Electricity shortage ಈ ಬೇಸಿಗೆಯಲ್ಲಿ ಭಾರತದಲ್ಲಿ ವಿದ್ಯುತ್ ಕೊರತೆಯುಂಟಾಗುತ್ತಿರುವುದಕ್ಕೆ ಕಾರಣಗಳೇನು?

| Updated By: ರಶ್ಮಿ ಕಲ್ಲಕಟ್ಟ

Updated on: Apr 18, 2022 | 7:38 PM

ಇನ್ನೂ ಹೆಚ್ಚು ಆತಂಕಕಾರಿ ಸಂಗತಿಯೆಂದರೆ, ವಿದ್ಯುತ್ ಸ್ಥಾವರಗಳಲ್ಲಿನ ವಿದ್ಯುತ್ ಉತ್ಪಾದಕರ ಕಲ್ಲಿದ್ದಲು ದಾಸ್ತಾನುಗಳು 2014 ರಿಂದ ಕಡಿಮೆ ಸ್ಟಾಕ್ ಅನ್ನು ಹೊಂದಿವೆ. ಏಪ್ರಿಲ್ ಆರಂಭದಲ್ಲಿ ಒಂಬತ್ತು ದಿನಗಳ ಸರಾಸರಿ ಸ್ಟಾಕ್ ಹೊಂದಿವೆ.

Electricity shortage ಈ ಬೇಸಿಗೆಯಲ್ಲಿ ಭಾರತದಲ್ಲಿ ವಿದ್ಯುತ್ ಕೊರತೆಯುಂಟಾಗುತ್ತಿರುವುದಕ್ಕೆ ಕಾರಣಗಳೇನು?
ಪ್ರಾತಿನಿಧಿಕ ಚಿತ್ರ
Follow us on

ಭಾರತದಾದ್ಯಂತ ಬೇಸಿಗೆಯ ಆರಂಭದೊಂದಿಗೆ, ಆಗಾಗ್ಗೆ ವಿದ್ಯುತ್ ಕಡಿತವಾಗುತ್ತಿದೆ. ಮೂಲಗಳನ್ನು ಉಲ್ಲೇಖಿಸಿದ ಎಸ್ ಆಂಡ್ ಪಿ ಗ್ಲೋಬಲ್ ಕಮ್ಯುನಿಟಿ ಇನ್‌ಸೈಟ್ಸ್, ಹಲವಾರು ಭಾರತೀಯ ರಾಜ್ಯಗಳು ಆಗಾಗ್ಗೆ ವಿದ್ಯುತ್ ಕಡಿತಕ್ಕೆ(Power cuts) ಸಾಕ್ಷಿಯಾಗಬಹುದು ಏಕೆಂದರೆ ಹೆಚ್ಚುತ್ತಿರುವ ಬೇಸಿಗೆಯ ಬೇಡಿಕೆಯ ನಡುವೆ ವಿದ್ಯುತ್ ಸ್ಥಾವರಗಳು ಸಾಕಷ್ಟು ಕಲ್ಲಿದ್ದಲು ಪೂರೈಕೆಯನ್ನು(coal supplies)  ಹೊಂದಿಸಲು  ಹೆಣಗಾಡುತ್ತಿವೆ ಎಂದು ಹೇಳಿದೆ. “ವಿದ್ಯುತ್ ಸಂಗ್ರಹಕ್ಕಾಗಿರುವ ಕಲ್ಲಿದ್ದಲು ದಾಸ್ತಾನುಗಳು ಕನಿಷ್ಠ ಒಂಬತ್ತು ವರ್ಷಗಳಲ್ಲಿ ಬೇಸಿಗೆಯ ಪೂರ್ವದ ಮಟ್ಟದಲ್ಲಿ ಕಡಿಮೆಯಿರುವುದರಿಂದ ಮತ್ತು ಕನಿಷ್ಠ 38 ವರ್ಷಗಳಲ್ಲಿ ವಿದ್ಯುತ್ ಬೇಡಿಕೆಯು (Electricity demand) ವೇಗವಾಗಿ ಏರುವ ನಿರೀಕ್ಷೆಯಿರುವುದರಿಂದ ಭಾರತವು ಈ ವರ್ಷ ಹೆಚ್ಚಿನ ವಿದ್ಯುತ್ ಕಡಿತವನ್ನು ಎದುರಿಸುವ ಸಾಧ್ಯತೆಯಿದೆ” ಎಂದು ರಾಯಿಟರ್ಸ್ ವರದಿ ಮಾಡಿದೆ. ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಮಧ್ಯಪ್ರದೇಶ, ಜಾರ್ಖಂಡ್, ಪಂಜಾಬ್ ಮತ್ತು ಹರ್ಯಾಣ ಸೇರಿದಂತೆ ಇತರ ಕೆಲವು ರಾಜ್ಯಗಳು ಕಳೆದ ಕೆಲವು ದಿನಗಳಿಂದ ವಿದ್ಯುತ್ ಕಡಿತವನ್ನು ಅನುಭವಿಸಲು ಪ್ರಾರಂಭಿಸಿದೆ. ಮಹಾರಾಷ್ಟ್ರವು ಕೃಷಿ ವಿದ್ಯುತ್ ಗ್ರಾಹಕರ ಭಾಗಗಳಿಗೆ ವಿದ್ಯುತ್ ಪೂರೈಕೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿದೆ ಎಂದು ವರದಿಯಾಗಿದೆ. ಗುಜರಾತ್ ಮತ್ತು ತಮಿಳುನಾಡಿನಂತಹ ರಾಜ್ಯಗಳು ಸರ್ಕಾರಿ ಸ್ವಾಮ್ಯದ ವಿದ್ಯುತ್ ಕೇಂದ್ರಗಳಿಗೆ ದುಬಾರಿ ವಿದ್ಯುತ್ ಖರೀದಿಸಲು ಅವಕಾಶ ನೀಡುವ ಮೂಲಕ ಲೋಡ್ ಶೆಡ್ಡಿಂಗ್ ತಪ್ಪಿಸುತ್ತಿವೆ. ಕೊವಿಡ್ -19 ಪ್ರೇರಿತ ನಷ್ಟದ ನಂತರ ಪುನರಾಗಮನಕ್ಕೆ ಪ್ರಯತ್ನಿಸುತ್ತಿರುವ ಕೈಗಾರಿಕೆಗಳಿಗೆ ಅಡ್ಡಿಯಾಗುವುದರಿಂದ ವಿದ್ಯುತ್ ಕಡಿತವು ಭಾರತೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸವಾಲನ್ನು ಒಡ್ಡುತ್ತದೆ.

ಯಾಕೆ ಹೀಗಾಗುತ್ತಿದೆ?
ಬಿಸಿಲಿನ ಬೇಗೆ ಹೆಚ್ಚಾದಂತೆ ಎಸಿಗಳು, ರೆಫ್ರಿಜರೇಟರ್‌ಗಳ ಬಳಕೆಯ ಹೆಚ್ಚಳದಿಂದಾಗಿ ಭಾರತವು ಪ್ರಾಥಮಿಕವಾಗಿ ಸವಾಲನ್ನು ಎದುರಿಸುತ್ತಿದೆ. ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಷನ್ (POSOCO) ನ ರಾಷ್ಟ್ರೀಯ ಲೋಡ್ ಡೆಸ್ಪಾಚ್ ಸೆಂಟರ್ ಅನ್ನು ಉಲ್ಲೇಖಿಸಿದ ರಾಯಿಟರ್ಸ್, ಭಾರತದ ಗ್ರಿಡ್ ಜುಲೈ 7, 2021 ರಂದು ಕಳೆದ ಬೇಸಿಗೆಯ ಉತ್ತುಂಗದಲ್ಲಿ 200,570 ಮೆಗಾವ್ಯಾಟ್ (MW) ದಾಖಲೆಯ ಲೋಡ್ ಹೊಂದಿತ್ತು ಎಂದು ವರದಿ ಮಾಡಿದೆ.

ಆದಾಗ್ಯೂ, ಗ್ರಿಡ್ ಈ ವರ್ಷದ ಮಾರ್ಚ್ ಮಧ್ಯದಿಂದ 195,000 MW ಗಿಂತ ಹೆಚ್ಚಿನ ಹೊರೆಗಳನ್ನು ವರದಿ ಮಾಡಿದೆ. ಏಪ್ರಿಲ್ 8 ರಂದು ಗರಿಷ್ಠ 199,584 MW ತಲುಪಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಬೇಸಿಗೆಯ ಉತ್ತುಂಗವು ಬರುವ ಮುಂಚೆಯೇ ಗ್ರಿಡ್ ಈಗಾಗಲೇ ಹೆಚ್ಚಿನ ಹೊರೆಗಳಿಂದ ಮುಳುಗಿದೆ ಎಂದು ಈ ಸಂಖ್ಯೆಗಳು ಸೂಚಿಸುತ್ತವೆ.

ಕಳೆದ ವಾರದಲ್ಲಿ ಬೇಡಿಕೆಯ ಶೇಕಡಾವಾರು ವಿದ್ಯುತ್ ಕೊರತೆಯು ಶೇಕಡಾ 1.4 ಕ್ಕೆ ಏರಿದೆ, ಅಕ್ಟೋಬರ್‌ನಲ್ಲಿ ಭಾರತವು ಕೊನೆಯ ಬಾರಿಗೆ ಗಂಭೀರ ಕಲ್ಲಿದ್ದಲು ಕೊರತೆಯಾದ ಶೇಕಡಾ 1 ರಷ್ಟು ಕೊರತೆ  ಮತ್ತು ಮಾರ್ಚ್‌ನಲ್ಲಿ ಶೇಕಡಾ 0.5 ರಷ್ಟು ಕೊರತೆ ಎದುರಿಸಿತ್ತು ಎಂದು ಸರ್ಕಾರದ ಮಾಹಿತಿಯನ್ನು ರಾಯಿಟರ್ಸ್ ಉಲ್ಲೇಖಿಸಿದೆ.

ಕಲ್ಲಿದ್ದಲು ದಾಸ್ತಾನು ಕಡಿಮೆಯಾಗಿದೆ
ಇನ್ನೂ ಹೆಚ್ಚು ಆತಂಕಕಾರಿ ಸಂಗತಿಯೆಂದರೆ, ವಿದ್ಯುತ್ ಸ್ಥಾವರಗಳಲ್ಲಿನ ವಿದ್ಯುತ್ ಉತ್ಪಾದಕರ ಕಲ್ಲಿದ್ದಲು ದಾಸ್ತಾನುಗಳು 2014 ರಿಂದ ಕಡಿಮೆ ಸ್ಟಾಕ್ ಅನ್ನು ಹೊಂದಿವೆ. ಏಪ್ರಿಲ್ ಆರಂಭದಲ್ಲಿ ಒಂಬತ್ತು ದಿನಗಳ ಸರಾಸರಿ ಸ್ಟಾಕ್ ಹೊಂದಿವೆ. ಆದರೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸರಾಸರಿ ಕನಿಷ್ಠ 24 ದಿನಗಳ ಸ್ಟಾಕ್ ಅನ್ನು ಹೊಂದಲು ಸೂಚಿಸುತ್ತವೆ. ಭಾರತೀಯ ಕ್ಯಾಪ್ಟಿವ್ ಪವರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ರಾಜೀವ್ ಅಗರ್ವಾಲ್ ಪ್ರಕಾರ “ಸಮಸ್ಯೆ ಏನೆಂದರೆ, ಕೋಲ್ ಇಂಡಿಯಾ ಮತ್ತು ಕಲ್ಲಿದ್ದಲು ಸಚಿವಾಲಯವು ವಿದ್ಯುತ್ ಸ್ಥಾವರಗಳನ್ನು ಸಂಗ್ರಹಿಸಲು ಕೇಳಿಕೊಂಡ ನಂತರವೂ ವಿದ್ಯುತ್ ಕೇಂದ್ರಗಳು ತಮ್ಮ ದಾಸ್ತಾನುಗಳನ್ನು ಕಡಿಮೆ ಮಾಡುತ್ತಲೇ ಇದ್ದವು.

ತಾಪಮಾನದಲ್ಲಿನ ಅಸಾಮಾನ್ಯ ಏರಿಕೆಯಿಂದಾಗಿ ವಿದ್ಯುತ್ ಬೇಡಿಕೆಯು ಅಧಿಕವಾಗಿದೆ, ಇದು ವಾಣಿಜ್ಯ ಮತ್ತು ವಸತಿ ಪ್ರದೇಶಗಳಲ್ಲಿ ಎಸಿಗಳ ಬಳಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ನಿಗ್ರಹಿಸುವ ಪ್ರಯತ್ನದಲ್ಲಿ, ಸರ್ಕಾರದ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿಯು 2020 ರಲ್ಲಿ ಭಾರತದಲ್ಲಿ ಮಾರಾಟವಾಗುವ ಹವಾನಿಯಂತ್ರಣಗಳಿಗೆ 24 C ಡೀಫಾಲ್ಟ್ ಸೆಟ್ಟಿಂಗ್ ಅನ್ನು ಮಾಡಿದೆ. ಕಲ್ಲಿದ್ದಲು ಭಾರತದ ವಿದ್ಯುತ್ ಉತ್ಪಾದನೆಯಲ್ಲಿ ಸುಮಾರು 75 ಪ್ರತಿಶತವನ್ನು ಹೊಂದಿದೆ.

ಪರಿಸ್ಥಿತಿ ಸುಧಾರಿಸುವುದು ಯಾವಾಗ?
ಭಾರತವು ಜಾಗತಿಕವಾಗಿ ವಿದ್ಯುಚ್ಛಕ್ತಿಯಲ್ಲಿ ಮೂರನೇ ಅತಿದೊಡ್ಡ ವಿದ್ಯುತ್ ಉತ್ಪಾದಕವಾಗಿದೆ. 2017 ರಲ್ಲಿ ತಲಾ ಬಳಕೆಗೆ ಸಂಬಂಧಿಸಿದಂತೆ ಇದು 106 ನೇ ಸ್ಥಾನದಲ್ಲಿದೆ. ಏಪ್ರಿಲ್ 2020 ಮತ್ತು ಜನವರಿ 2021 ರ ನಡುವೆ ಭಾರತದಲ್ಲಿ 1,000 ಶತಕೋಟಿ ಯೂನಿಟ್ ವಿದ್ಯುತ್ ಅನ್ನು ಉತ್ಪಾದಿಸಲಾಯಿತು, ಈ ಅವಧಿಯಲ್ಲಿ 834 ಶತಕೋಟಿ ಯೂನಿಟ್​​ಗಳಷ್ಟು  ಗರಿಷ್ಠ ಪ್ರಮಾಣದ ವಿದ್ಯುತ್ ಅನ್ನು ಸೌರ ಶಕ್ತಿಯಿಂದ ಉತ್ಪಾದಿಸಲಾಯಿತು.
ಗ್ರಿಡ್ ಅಪಾರ ಒತ್ತಡದಲ್ಲಿದ್ದು, ಬೇಸಿಗೆ ಕಾಲ ಆರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ: ಬೇಸಿಗೆ ಮಾಯವಾಗಿ, ರಾಜಧಾನಿ ಬೆಂಗಳೂರು ಫುಲ್ ಕೂಲ್! ವಾರದಿಂದ ಮಾಯದಂತ ಮಳೆ, ಇಂದೂ ಮಳೆಯ ಅಬ್ಬರ ಜೋರು

Published On - 7:36 pm, Mon, 18 April 22