ಸಂಸದರು ಅಸಂಸದೀಯ ಪದ ಬಳಸಿದರೆ ಅದನ್ನು ದಾಖಲೆಯಿಂದ ಅಳಿಸಲಾಗುತ್ತದೆ; ಸಂಸತ್​​ನಲ್ಲಿ ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ?

|

Updated on: Feb 09, 2023 | 3:00 PM

ಲೋಕಸಭೆ ಸಚಿವಾಲಯದ ಮಾಜಿ ನಿರ್ದೇಶಕ ಕೆ ಶ್ರೀನಿವಾಸನ್ ಪ್ರಕಾರ, “ಸದಸ್ಯರು ಅಸಂಸದೀಯ ಅಥವಾ ಅಸಭ್ಯ ಪದವನ್ನು ಬಳಸಿದರೆ ಮತ್ತು ಸದನದ ಸೌಹಾರ್ದತೆ ಅಥವಾ ಘನತೆಗೆ ಧಕ್ಕೆ ತಂದರೆ, ಪ್ರಿಸೈಡಿಂಗ್ ಅಧಿಕಾರಿ ಸಂಬಂಧಿತ ನಿಯಮಗಳು ಮತ್ತು ಪ್ರಾಶಸ್ತ್ಯವನ್ನು ಉದಾಹರಿಸಿ ಅವುಗಳನ್ನು ಹೊರಹಾಕುವ ಶಿಫಾರಸಿನೊಂದಿಗೆ ಅದನ್ನು ಸ್ಪೀಕರ್ ಅಥವಾ ಸಭಾಧ್ಯಕ್ಷರಿಗೆ ಕಳುಹಿಸುತ್ತಾರೆ.

ಸಂಸದರು ಅಸಂಸದೀಯ ಪದ ಬಳಸಿದರೆ ಅದನ್ನು ದಾಖಲೆಯಿಂದ ಅಳಿಸಲಾಗುತ್ತದೆ; ಸಂಸತ್​​ನಲ್ಲಿ ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ರಾಜ್ಯಸಭಾ ಕಲಾಪ
Follow us on

ಮಂಗಳವಾರ (ಫೆಬ್ರವರಿ 7) ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಮಾಡಿದ ಭಾಷಣದ ಭಾಗಗಳನ್ನು ಸ್ಪೀಕರ್ ಅವರ ಆದೇಶದ ಮೇರೆಗೆ ಸಂಸತ್ತಿನ ದಾಖಲೆಗಳಿಂದ ತೆಗೆದುಹಾಕಲಾಗಿದೆ. ಬುಧವಾರ ಮಲ್ಲಿಕಾರ್ಜುನ ಖರ್ಗೆ (Mallikarjun kharge) ಸಂಸತ್​​ನಲ್ಲಿ (Parliament) ಮಾಡಿದ ಭಾಷಣದಲ್ಲಿನ ಕೆಲವು ಭಾಗಗಳನ್ನೂ ಇದೇ ರೀತಿ ಅಳಿಸಲಾಗಿದೆ. ನಮ್ಮ ಭಾಷಣದ ಕೆಲವು ಭಾಗಗಳನ್ನು ಯಾಕೆ ಅಳಿಸಿದ್ದು ಎಂದು ಇಬ್ಬರೂ ನಾಯಕರು ಪ್ರಶ್ನಿಸಿದ್ದಾರೆ.ಅಂದ ಹಾಗೆ ಕೆಲವು ಪದಗಳು, ವಾಕ್ಯಗಳು ಅಥವಾ ಭಾಷಣದ ಭಾಗಗಳನ್ನು ದಾಖಲೆಗಳಿಂದ ತೆಗೆದು ಹಾಕುವುದ ಸಾಕಷ್ಟು ವಾಡಿಕೆಯ ಕಾರ್ಯವಿಧಾನವಾಗಿದ್ದು ಇವು ನಿಗದಿಪಡಿಸಿದ ನಿಯಮಗಳಿಗೆ ಅನುಸಾರವಾಗಿ ನಡೆಯುತ್ತದೆ. ಕಲಾಪಗಳ ಯಾವ ಭಾಗಗಳನ್ನು ತೆಗೆದುಹಾಕಬೇಕು ಎಂಬ ನಿರ್ಧಾರವು ಸದನದ ಅಧ್ಯಕ್ಷರು ತೀರ್ಮಾನಿಸುತ್ತಾರೆ.ಈ  ಬಗ್ಗೆ ಮತ್ತಷ್ಟು ತಿಳಿಯೋಣ.

ದಾಖಲೆಯಿಂದ ತೆಗೆದುಹಾಕುವ ನಿಯಮಗಳೇನು?

ಸಂವಿಧಾನದ ಅನುಚ್ಛೇದ 105(2) ರ ಅಡಿಯಲ್ಲಿ, ” ಸಂಸತ್ತಿನಲ್ಲಿ ಅಥವಾ ಅದರ ಯಾವುದೇ ಸಮಿತಿಯಲ್ಲಿ ಹೇಳಿರುವ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯದಲ್ಲಿ ನಡೆಯುವ ಯಾವುದೇ ಪ್ರಕ್ರಿಯೆಗಳಿಗೆ ಯಾವುದೇ ಸಂಸತ್ ಸದಸ್ಯನು ಜವಾಬ್ದಾರನಾಗಿರುವುದಿಲ್ಲ. ಆದರೆ, ಸದನದೊಳಗೆ ಏನು ಬೇಕಾದರೂ ಹೇಳುವ ಸ್ವಾತಂತ್ರ್ಯ ಸಂಸದರಿಗೆ ಇಲ್ಲ. ಸಂಸದರ ಭಾಷಣವು ಸಂಸತ್ತಿನ ನಿಯಮಗಳ ಶಿಸ್ತು, ಅದರ ಸದಸ್ಯರ “ಉತ್ತಮ ಪ್ರಜ್ಞೆ” ಮತ್ತು ಸ್ಪೀಕರ್‌ನ ಕಲಾಪಗಳ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಇದರ ಪ್ರಕಾರ ಸಂಸದರು ಸದನದೊಳಗೆ “ಮಾನಹಾನಿಕರ ಅಥವಾ ಅಸಭ್ಯ ಅಥವಾ ಅಮಾನವೀಯ ಅಥವಾ ಅಸಂಸದೀಯ ಪದಗಳನ್ನು” ಬಳಸುವಂತಿಲ್ಲ.

ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳ ನಿಯಮ 380 (Expunction) ಪ್ರಕಾರ “ಚರ್ಚೆಯಲ್ಲಿ ಮಾನಹಾನಿಕರ ಅಥವಾ ಅಸಭ್ಯ ಅಥವಾ ಅಸಂಸದೀಯ ಪದಗಳನ್ನು ಬಳಸಲಾಗಿದೆ ಎಂದು ಸ್ಪೀಕರ್ ಅಭಿಪ್ರಾಯಪಟ್ಟರೆ, ಸ್ಪೀಕರ್ ಅಂತಹ ಪದಗಳನ್ನು ಸದನದ ನಡಾವಳಿಗಳಿಂದ ಹೊರಹಾಕಲು ವಿವೇಚನೆಯ ಆದೇಶವನ್ನು ಚಲಾಯಿಸಬಹುದು.
ನಿಯಮ 381 ಪ್ರಕಾರ “ಹೀಗೆ ಹೊರಹಾಕಿದ ಸದನದ ನಡಾವಳಿಗಳ ಭಾಗವನ್ನು ನಕ್ಷತ್ರ ಚಿಹ್ನೆಗಳಿಂದ ಗುರುತಿಸಬೇಕು ಮತ್ತು ‘ಪೀಠದ ಆದೇಶದಂತೆ ಹೊರಹಾಕಲಾಗಿದೆ’ ಎಂದು ವಿವರಣಾತ್ಮಕ ಅಡಿಟಿಪ್ಪಣಿಯನ್ನು ಸೇರಿಸಬೇಕು.

ಇದನ್ನೂ ಓದಿ: ನನ್ನ ಭಾಷಣದ ಕೆಲವು ಭಾಗಗಳನ್ನು ಸಂಸತ್ತಿನ ದಾಖಲೆಗಳಿಂದ ಅಳಿಸಿ ಹಾಕಿದ್ದು ಯಾಕೆ?: ರಾಹುಲ್ ಗಾಂಧಿ

ಅಸಂಸದೀಯ ಪದಗಳು ಯಾವುವು?

ವರ್ಷಗಳಿಂದೀಚೆಗೆ ಇಂಗ್ಲಿಷ್ ಮತ್ತು ಇತರ ಭಾರತೀಯ ಭಾಷೆಗಳೆರಡರಲ್ಲೂ ಅಪಾರ ಸಂಖ್ಯೆಯ ಪದಗಳು “ಅಸಂಸದೀಯ” ಎಂದು ಸಭಾಧ್ಯಕ್ಷರು – ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಅಧ್ಯಕ್ಷರು ಕಂಡುಕೊಂಡಿದ್ದಾರೆ. ಈ ಅಸಂಸದೀಯ ಪದಗಳನ್ನು ಸಂಸತ್ತಿನ ದಾಖಲೆಗಳಿಂದ ಹೊರಗಿಡಲಾಗಿದೆ. ಲೋಕಸಭೆಯ ಸೆಕ್ರೆಟರಿಯೇಟ್ ‘ಅಸಂಸದೀಯ ಅಭಿವ್ಯಕ್ತಿಗಳ’ ಬೃಹತ್ ಸಂಪುಟವನ್ನು ಹೊರತಂದಿದೆ. ಈ ಪುಸ್ತಕವು ಹೆಚ್ಚಿನ ಸಂಸ್ಕೃತಿಗಳಲ್ಲಿ ಅಸಭ್ಯ ಅಥವಾ ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಪದಗಳು ಅಥವಾ ಅಭಿವ್ಯಕ್ತಿಗಳನ್ನು ಒಳಗೊಂಡಿದೆ. ಆದರೆ ಇದು ಸಾಕಷ್ಟು ನಿರುಪದ್ರವಿ ಎಂದು ತೋರುವ ವಿಷಯವನ್ನು ಒಳಗೊಂಡಿದೆ.

ಪುಸ್ತಕವನ್ನು ಮೊದಲು ಸಂಕಲಿಸಿದಾಗ ಚರ್ಚೆಗಳು ಮತ್ತು ಪದಗುಚ್ಛಗಳಿಂದ ಉಲ್ಲೇಖಗಳನ್ನು ತೆಗೆದುಕೊಳ್ಳಲಾಗಿದೆ. ಸ್ವಾತಂತ್ರ್ಯಪೂರ್ವ ಕೇಂದ್ರ ಶಾಸಕಾಂಗ ಸಭೆ, ಭಾರತದ ಸಂವಿಧಾನ ಸಭೆ, ತಾತ್ಕಾಲಿಕ ಸಂಸತ್ತು, ಹತ್ತರವರೆಗಿನ ಲೋಕಸಭೆ ಮತ್ತು ರಾಜ್ಯಸಭೆ, ವಿಧಾನಸಭೆ ಮತ್ತು ಯುನೈಟೆಡ್ ಕಿಂಗ್‌ಡಂನಂತೆಯೇ ಇರುವ ಕಾಮನ್‌ವೆಲ್ತ್ ಸಂಸತ್ತುಗಳಿಂದ ಘೋಷಿಸಿದ ಅಸಂಸದೀಯ ಪದಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಜಿ ಸಿ ಮಲ್ಹೋತ್ರಾ 2012 ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದರು. ಮಲ್ಹೋತ್ರಾ ಅವರು 900 ಪುಟಗಳ ಪುಸ್ತಕದ 2004 ರ ಆವೃತ್ತಿಯ ಸಂಪಾದಕೀಯ ಮಂಡಳಿಯ ಮುಖ್ಯಸ್ಥರಾಗಿದ್ದರು. ರಾಜ್ಯ ಶಾಸಕಾಂಗಗಳು ಕೂಡ ಮುಖ್ಯವಾಗಿ ಅಸಂಸದೀಯ ಅಭಿವ್ಯಕ್ತಿಗಳ ಅದೇ ಪುಸ್ತಕದಿಂದ ಮಾರ್ಗದರ್ಶಿಸಲ್ಪಡುತ್ತವೆ.

“ಪ್ರೆಸೈಡಿಂಗ್ ಅಧಿಕಾರಿಗಳ ತೀರ್ಪುಗಳನ್ನು ಅವಲಂಬಿಸಿ, ನಿಯಮಿತ ಮಧ್ಯಂತರಗಳಲ್ಲಿ ಹೊಸ ಪದಗಳು ಮತ್ತು ಪದಗುಚ್ಛಗಳನ್ನು ಪಟ್ಟಿಗೆ ಸೇರಿಸುವುದನ್ನು ಮುಂದುವರಿಸಲಾಗುತ್ತದೆ” ಎಂದು ಮಲ್ಹೋತ್ರಾ ಹೇಳಿದರು.

ಇದನ್ನೂ ಓದಿ: ನಾನು ಯಾವುದೇ ಅಸಂಸದೀಯ ಪದ ಬಳಸಿಲ್ಲ, ಆದರೂ ಭಾಷಣದ ಕೆಲವು ಭಾಗಗಳನ್ನು ಸಂಸತ್ ದಾಖಲೆಯಿಂದ ತೆಗೆದುಹಾಕಿದ್ದು ಯಾಕೆ?: ಖರ್ಗೆ

ಪದವನ್ನು ಅಥವಾ ಭಾಷಣದ ಭಾಗವನ್ನು ಅಳಿಸುವ ಅಥವಾ ತೆಗೆದು ಹಾಕುವ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳಲಾಗುತ್ತದೆ?

ಲೋಕಸಭೆ ಸಚಿವಾಲಯದ ಮಾಜಿ ನಿರ್ದೇಶಕ ಕೆ ಶ್ರೀನಿವಾಸನ್ ಪ್ರಕಾರ, “ಸದಸ್ಯರು ಅಸಂಸದೀಯ ಅಥವಾ ಅಸಭ್ಯ ಪದವನ್ನು ಬಳಸಿದರೆ ಮತ್ತು ಸದನದ ಸೌಹಾರ್ದತೆ ಅಥವಾ ಘನತೆಗೆ ಧಕ್ಕೆ ತಂದರೆ, ಪ್ರಿಸೈಡಿಂಗ್ ಅಧಿಕಾರಿ ಸಂಬಂಧಿತ ನಿಯಮಗಳು ಮತ್ತು ಪ್ರಾಶಸ್ತ್ಯವನ್ನು ಉದಾಹರಿಸಿ ಅವುಗಳನ್ನು ಹೊರಹಾಕುವ ಶಿಫಾರಸಿನೊಂದಿಗೆ ಅದನ್ನು ಸ್ಪೀಕರ್ ಅಥವಾ ಸಭಾಧ್ಯಕ್ಷರಿಗೆ ಕಳುಹಿಸುತ್ತಾರೆ.
ನಿಯಮ 380 ರ ಅಡಿಯಲ್ಲಿ ಸ್ಪೀಕರ್ ಪದ ಅಥವಾ ಅದಪ ಬಳಕೆಯನ್ನು ಹೊರಹಾಕಲು ಅಧಿಕಾರಹೊಂದಿರುತ್ತಾರೆ. ಸ್ಪೀಕರ್ ಪದ ಅಥವಾ ಬಳಕೆಯನ್ನು ಹೊರಹಾಕಿದ ನಂತರ, ಅದು ವರದಿ ಮಾಡುವ ವಿಭಾಗಕ್ಕೆ ಹಿಂತಿರುಗುತ್ತದೆ. ಅದು ಪದವನ್ನು ದಾಖಲೆಗಳಿಂದಪೀಠದ ಆದೇಶದಂತೆ ಹೊರಹಾಕಲಾಗಿದೆ ಎಂದು ಉಲ್ಲೇಖಿಸಿ ತೆಗೆದು ಹಾಕಲಾಗುತ್ತದೆ.

ಅಧಿವೇಶನದ ಕೊನೆಯಲ್ಲಿ, ದಾಖಲೆಗಳಿಂದ ತೆಗೆದುಹಾಕಲಾದ ಪದಗಳ ಸಂಕಲನವನ್ನು ಕಾರಣಗಳೊಂದಿಗೆ ಸ್ಪೀಕರ್ ಕಚೇರಿ, Sansad TV ಮತ್ತು ಸಂಪಾದಕೀಯ ಸೇವೆಗೆ ಕಳುಹಿಸಲಾಗುತ್ತದೆ.

ಪದ ಅಥವಾ ವಾಕ್ಯವನ್ನು ಬಳಸುವ ಸಂದರ್ಭವು ಪದವನ್ನು ತೆಗೆದುಹಾಕಬೇಕೆ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲು ಮುಖ್ಯ ಅಂಶ ಎಂದು ಶ್ರೀನಿವಾಸನ್ ಹೇಳಿದ್ದಾರೆ.“ಒಂದು ಟೀಕೆಯನ್ನು ಹೊರಹಾಕುವ ಗಮನವು ಸಂದರ್ಭದ ಮೇಲೆ ಇರುತ್ತದೆ. ಇಲ್ಲಿ ಸಂದರ್ಭ ಮುಖ್ಯ. ಕನಿಷ್ಠ ಸಂಖ್ಯೆಯ ಪದಗಳನ್ನು ತೆಗೆದುಹಾಕುವುದನ್ನು ನಾವು ಸೂಚಿಸುತ್ತೇವೆ ಎಂದು ಅವರು ಹೇಳಿದರು.

“ಗೋಡ್ಸೆ” ಪದದ ಉದಾಹರಣೆಯನ್ನು ನೀಡಿದ ಶ್ರೀನಿವಾಸನ್, 1958 ರಲ್ಲಿ ಸದಸ್ಯರೊಬ್ಬರು ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರನ್ನು ನಾಥೂರಾಮ್ ಗೋಡ್ಸೆಗೆ ಹೋಲಿಸಿದ ನಂತರ ಆ ಪದವನ್ನು ತೆಗೆದುಹಾಕಲಾಯಿತು. 1962 ರಲ್ಲಿ ಮತ್ತೊಬ್ಬ ಸದಸ್ಯ ಗೋಡ್ಸೆಯನ್ನು ಸ್ವಾಮಿ ವಿವೇಕಾನಂದರಿಗೆ ಹೋಲಿಸಿದರು 2015ರಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಅಸಂಸದೀಯ ಮಾತುಗಳ ಪಟ್ಟಿಯಿಂದಲೇ ಇದನ್ನು ತೆಗೆದುಹಾಕಿದರು.

ಇದು ಸಂದರ್ಭೋಚಿತವಾಗಿದೆ. ಒಬ್ಬ ಸದಸ್ಯ ನಾಥೂರಾಮ್ ಗೋಡ್ಸೆಯನ್ನು ಹೊಗಳಲು ಸಾಧ್ಯವಿಲ್ಲ, ಆದರೆ ಮಹಾತ್ಮ ಗಾಂಧಿಯನ್ನು ಕೊಂದವ ಗೋಡ್ಸೆ ಎಂದು ಹೇಳಬಹುದು ಎಂದಿದ್ದಾರೆ.

ಇದನ್ನೂ ಓದಿ: Adani Group: ಫೆ.10 ರಂದು ಸುಪ್ರೀಂನಲ್ಲಿ ಅದಾನಿ ಸಂಸ್ಥೆಗಳ ವಿರುದ್ಧದ ಹಿಂಡನ್‌ಬರ್ಗ್ ವರದಿಯ ತನಿಖೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ

ಪದವನ್ನು ತೆಗೆದುಹಾಕಿದ ನಂತರ ಏನಾಗುತ್ತದೆ?

ಸಂಸತ್ತಿನ ದಾಖಲೆಗಳಲ್ಲಿ ನಡಾವಳಿಗಳ ಹೊರಹಾಕಲ್ಪಟ್ಟ ಭಾಗಗಳು ಅಸ್ತಿತ್ವದಲ್ಲಿಲ್ಲ, ಮತ್ತು ಅವುಗಳನ್ನು ಇನ್ನು ಮುಂದೆ ಮಾಧ್ಯಮ ಸಂಸ್ಥೆಗಳು ವರದಿ ಮಾಡಲಾಗುವುದಿಲ್ಲ, ಆದರೆ ಅವುಗಳನ್ನು ಕಲಾಪಗಳ ನೇರ ಪ್ರಸಾರದ ಸಮಯದಲ್ಲಿ ಕೇಳಿರಬಹುದು.
“ಒಮ್ಮೆ ನೇರಪ್ರಸಾರ (ನಡವಳಿಗಳ) ಪ್ರಾರಂಭವಾದಾಗ, ಅಂತಹ (ಅಸಂಸದೀಯ) ಪದಗಳನ್ನು ಮಾತನಾಡಿದಾಗ, ಅವುಗಳನ್ನು ಬದಲಾಯಿಸುವ ಬದಲು ತೆಗೆದುಹಾಕಲಾಯಿತು. ಆಡಿಯೋ ಫೈಲ್‌ಗಳಲ್ಲಿ, ಅಂತಹ ಪದಗಳನ್ನು ಬೀಪ್‌ನೊಂದಿಗೆ ಬದಲಾಯಿಸಲಾಗಿದೆ ಎಂದಿದ್ದಾರೆ ಶ್ರೀನಿವಾಸನ್.
ಇದು ಸಭಾಧ್ಯಕ್ಷರ ಗಮನಕ್ಕೆ ಬಾರದಿರುವ ಅಸಂಸದೀಯ ಅಭಿವ್ಯಕ್ತಿಯಾಗಿದೆ.ನಾವು (ಅಧಿಕಾರಿಗಳು) ಸಭಾಪತಿಗೆ ತಿಳಿಸುತ್ತೇವೆ. ಸಭಾಪತಿಯಿಂದ ಆದೇಶವನ್ನು ಪಡೆದ ನಂತರ ಅದನ್ನು ದಾಖಲೆಗಳಿಂದ ತೆಗೆದುಹಾಕುತ್ತೇವೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Thu, 9 February 23