ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ವೇಳೆ ಏಪ್ರಿಲ್ 10ರಂದು ಕೂಚ್ ಬೆಹಾರ್ ಜಿಲ್ಲೆಯ ಸಿತಾಲ್ಗುಚಿ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳು (Central Industrial Security Force – CISF) ಯೋಧರು ಹಾರಿಸಿದ ಗುಂಡಿಗೆ ನಾಲ್ಕು ಮಂದಿ ಬಲಿಯಾಗಿದ್ದರು. ಯೋಧರು ಗುಂಡು ಹಾರಿಸಿದ್ದು ಸ್ವಯಂ ರಕ್ಷಣೆಗಾಗಿ ಎಂದು ಕೂಚ್ ಬೆಹಾರ್ ಪೊಲೀಸ್ ಅಧಿಕಾರಿ ಹೇಳಿದ್ದು, ಇದಕ್ಕೆಲ್ಲ ಕಾರಣ ಕೇಂದ್ರ ಸಚಿವ ಅಮಿತ್ ಶಾ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ
ಕೂಚ್ ಬೆಹಾರ್ನಲ್ಲಿ ಯೋಧರು ನಾಗರಿಕರ ಮೇಲೆ ಗುಂಡು ಹಾರಿಸಿದ ಘಟನೆಯ ಬೆನ್ನಲ್ಲೇ ಬಿಜೆಪಿ ನಾಯಕರು ಗಾಯಗೊಂಡಿರುವ ಸಿಐಎಸ್ಎಫ್ ಯೋಧ ಎಂಬ ಶೀರ್ಷಿಕೆಯೊಂದಿಗೆ ಫೋಟೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ. ಬಿಜೆಪಿ ನಾಯಕ, ಸಂಸದ ಸೌಮಿತ್ರ ಖಾನ್ ಅವರು ಇದೇ ಫೋಟೊವನ್ನು ಶೇರ್ ಮಾಡಿಸಿತಾಲ್ಗುಚಿ ಗಲಭೆಯಲ್ಲಿ ಗಾಯಗೊಂಡ ಯೋಧ ಎಂದು ಹೇಳಿದ್ದಾರೆ.
চতুর্থ দফার ভোটের দিন কোচবিহারের শীতলকুচি-তে @CISFHQrs সিআইএসএফ জওয়ানদের উপর হামলা চালায় @AITCofficial তৃণমূল আশ্রিত দুষ্কৃতীরা।
বন্দুক ছিনিয়ে নেওয়ার চেষ্টা করা হয়।
গুরুতর জখম হন এক জওয়ান।
তাই আত্মরক্ষার্থে গুলি চালাতে বাধ্য হয় কেন্দ্রীয় বাহিনী। pic.twitter.com/g3HM1rwe4T
— Suvendu Adhikari • শুভেন্দু অধিকারী (@SuvenduWB) April 11, 2021
’ಇದೇ ಫೋಟೊನ್ನು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕೂಡಾ ಶೇರ್ ಮಾಡಿದ್ದರು. ಬಿಜೆಪಿ ಸಂಸದ ಅರ್ಜುನ್ ಸಿಂಗ್ ಇದೇ ಫೋಟೊವನ್ನು ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಶೇರ್ ಮಾಡಿದ್ದು, ಆಮೇಲೆ ಡಿಲೀಟ್ ಮಾಡಿದ್ದರು. ಗಮನಿಸಿ ಬೇಕಾದ ಸಂಗತಿ ಎಂದರೆ ಬಿಜೆಪಿ ನಾಯಕರು ಎಲ್ಲಿಯೂ ಈ ಗಲಭೆಯಲ್ಲಿ ನಾಲ್ವರು ನಾಗರಿಕರು ಬಲಿಯಾಗಿರುವ ವಿಷಯವನ್ನು ಉಲ್ಲೇಖಿಸಿಲ್ಲ. ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಸಂತೋಷ್ ರಂಜನ್ ರೈ ಅವರು ಕೂಡಾ ಅದೇ ಫೋಟೊ ಟ್ವೀಟ್ ಮಾಡಿದ್ದಾರೆ.
यह फ़ोटो कुचबिहार का है जहाँ CISF को अपनी सुरक्षा में गोली चलानी पड़ी थी जिसमें पाँच देश विरोधी क़ब्रिस्तान पहुँच गए
इस फ़ौजी का फ़ोटो देखने के बाद CISF देश विरोधियों को गोली ही मारेगी चुम्मा थोड़े न लेगी और आगे भी यह पराक्रम जारी रहेगा।
जियो माँ भारती के लाल#cisf#Election2021 pic.twitter.com/inSHPGBh4b— Santosh Ranjan Rai (@SantoshRanjan_) April 12, 2021
ಫ್ಯಾಕ್ಟ್ ಚೆಕ್
ಬಿಜೆಪಿ ನಾಯಕರು ಟ್ವೀಟ್ ಮಾಡಿರುವ ಈ ಫೋಟೊ ಬಗ್ಗೆ ಫ್ಯಾಕ್ಟ್ಚೆಕ್ ಮಾಡಿದ ಆಲ್ಟ್ ನ್ಯೂಸ್ ಇದು ಸಿತಾಲ್ಗುಚಿಯಲ್ಲಿ ನಡೆದ ಗಲಭೆಯಲ್ಲಿ ಗಾಯಗೊಂಡ ಯೋಧನ ಫೋಟೊ ಅಲ್ಲ ಎಂದು ಹೇಳಿದೆ. ಈ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2021 ಏಪ್ರಿಲ್ 10ರಂದು ದೈನಿಕ್ ಜಾಗರಣ್ನಲ್ಲಿ ಪ್ರಕಟವಾದ ವರದಿಯಲ್ಲಿ ಈ ಫೋಟೊ ಇದೆ.
ವರದಿ ಪ್ರಕಾರ ಇದು ಎಎಸ್ಐ ಎಸ್.ಪಿ .ಶರ್ಮಾ ಅವರದ್ದು. ಜಾರ್ಖಂಡ್ನ ಭೀಮಕನರಿ ಸಿಐಎಸ್ಎಫ್ ಶಿಬಿರದಲ್ಲಿ ಕರ್ತವ್ಯ ನಿರತರಾಗಿದ್ದಾಗ ಲಂಗೂರ್ ದಾಳಿ ಮಾಡಿತ್ತು. ನಾಲ್ಕು ಲಂಗೂರ್ಗಳು (ಮಂಗ) ಶರ್ಮಾ ಅವರ ಮೇಲೆ ದಾಳಿ ನಡೆಸಿದ್ದು, ಅವರ ಕುತ್ತಿಗೆಗೆ ಗಾಯಗಳಾಗಿತ್ತು. ಶರ್ಮಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಲ್ಲಿದೆ. ಧನಬಾದ್ನಲ್ಲಿರುವ ಸಿಐಎಸ್ಎಫ್ ಪ್ರಧಾನ ಕಚೇರಿ ಕೂಡಾ ಬಘಮರದಲ್ಲಿ ಎಸ್.ಪಿ ಶರ್ಮಾ ಅವರ ಮೇಲೆ ಲಂಗೂರ್ ಗಳು ದಾಳಿ ಮಾಡಿದ ಫೋಟೊ ಇದು ಎಂದು ಬೂಮ್ ಲೈವ್ಗೆ ತಿಳಿಸಿದೆ.