6 ಪ್ರತಿಭಟನಾಕಾರರು ಮೃತಪಟ್ಟಿದ್ದರು.

ಮೃತಪಟ್ಟ ಕುಟುಂಬಸ್ಥರ ಭೇಟಿಗಾಗಿ ತೆರಳಿದ್ದ ವೇಳೆ ಮೀರತ್​ನಲ್ಲೇ ಕಾಂಗ್ರೆಸ್​ನ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯನ್ನು ತಡೆದಿದ್ದಾರೆ. ಹಾಗೂ ಮೀರತ್​ನಲ್ಲಿ ನಿಷೇಧಾಜ್ಞೆ ಇರುವುದರಿಂದ ಹೋಗಲಾಗುವುದಿಲ್ಲ ಆದರಿಂದ ನಿಮ್ಮ ಭೇಟಿಯನ್ನು ಮುಂದೂಡಿ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada