AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ResignModi ಹ್ಯಾಶ್​ಟ್ಯಾಗ್ ಬ್ಲಾಕ್ ಮಾಡಿದ್ದು ಕಣ್ತಪ್ಪಿನಿಂದ, ಈಗ ಪುನಸ್ಥಾಪಿಸಲಾಗಿದೆ: ಫೇಸ್​ಬುಕ್

Facebook: #ResignModi ಹ್ಯಾಶ್​​ಟ್ಯಾಗ್ ಬ್ಲಾಕ್ ಮಾಡಿರುವ ಬಗ್ಗೆ ಇಮೇಲ್ ಮೂಲಕ ಸ್ಪಷ್ಟನೆ ನೀಡಿದ ಫೇಸ್​ಬುಕ್ ವಕ್ತಾರ, ನಾವು ಈ ಹ್ಯಾಶ್‌ಟ್ಯಾಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದು ಕಣ್ತಪ್ಪಿನಿಂದ. ಭಾರತ ಸರ್ಕಾರವು ನಮ್ಮಲ್ಲಿ ಹೇಳಿಲ್ಲ. ನಾವು ಹ್ಯಾಶ್​ಟ್ಯಾಗ್ ಪುನಸ್ಥಾಪಿಸಿದ್ದೇವೆ ಎಂದಿದ್ದಾರೆ.

ResignModi ಹ್ಯಾಶ್​ಟ್ಯಾಗ್ ಬ್ಲಾಕ್ ಮಾಡಿದ್ದು ಕಣ್ತಪ್ಪಿನಿಂದ, ಈಗ ಪುನಸ್ಥಾಪಿಸಲಾಗಿದೆ: ಫೇಸ್​ಬುಕ್
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ
|

Updated on:Apr 29, 2021 | 2:33 PM

Share

ದೆಹಲಿ: ದೇಶದಲ್ಲಿ ಕೊರೊನಾವೈರಸ್ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ನೆಟ್ಟಿಗರು ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಒತ್ತಾಯಿಸಿ #ResignModi ಹ್ಯಾಶ್​ಟ್ಯಾಗ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಮಾಡಿದ್ದರು. ಏಪ್ರಿಲ್ 28 ಬುಧವಾರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡಿದ 12,000ಕ್ಕಿಂತಲೂ ಹೆಚ್ಚು ಪೋಸ್ಟ್ ಗಳನ್ನು ಸೆನ್ಸಾರ್ ಮಾಡಿದ್ದ ಫೇಸ್​ಬುಕ್ ಕೆಲವು ಗಂಟೆಗಳ ಕಾಲ #ResignModi ಹ್ಯಾಶ್​ಟ್ಯಾಗ್ ಬ್ಲಾಕ್ ಮಾಡಿತ್ತು.

#ResignModi ಎಂಬ ಹ್ಯಾಶ್​ಟ್ಯಾಗ್ ಹುಡುಕಿದರೆ ಈ ಪೋಸ್ಟ್​ಗಳನ್ನು  ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಪೋಸ್ಟ್​​ನಲ್ಲಿರುವ ಕೆಲವು ವಿಷಯಗಳು ವೆಬ್​ಸೈಟ್​ನ ಸಮುದಾಯದ ಮಾನದಂಡಗಳನ್ನು ಉಲ್ಲಂಘಿಸಿವೆ ಎಂಬ ಸಂದೇಶ ಕಾಣಿಸುತ್ತಿತ್ತು. ಫೇಸ್​ಬುಕ್ ಈ ರೀತಿ #ResignModi ಎಂಬ ಹ್ಯಾಶ್​ಟ್ಯಾಗ್ ಬ್ಲಾಕ್ ಮಾಡಿರುವುದರ ವಿರುದ್ಧ ನೆಟ್ಟಿಗರು ಸಿಡಿದೆದ್ದಿದ್ದು, ಫೇಸ್​ಬುಕ್ ದ್ವಂದ್ವ ನಿಲುವು ತೋರಿಸಿದೆ ಎಂದು ಟೀಕೆ ಮಾಡಿದ್ದಾರೆ.

resign modi

ಇದೆಲ್ಲದರ ನಡುವೆಯೇ #ResignModi ಹ್ಯಾಶ್​ಟ್ಯಾಗ್​ನ್ನು ಫೇಸ್​ಬುಕ್  ಪುನಸ್ಥಾಪಿಸಿದ್ದು, ಪ್ರಸ್ತುತ ಹ್ಯಾಶ್​ಟ್ಯಾಗ್ ಬ್ಲಾಕ್ ಆಗಿದ್ದು ಕಣ್ತಪ್ಪಿನಿಂದ ಎಂದು ಸ್ಪಷ್ಟನೆ ನೀಡಿದೆ. ಅದೇ ವೇಳೆ ಹ್ಯಾಶ್​ಟ್ಯಾಗ್ ಬ್ಲಾಕ್ ಮಾಡಲು ನಾವು ಫೇಸ್​ಬುಕ್ ಸಂಸ್ಥೆಗೆ ಆದೇಶಿಸಿರಲಿಲ್ಲ ಎಂದು ಕೇಂದ್ರ ಸರ್ಕಾರ ತಮ್ಮ ಪ್ರಕಟಣೆಯಲ್ಲಿ ಹೇಳಿದೆ.

ಕಣ್ತಪ್ಪಿನಿಂದ ಬ್ಲಾಕ್ ಮಾಡಿದೆವು: ವಿಚಿತ್ರ ಸ್ಪಷ್ಟನೆ ನೀಡಿದ ಫೇಸ್​ಬುಕ್ ಎನ್​ಬಿಸಿ ನ್ಯೂಸ್​ನ ಟೆಕ್ ಇನ್ವೆಸ್ಟೀಷನ್ ಎಡಿಟರ್ ಒಲಿವಿಯಾ ಸಾಲನ್ ಮಾಡಿದ ಟ್ವೀಟ್​ಗೆ ಉತ್ತರಿಸಿದ ಫೇಸ್ ಬುಕ್​ನ ಆಂಡಿ ಸ್ಟೋನ್, ಈ ಹ್ಯಾಶ್​ಟ್ಯಾಗ್ ಪುನಸ್ಥಾಪಿಸಲಾಗಿದೆ, ಈ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ ಎಂದಿದ್ದಾರೆ ಈ ಹ್ಯಾಶ್​ಟ್ಯಾಗ್ ಮಧ್ಯಾಹ್ನ 12.50ರ ಹೊತ್ತಿಗೆ ಪುನಸ್ಥಾಪಿಸಲಾಗಿದೆ .

ಹ್ಯಾಶ್​​ಟ್ಯಾಗ್ ಬ್ಲಾಕ್ ಮಾಡಿರುವ ಬಗ್ಗೆ ಇಮೇಲ್ ಮೂಲಕ ಸ್ಪಷ್ಟನೆ ನೀಡಿದ ಫೇಸ್​ಬುಕ್ ವಕ್ತಾರ, ನಾವು ಈ ಹ್ಯಾಶ್‌ಟ್ಯಾಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದು ಕಣ್ತಪ್ಪಿನಿಂದ. ಭಾರತ ಸರ್ಕಾರವು ನಮ್ಮಲ್ಲಿ ಹೇಳಿಲ್ಲ. ನಾವು ಹ್ಯಾಶ್​ಟ್ಯಾಗ್ ಪುನಸ್ಥಾಪಿಸಿದ್ದೇವೆ ಎಂದಿದ್ದಾರೆ.

ನಾವು ಯಾವುದೇ ರೀತಿಯ ಆದೇಶ ನೀಡಿರಲಿಲ್ಲ: ಕೇಂದ್ರ ಹ್ಯಾಶ್​​ಟ್ಯಾಗ್ ನಿರ್ಬಂಧಿಸಿದ ವಿಷಯಕ್ಕೆ ಸಂಬಂಧಿಸಿ ಚರ್ಚೆಗಳು ಸಕ್ರಿಯವಾಗುತ್ತಿದ್ದಂತೆ ಪ್ರಕಟಣೆ ಹೊರಡಿಸಿದ ಎಲೆಕ್ಟ್ರಾನಿಕ್ಸ್ ಅಂಡ್ ಐಟಿ ಸಚಿವಾಲಯವು ಯಾವುದೇ ಹ್ಯಾಶ್​​ಟ್ಯಾಗ್​ಗಳನ್ನು ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ಫೇಸ್ಬುಕ್ ಗೆ ನಿರ್ದೇಶಿಸಿಲ್ಲ ಎಂದಿದೆ.

ಸಾರ್ವಜನಿಕ ಭಿನ್ನಾಭಿಪ್ರಾಯವನ್ನು ನಿಗ್ರಹಿಸುವ ಭಾರತ ಸರ್ಕಾರದ ಪ್ರಯತ್ನಗಳೇ ಫೇಸ್​ಬುಕ್​ನಿಂದ ಕೆಲವು ಹ್ಯಾಶ್‌ಟ್ಯಾಗ್ ತೆಗೆಯಲು ಕಾರಣವೆಂದು ಹೇಳುವ ವಾಲ್ ಸ್ಟ್ರೀಟ್ ಜರ್ನಲ್​ನ ವರದಿ ಸತ್ಯಕ್ಕೆ ದೂರವಾದುದಾಗಿದೆ. ಹ್ಯಾಶ್‌ಟ್ಯಾಗ್ ತೆಗೆದುಹಾಕಲು ಸರ್ಕಾರ ಯಾವುದೇ ನಿರ್ದೇಶನ ನೀಡಿಲ್ಲ. ಕಣ್ತಪ್ಪಿನಿಂದ ಇದು ಸಂಭವಿಸಿದ್ದು ಎಂದು ಎಫ್‌ಬಿ ಸ್ಪಷ್ಟಪಡಿಸಿದೆ ಎಂದು ತಂತ್ರಜ್ಞಾನ ಸಚಿವಾಲಯ ಟ್ವೀಟ್ ಮಾಡಿದೆ.

ಫೇಸ್​​ಬುಕ್ ವಿರುದ್ಧ ನೆಟ್ಟಿಗರ ಕಿಡಿ ಬೇರೆ ದೇಶಗಳಲ್ಲಿ ಸುಳ್ಳು ಹಬ್ಬಿಸುವವರನ್ನು ಫೇಸ್​​ಬುಕ್ ಬ್ಲಾಕ್ ಮಾಡುತ್ತದೆ.ಆದರೆ ಭಾರತದಲ್ಲಿ ಸತ್ಯ ಹೇಳುವವರನ್ನು ಬ್ಲಾಕ್ ಮಾಡಲಾಗುತ್ತಿದೆ. ಇದು ಫೇಸ್​ಬುಕ್​ನ ದ್ವಂದ್ವ ನಿಲುವು ಎಂದು ಹಲವಾರು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ .

ಇದನ್ನೂ ಓದಿ: Ramya Divya Spandana: ಕೊರೊನಾ ಸಾವುಗಳಿಗೆ ಮೋದಿನೆ ಕಾರಣ

Killer Coronavirus| ಭಾರತದಲ್ಲಿ ಯುದ್ಧಗಳಲ್ಲಿ ಸತ್ತವರಿಗಿಂತ ಹೆಚ್ಚಿನ ಮಂದಿ ಕೊರೊನಾದಿಂದ ಸಾವು

Published On - 2:27 pm, Thu, 29 April 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ