ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಉತ್ಸವದ ವೇಳೆ ಫ್ಲೆಕ್ಸ್ನಲ್ಲಿ ಮಾಜಿ ನೀಲಿ ತಾರೆ ಮಿಯಾ ಖಲೀಫಾ(Mia Khalifa) ಅವರ ಫೋಟೊ ಹಾಕಲಾಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಕುರುವಿಮಲೈನ ನಾಗತಮ್ಮನ್ ಮತ್ತು ಸೆಲ್ಲಿಯಮ್ಮನ್ ದೇವಾಲಯಗಳ ಸಮೀಪದ ಹೋರ್ಡಿಂಗ್ಗಳನ್ನು ಹಾಕಲಾಗಿತ್ತು. ಅದರಲ್ಲಿ ಕಲಶ ಹೊತ್ತ ಮಿಯಾ ಖಲೀಫಾರ ಚಿತ್ರವೂ ಇತ್ತು.
ಈ ಹೋರ್ಡಿಂಗ್ ರಾಜ್ಯದಾದ್ಯಂತ ದೇವಾಲಯಗಳಲ್ಲಿ ದೇವಿ ಅಮ್ಮನ್ ಅಂದರೆ ಪಾರ್ವತಿ ಪೂಜಿಸುವ ‘ಆದಿ’ ಹಬ್ಬದ ಸಂದರ್ಭದಲ್ಲಿ ಕಂಡುಬಂದಿದೆ. ಇದು ಸ್ಥಳೀಯರ ಕೆಂಗಣ್ಣಿಗೆ ಕಾರಣವಾಗಿದೆ.
ಹಬ್ಬದ ಅಲಂಕಾರವಾಗಿ ಹಲವು ಹೋರ್ಡಿಂಗ್ಗಳಿಗೆ ದೀಪದ ಅಲಂಕಾರ ಮಾಡಲಾಗಿದೆ. ಹೋರ್ಡಿಂಗ್ ಒಂದರಲ್ಲಿ ಮಿಯಾ ಖಲೀಫಾ ಅವರ ಚಿತ್ರವನ್ನು ನೋಡಿ ಜನರು ಬೆಚ್ಚಿ ಬಿದ್ದಿದ್ದಾರೆ.
ಮತ್ತಷ್ಟು ಓದಿ: Mia Khalifa: ‘ಬಿಗ್ ಬಾಸ್ ಒಟಿಟಿ’ಗೆ ಮಾಜಿ ಅಡಲ್ಟ್ ಸ್ಟಾರ್? ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪಿಗೂ ಆಹ್ವಾನ
ಈ ವಿವಾದಾತ್ಮಕ ಹೋರ್ಡಿಂಗ್‌ನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸ್ಥಳೀಯ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಪೋಲೀಸರು ಈ ಹೋರ್ಡಿಂಗ್ ತೆಗೆದು ತನಿಖೆ ಆರಂಭಿಸಿದರು.
ಮಿಯಾ ಖಲೀಫಾ ಹಬ್ಬದ ಹೋರ್ಡಿಂಗ್‌ಗಳಲ್ಲಿ ದೇವರು ಮತ್ತು ದೇವತೆಗಳ ಚಿತ್ರಗಳ ಜೊತೆಗೆ ‘ಪಾಲ್ ಕುದ್ದಮ್’ (ಹಾಲಿನ ಕಲಶ) ಹಿಡಿದಿರುವುದು ಕಂಡುಬಂದಿದೆ. ಈ ಹಬ್ಬದಲ್ಲಿ ಭಕ್ತರು ತಮ್ಮ ಹಣೆಯ ಮೇಲೆ ಹಾಲಿನ ಕಳಶ ಹೊತ್ತುಕೊಂಡು ದೇವಸ್ಥಾನಗಳಲ್ಲಿರುವ ದೇವರು ಮತ್ತು ದೇವತೆಗಳಿಗೆ ಅರ್ಪಿಸುತ್ತಾರೆ.
Kuruvimalai, Tamil Nadu: An image of Mia Khalifa was used on a hoarding for the Aadi Perukku festival carrying a traditional milk vessel. Magaral Police Station removed the hoarding pic.twitter.com/xYRcuJqIOb
— IANS (@ians_india) August 8, 2024
ಹೋರ್ಡಿಂಗ್ ಹಾಕಿದ್ದ ವ್ಯಕ್ತಿ ಮಿಯಾನ್ ಖಲೀಫಾ ಅವರ ಫೋಟೋ ಮಾತ್ರವಲ್ಲದೆ ಅವರದೇ ಫೋಟೋವನ್ನೂ ಆಧಾರ್ ಕಾರ್ಡ್ ರೂಪದಲ್ಲಿ ಹಾಕಿದ್ದರು. ಆದರೆ, ನಂತರ ಮ್ಯಾಗರಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆಬದಿಯಲ್ಲಿದ್ದ ಹೋರ್ಡಿಂಗ್ ತೆಗೆದರು. ಹೋರ್ಡಿಂಗ್‌ನ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಜನ ಕಾಮೆಂಟ್ ಕೂಡ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:47 am, Fri, 9 August 24