ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ವರ್ಷದ ಮೊದಲ ಯುರೋಪ್ ಪ್ರವಾಸದಲ್ಲಿ(Europe visit) ಜರ್ಮನಿಗೆ (Germany) ತೆರಳುವ ಮುನ್ನ ಹೇಳಿಕೆಯೊಂದನ್ನು ಪ್ರಕಟಿಸಿದ್ದು ಆ ಪ್ರದೇಶಗಳು ಅನೇಕ ಸವಾಲುಗಳು ಮತ್ತು ಆಯ್ಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ನನ್ನ ಯುರೋಪ್ ಭೇಟಿ ಬರುತ್ತದೆ. ನನ್ನ ಈ ಭೇಟಿ ಮೂಲಕ ಶಾಂತಿ ಮತ್ತು ಸಮೃದ್ಧಿಗಾಗಿ ಭಾರತದ ಅನ್ವೇಷಣೆಯಲ್ಲಿ ಪ್ರಮುಖ ಸಹಚರರಾಗಿರುವ ನಮ್ಮ ಯುರೋಪಿಯನ್ ಪಾಲುದಾರರೊಂದಿಗೆ ಸಹಕಾರದ ಮನೋಭಾವವನ್ನು ಬಲಪಡಿಸಲು ನಾನು ಉದ್ದೇಶಿಸಿದ್ದೇನೆ ಎಂದಿದ್ದಾರೆ. ಉಕ್ರೇನ್ ಯುದ್ಧವು ಒಂಬತ್ತನೇ ವಾರ ತಲುಪಿದ್ದು ಈ ಹೊತ್ತಲ್ಲಿ ಪ್ರಧಾನಿ ಮೋದಿಯವರ ಯುರೋಪ್ ಭೇಟಿ ಬಂದಿದೆ. ಮೋದಿ ಅವರು ಬರ್ಲಿನ್‌ನಲ್ಲಿ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಕೋಪನ್ ಹ್ಯಾಗನ್‌ನಲ್ಲಿ ಡೆನ್ಮಾರ್ಕ್ ಪಿಎಂ ಮೆಟ್ಟೆ ಫ್ರೆಡೆರಿಕ್ಸೆನ್ ಮತ್ತು ಪ್ಯಾರಿಸ್‌ನಲ್ಲಿ ಫ್ರಾನ್ಸ್‌ನ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿ ಮಾಡಲಿದ್ದಾರೆ. “ಅಧ್ಯಕ್ಷ ಮ್ಯಾಕ್ರನ್ ಇತ್ತೀಚೆಗೆ ಮರು ಆಯ್ಕೆಯಾಗಿದ್ದಾರೆ. ಫಲಿತಾಂಶದ ಕೇವಲ ಹತ್ತು ದಿನಗಳ ನಂತರ ನನ್ನ ಭೇಟಿಯು ನನ್ನ ಅಭಿನಂದನೆಗಳನ್ನು ವೈಯಕ್ತಿಕವಾಗಿ ತಿಳಿಸಲು ಅವಕಾಶ ನೀಡುತ್ತದೆ. ಅದೇ ವೇಳೆ ಎರಡು ದೇಶಗಳ ನಡುವಿನ ನಿಕಟ ಸ್ನೇಹವನ್ನು ಪುನರುಚ್ಚರಿಸುತ್ತದೆ. ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯ ಮುಂದಿನ ಹಂತದ ಧ್ವನಿಯನ್ನು ಹೊಂದಿಸಲು ಇದು ನಮಗೆ ಅವಕಾಶವನ್ನು ನೀಡುತ್ತದೆ ಎಂದು ಪ್ರಧಾನಿ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಪ್ರಧಾನಿ ಮೋದಿ ಅವರು ಜರ್ಮನಿ, ಫ್ರಾನ್ಸ್ ಮತ್ತು ಡೆನ್ಮಾರ್ಕ್ ಪ್ರವಾಸದ ಸಮಯದಲ್ಲಿ ಉಕ್ರೇನ್ ಬಗ್ಗೆ ಭಾರತದ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ” ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. “ನಮ್ಮಿಬ್ಬರಿಗೂ ಸಂಬಂಧಿಸಿದ ಕಾರ್ಯತಂತ್ರದ, ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು” ದೃಷ್ಟಿಕೋನಗಳ ವಿನಿಮಯವು ಜರ್ಮನ್ ಚಾನ್ಸೆಲರ್ ಅವರೊಂದಿಗಿನ ಅವರ ಭೇಟಿಯ ಕೇಂದ್ರಬಿಂದುವಾಗಿದೆ ಎಂದು ಅವರು ಹೇಳಿದರು.
In Germany and Denmark, I would be meeting business leaders to discuss ways to boost trade and commerce between our nations. I’m also glad to be meeting the Indian community in these nations. https://t.co/I7TdxcsgVf
— Narendra Modi (@narendramodi) May 1, 2022
ಸೋಮವಾರದಿಂದ ಎರಡು ದಿನಗಳ ಕಾಲ ಪ್ರಧಾನಿ ಜರ್ಮನಿಯಲ್ಲಿರುತ್ತಾರೆ. ಮುಂದಿನ ಎರಡು ದಿನಗಳಲ್ಲಿ, ಅವರು ಭಾರತ-ನಾರ್ಡಿಕ್ ಶೃಂಗಸಭೆಯ ಎರಡನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಡೆನ್ಮಾರ್ಕ್ಗೆ ಹೋಗಲಿದ್ದಾರೆ. ಇದಾದ ನಂತರ ಅಲ್ಲಿಂದ ವಾಪಸ್ ಬರುವಾಗ ಮೊದಲು ಪ್ಯಾರಿಸ್‌ಗೆ ಭೇಟಿ ನೀಡಲಿದ್ದಾರೆ.
“ಬರ್ಲಿನ್‌ಗೆ ನನ್ನ ಭೇಟಿಯು ಚಾನ್ಸೆಲರ್ ಸ್ಕೋಲ್ಜ್ ಅವರೊಂದಿಗೆ ವಿವರವಾದ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲು ಒಂದು ಅವಕಾಶವಾಗಿದೆ, ಅವರನ್ನು ನಾನು ಕಳೆದ ವರ್ಷ ಜಿ20 ನಲ್ಲಿ ವೈಸ್ ಚಾನ್ಸಲರ್ ಮತ್ತು ಹಣಕಾಸು ಸಚಿವರಾಗಿದ್ದಾಗ ಭೇಟಿಯಾಗಿದ್ದೇನೆ. ನಾವು 6 ನೇ ಭಾರತ-ಜರ್ಮನಿ ಇಂಟರ್ ಗವರ್ನ್ಮೆಂಟಲ್ ಕನ್ಸಲ್ಚೇಷನ್ ನ ಅಧ್ಯಕ್ಷತೆ ವಹಿಸಲಿದ್ದೇನೆ. ಹಲವಾರು ಭಾರತೀಯ ಸಚಿವರು ಜರ್ಮನಿಗೆ ಪ್ರಯಾಣಿಸುತ್ತಾರೆ ಮತ್ತು ಅವರ ಜರ್ಮನ್ ಸಚಿವರೊಂದಿಗೆ ಸಮಾಲೋಚನೆ ನಡೆಸುತ್ತಾರೆ” ಎಂದು ಅವರು ಹೇಳಿದರು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ