Exit Poll Result 2021: ಪಂಚರಾಜ್ಯಗಳ ಚುನಾವಣೆ: ಇಂದು ಸಂಜೆ ಹೊರಬೀಳಲಿದೆ ಚುನಾವಣೋತ್ತರ ಸಮೀಕ್ಷೆ

| Updated By: Digi Tech Desk

Updated on: Apr 29, 2021 | 5:52 PM

Exit Poll Result 2021 Today Time: ಬಂಗಾಳದಲ್ಲಿ ನಡೆದ ರಾಜಕೀಯ ನಾಟಕೀಯ ತಿರುವುಗಳು ದಕ್ಷಿಣ ಭಾರತೀಯರನ್ನೂ ಎಂದೂ ಇಲ್ಲದ ಆಸಕ್ತಿಯಿಂದ ಕತ್ತನ್ನು ಅತ್ತ ತಿರುವುವಂತೆ ಮಾಡಿತು. ಕರ್ನಾಟಕದಂತಹ ದಕ್ಷಿಣ ಭಾರತದ ರಾಜ್ಯವೂ ಸಹ ಪಶ್ಚಿಮ ಬಂಗಾಳದಲ್ಲಿ ಏನಾಗಲಿದೆ ಎಂದು ಪ್ರತಿದಿನ ಕುತೂಹಲದಿಂದ ಕಾಯುತ್ತಿತ್ತು.  ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಸಿಎಂ ಆಗಲಿದ್ದಾರಾ? ಎಂಬುದು ಸದ್ಯದ ಮಟ್ಟಿಗಿನ ಮಿಲಿಯನ್ ಡಾಲರ್ ಪ್ರಶ್ನೆ.

Exit Poll Result 2021: ಪಂಚರಾಜ್ಯಗಳ ಚುನಾವಣೆ: ಇಂದು ಸಂಜೆ ಹೊರಬೀಳಲಿದೆ ಚುನಾವಣೋತ್ತರ ಸಮೀಕ್ಷೆ
ತಮಿಳುನಾಡು ಚುನಾವಣೆಯಲ್ಲಿ ಮತಚಲಾಯಿಸಿದ ನಂತರ ಫೋಟೋಕ್ಕೆ ಪೋಸ್​ ಕೊಟ್ಟ ರಜಿನಿಕಾಂತ್​
Follow us on

ನಾಲ್ಕು ರಾಜ್ಯಗಳ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಇಂದು ಸಂಜೆ ಹೊರಬೀಳಲಿದೆ. ಇಂದು ಪಶ್ಚಿಮ ಬಂಗಾಳದಲ್ಲಿ ನಡೆದ ಕೊನೆಯ ಹಂತದ ಮತದಾನವೇ ಈ ಎಲ್ಲ ಚುನಾವಣೆಗಳ ಅಂತಿಮ ಹಂತದ ಮತದಾನವಾಗಿದ್ದು, ಚುನಾವಣೋತ್ತರ ಸಮೀಕ್ಷೆಯ ಮೇಲೆ ದೇಶದ ದೃಷ್ಟಿ ನೆಟ್ಟಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೊವಿಡ್ ಸೋಂಕಿನ ನಡುವೆಯೂ ಜನಾದೇಶವನ್ನು ಅಂದಾಜಿಸುವ ಹಲವು ಫಲಿತಾಂಶಗಳು ಇಂದು ಸಂಜೆ ಏಳು ಗಂಟೆಯ ನಂತರ ಹೊರಬೀಳಲಿವೆ.

ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆ ಕೇವಲ ಚುನಾವಣೆಯೊಂದಷ್ಟೇ ಆದಂತೆ ಭಾಸವಾಗಲಿಲ್ಲ. ಬಂಗಾಳದಲ್ಲಿ ನಡೆದ ರಾಜಕೀಯ ನಾಟಕೀಯ ತಿರುವುಗಳು ದಕ್ಷಿಣ ಭಾರತೀಯರನ್ನೂ ಎಂದೂ ಇಲ್ಲದ ಆಸಕ್ತಿಯಿಂದ ಕತ್ತನ್ನು ಅತ್ತ ತಿರುವುವಂತೆ ಮಾಡಿತು. ಕರ್ನಾಟಕದಂತಹ ದಕ್ಷಿಣ ಭಾರತದ ರಾಜ್ಯವೂ ಸಹ ಪಶ್ಚಿಮ ಬಂಗಾಳದಲ್ಲಿ ಏನಾಗಲಿದೆ ಎಂದು ಪ್ರತಿದಿನ ಕುತೂಹಲದಿಂದ ಕಾಯುತ್ತಿತ್ತು.  ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಸಿಎಂ ಆಗಲಿದ್ದಾರಾ? ಎಂಬುದು ಸದ್ಯದ ಮಟ್ಟಿಗಿನ ಮಿಲಿಯನ್ ಡಾಲರ್ ಪ್ರಶ್ನೆ.  ದಕ್ಷಿಣ ಭಾರತದ ತಮಿಳುನಾಡು, ಕೇರಳ ಮತ್ತು ಪುದುಚೇರಿಗಳಲ್ಲೂ ಚುನಾವಣೆಯ ಭರಾಟೆ ಗಗನಕ್ಕೇರಿತ್ತು. ಕರ್ನಾಟಕದ ಪಕ್ಕದ ತಮಿಳುನಾಡು ವಿಧಾನಸಭಾ ಚುನಾವಣೆ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರ ನಿಧನದ ನಂತರ ಡಿಎಂಕೆ-ಎಐಎಡಿಎಂಕೆ ನಡುವಿನ ಹಣಾಹಣಿಯಾಗಿ ಮಾರ್ಪಟ್ಟಿತ್ತು. ತಮಿಳುನಾಡಿನ ಗದ್ದುಗೆಯನ್ನು ಯಾರು ಕೈವಶ ಮಾಡಿಕೊಳ್ಳಲಿದ್ದಾರೆ ಎಂಬುದಕ್ಕೆ ಮೇ 2 ಬರಬೇಕಿದೆ.

ಇವೆರಡು ರಾಜ್ಯದಷ್ಟೇ ಫಲಿತಾಂಶವನ್ನು ಅತ್ಯಂತ ಕುತೂಹಲದಿಂದ ಕಾಯುವಂತೆ ಮಾಡಿವೆ ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳು. ಮಿಕ್ಕೆಲ್ಲ ರಾಜ್ಯಗಳಿಗಿಂತ ಅಸ್ಸಾಂನಲ್ಲಿ ಕಾಂಗ್ರೆಸ್​ನ ಪ್ರಚಾರದ ಅಬ್ಬರ ತೀವ್ರವಾಗಿತ್ತು. ಕೇರಳ, ಪುದುಚೇರಿಗಳಲ್ಲೂ ಯಾರು ಗೆಲ್ಲುತ್ತಾರೆ ಎಂಬುದು ಅತಿ ಕುತೂಹಲಕಾರಿ ವಿಷಯ. ಪುದುಚೇರಿಯಲ್ಲಂತೂ ಚುನಾವಣೆಯ ಹೊಸ್ತಿಲಲ್ಲೇ ಮುಖ್ಯಮಂತ್ರಿ ಕುರ್ಚಿ ಬಿಟ್ಟಿಳಿಯಬೇಕಾಯಿತು. ಏಕೆಂದರೆ ರಾಷ್ಟ್ರ ರಾಜಕೀಯದ ನಾಯಕರೇ ಈ ಎಲ್ಲ ಚುನಾವಣೆಗಳಲ್ಲೂ ಪ್ರಚಾರದ ಕಣಕ್ಕಿಳಿದಿದ್ದರು. ಮೇ 2ರಂದು ಹೊರಬೀಳಲಿರುವ ಫಲಿತಾಂಶವನ್ನು ಅಂದಾಜಿಸಿ ವಿವಿಧ ಸಂಸ್ಥೆಗಳು ಇಂದೇ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಲಿವೆ. ಈ ಸಮೀಕ್ಷೆಯ ವರದಿಯನ್ನು ಅವಲೋಕಿಸುವುದು ರಾಜಕೀಯ ಆಸಕ್ತರ ಪಾಲಿಗೆ ಒಂದು ಪ್ರಮುಖ ಉಮೇದು ಸಹ ಹೌದು.

ಇದನ್ನೂ ಓದಿ: Explainer: 18ರಿಂದ 45 ವಯೋಮಾನದವರಿಗೆ ಕೋವಿಡ್ ಲಸಿಕೆ; ನೋಂದಣಿ ಹೇಗೆ? ಪಡೆದುಕೊಳ್ಳುವುದು ಎಲ್ಲಿ? ಡೇಟ್ ಮಿಸ್ ಆದ್ರೆ ಏನು ಮಾಡಬೇಕು?

(Exit poll results 2021 West Bengal Tamil Nadu Kerala Assam Pondicherry release today here all details)

Published On - 3:22 pm, Thu, 29 April 21