
ಭೋಪಾಲ್ : ಬಿಜೆಪಿಯ ಮಾಜಿ ಕಾರ್ಪೊರೇಟರ್ (Ex BJP corporator) ಮತ್ತು ಅವರ ಪತ್ನಿ ಗುರುವಾರ ಸಂಜೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಸ್ನಾಯುಕ್ಷಯದಿಂದ ಬಳಲುತ್ತಿದ್ದ ತಮ್ಮ ಇಬ್ಬರು ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಸಂಜೀವ್ ಮಿಶ್ರಾ (45), ಅವರ ಪತ್ನಿ ನೀಲಂ (42), ಮತ್ತು ಅವರ ಮಕ್ಕಳಾದ ಅನ್ಮೋಲ್ (13) ಮತ್ತು ಸಾರ್ಥಕ್ (7) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಮಕ್ಕಳ ಅನಾರೋಗ್ಯದ ಕಾರಣ ದಂಪತಿಗಳು ಒತ್ತಡಕ್ಕೊಳಗಾಗಿದ್ದರು.
“ದೇವರು ಶತ್ರುಗಳ ಮಕ್ಕಳನ್ನೂ ಈ ಕಾಯಿಲೆಯಿಂದ ರಕ್ಷಿಸಲಿ… ಮಕ್ಕಳನ್ನು ಉಳಿಸಲು ನನಗೆ ಸಾಧ್ಯವಾಗುತ್ತಿಲ್ಲ, ನಾನು ಇನ್ನು ಮುಂದೆ ಬದುಕಲು ಬಯಸುವುದಿಲ್ಲ” ಎಂದು ಮಿಶ್ರಾ ಟ್ವೀಟ್ ಮಾಡಿದ್ದರು.
ವಿದಿಶಾ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಸ್ಥಳಕ್ಕಾಗಮಿಸಿ ಬೀಗ ಹಾಕಿದ ಬಾಗಿಲು ಒಡೆದು ನಾಲ್ವರು ಕುಟುಂಬಸ್ಥರನ್ನು ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ವೇಳೆ ನಾಲ್ವರು ಮೃತಪಟ್ಟಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ