Petrol Price on January 28: ಪೆಟ್ರೋಲ್, ಡೀಸೆಲ್ ಬೆಲೆ ಮೈಸೂರು ಸೇರಿ ಕೆಲ ನಗರಗಳಲ್ಲಿ ಅಲ್ಪ ಏರಿಕೆ
Fuel Price Today: ಇಂದು ಶನಿವಾರ ಮೈಸೂರು, ಪುಣೆ, ರಾಂಚಿ ಮೊದಲಾದ ಕೆಲ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತುಸು ಏರಿಕೆ ಕಂಡಿದೆ. ನೋಯ್ಡಾ ಸೇರಿ ಕೆಲವೆಡೆ ಇಳಿಕೆಯಾಗಿದೆ. ಬೆಂಗಳೂರು ಸೇರಿ ಬಹುತೇಕ ಕಡೆ ಪೆಟ್ರೋಲ್ ಬೆಲೆ ಯಥಾಸ್ಥಿತಿಯಲ್ಲಿದೆ.
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ (Fuel Price) ಇಂದು ಶನಿವಾರ ತುಸು ಇಳಿಕೆ ಕಂಡಿದೆ. ಬ್ರೆಂಟ್ ಕಚ್ಚಾ (Brent Crude Price) ತೈಲ ಇಂದು (ಶನಿವಾರ) ಬೆಳಿಗ್ಗೆ ಪ್ರತಿ ಬ್ಯಾರೆಲ್‌ಗೆ 1.14 ಡಾಲರ್ ಕಡಿಮೆಯಾಗಿ 86.33 ಡಾಲರ್ಗೆ ಇಳಿದಿದೆ. WTI ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 1.33 ಡಾಲರ್ ಕಡಿಮೆಯಾಗಿ 79.68 ಡಾಲರ್ಗೆ ಕುಸಿದಿದೆ.
ಆದರೆ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ (Petrol and Diesel Prices) ಬಹುತೇಕ ಯಥಾಸ್ಥಿತಿಯಲ್ಲಿದೆ. ಮೈಸೂರು, ಪುಣೆ, ರಾಂಚಿ, ಚೆನ್ನೈ, ನಾಗಪುರ, ಪಾಟ್ನಾ ಮೊದಲಾದ ಕೆಲ ನಗರಗಳಲ್ಲಿ ಪೆಟ್ರೋಲ್ ಬೆಲೆ ತುಸು ಏರಿಕೆ ಕಂಡಿದೆ. ಅಹ್ಮದಾಬಾದ್ನಲ್ಲಿ ಗರಿಷ್ಠ 68 ಪೈಸೆಯಷ್ಟು ಏರಿಕೆಯಾಗಿದೆ.
ನೋಯ್ಡಾ, ಕಾನ್ಪುರ, ಆಗ್ರಾ, ಘಾಜಿಯಾಬಾದ್, ವಿಶಾಖಪಟ್ಟಣಂ ಮೊದಲಾದ ಕೆಲವೇ ನಗರಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬೆಲೆ ಇಳಿಕೆಯಾಗಿದೆ. ಉಳಿದಂತೆ ಬೆಂಗಳೂರು ಸೇರಿ ಬಹುತೇಕ ಕಡೆ ಪೆಟ್ರೋಲ್ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಂಗಳೂರಿನಲ್ಲಿ (Petrol Price in Bengaluru) ಇಂದು ಪೆಟ್ರೋಲ್ ಬೆಲೆ ಒಂದು ಲೀಟರ್‌ಗೆ 101.94 ರೂಪಾಯಿ ಇದೆ. ಡೀಸೆಲ್ ಬೆಲೆ ಲೀಟರ್‌ಗೆ 87.89 ರೂ ಇದೆ.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ:
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 101.94 ರೂ ಮತ್ತು ಡೀಸೆಲ್ ಬೆಲೆ 87.89 ರೂ ಇದೆ.
* ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96.72 ರೂ. ಮತ್ತು ಡೀಸೆಲ್ ಬೆಲೆ 89.62 ರೂ. ಆಗಿದೆ. * ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 106.31 ರೂ. ಮತ್ತು ಡೀಸೆಲ್ ಬೆಲೆ 94.27 ರೂ. ಆಗಿದೆ. * ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 102.63 ರೂ. ಮತ್ತು ಡೀಸೆಲ್ 94.24 ರೂ. ಆಗಿದೆ. * ಕೊಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 106.03 ರೂ. ಮತ್ತು ಡೀಸೆಲ್ ಬೆಲೆ 92.76 ರೂ. ಆಗಿದೆ. * ನೊಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96.65 ರೂ. ಮತ್ತು ಡೀಸೆಲ್ ಬೆಲೆ 89.82 ರೂ. ಆಗಿದೆ. * ಘಾಜಿಯಾಬಾದ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96.58 ರೂ. ಮತ್ತು ಡೀಸೆಲ್ ಬೆಲೆ 89.75 ರೂ. ಆಗಿದೆ. * ಪಾಟ್ನಾದಲ್ಲಿ ಪೆಟ್ರೋಲ್ ಲೀಟರ್‌ಗೆ 107.24 ರೂ. ಮತ್ತು ಡೀಸೆಲ್ 94.86 ರೂ. ಆಗಿದೆ. * ತಿರುವನಂತಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 107.71 ರೂ. ಮತ್ತು ಡೀಸೆಲ್ ಬೆಲೆ 97.98 ರೂ. ಆಗಿದೆ. * ಹೈದರಾಬಾದ್ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 109.66 ರೂ ಮತ್ತು ಡೀಸೆಲ್ ಬೆಲೆ 97.82 ರೂ ಆಗಿದೆ.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗುತ್ತದೆ. ಹೊಸ ದರಗಳು ಬೆಳಗ್ಗೆ 6 ಗಂಟೆಯಿಂದಲೇ ಅನ್ವಯವಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್, ವ್ಯಾಟ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆ ಮೂಲ ಬೆಲೆಗಿಂತ ದ್ವಿಗುಣಗೊಳ್ಳುತ್ತದೆ. ಇದೇ ಕಾರಣಕ್ಕೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ.
ನೀವು ಎಸ್‌ಎಂಎಸ್ ಮೂಲಕ ಪೆಟ್ರೋಲ್ ಡೀಸೆಲ್‌ನ ದೈನಂದಿನ ದರವನ್ನು ಸಹ ತಿಳಿಯಬಹುದು. ಇಂಡಿಯನ್ ಆಯಿಲ್ ಗ್ರಾಹಕರು RSP ಮತ್ತು ಅವರ ಸಿಟಿ ಕೋಡ್ ಮತ್ತು BPCL ಗ್ರಾಹಕರು RSP ಮತ್ತು ಅವರ ಸಿಟಿ ಕೋಡ್ ಅನ್ನು 9223112222ಗೆ ಟೈಪ್ ಮಾಡುವ ಮೂಲಕ 9224992249ಗೆ SMS ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು. HPCL ಗ್ರಾಹಕರು HPPrice ಮತ್ತು ಅವರ ಸಿಟಿ ಕೋಡ್ ಅನ್ನು 9222201122ಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು.