Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡ ಸುರಂಗದಲ್ಲಿ ಸಿಲುಕಿದವರನ್ನು ರಕ್ಷಿಸಿದವರು ಇವರೇ?; ವೈರಲ್ ಆಗಿದ್ದು AI ರಚಿಸಿದ ಫೋಟೊ

Fact Check: ಉತ್ತರಾಖಂಡ ಕುಸಿದ ಸುರಂಗದಲ್ಲಿ ಸಿಲುಕಿದ 41ಕಾರ್ಮಿಕರನ್ನು ರಕ್ಷಿಸಿದ್ದು ಇವರೇ ಎಂದು ರಕ್ಷಣಾ ಕಾರ್ಯಕರ್ತರ ಗ್ರೂಪ್ ಫೋಟೊವೊಂದನ್ನು ವಿವಿಧ ಸುದ್ದಿ ಮಾಧ್ಯಮಗಳು ಪ್ರಕಟಿಸಿದ್ದವು. ಆದರೆ ಆ ಫೋಟೊ AI ರಚಿತ ಫೋಟೊ. ಸುದ್ದಿ ಮಾಧ್ಯಮಗಳು ಮಾತ್ರವಲ್ಲ ಹಲವು ರಾಜಕಾರಣಿಗಳು ಕೂಡಾಇದೇ ಫೋಟೊವನ್ನು ಟ್ವೀಟ್ ಮಾಡಿದ್ದಾರೆ. ಈ ವೈರಲ್ ಫೋಟೊದ ಫ್ಯಾಕ್ಟ್ ಚೆಕ್ ಇಲ್ಲಿದೆ.

ಉತ್ತರಾಖಂಡ ಸುರಂಗದಲ್ಲಿ ಸಿಲುಕಿದವರನ್ನು ರಕ್ಷಿಸಿದವರು ಇವರೇ?; ವೈರಲ್ ಆಗಿದ್ದು AI ರಚಿಸಿದ ಫೋಟೊ
ಉತ್ತರಾಖಂಡ ರಕ್ಷಣಾ ಕಾರ್ಯಾಚರಣೆಯ ವೈರಲ್ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on: Dec 01, 2023 | 7:28 PM

ದೆಹಲಿ ಡಿಸೆಂಬರ್ 01: ಉತ್ತರಕಾಶಿಯಲ್ಲಿ (Uttarkashi) ಕುಸಿದ ಸಿಲ್ಕ್ಯಾರಾ ಸುರಂಗದಿಂದ 41 ಕಾರ್ಮಿಕರನ್ನು ಯಶಸ್ವಿಯಾಗಿ ಸ್ಥಳಾಂತರಿಸಿದ ನಂತರ ರಕ್ಷಣಾ ಕಾರ್ಯಕರ್ತರ ಗ್ರೂಪ್ ಫೋಟೊವೊಂದು ವೈರಲ್ ಆಗಿದೆ. ಹಲವಾರ ಸುದ್ದಿ ಮಾಧ್ಯಮಗಳು ಕೂಡಾ ಉತ್ತರಾಖಂಡದ(Uttarakhand )ಸುರಂಗದ ರಕ್ಷಣಾ ಕಾರ್ಯಾಚರಣೆಯ ಕುರಿತಾದ ತಮ್ಮ ಸುದ್ದಿ ಲೇಖನಗಳಲ್ಲಿ ಇದೇ ಫೋಟೊವನ್ನು ಬಳಸಿವೆ. ನವೆಂಬರ್ 12, 2023 ರಿಂದ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಭೂಕುಸಿತ ಸಂಭವಿಸಿದ ನಂತರ ಸಿಕ್ಕಿಬಿದ್ದ ನಲವತ್ತೊಂದು ಕಾರ್ಮಿಕರನ್ನ ಮಂಗಳವಾರ ರಕ್ಷಿಸಲಾಯಿತು. 17 ದಿನಗಳ ಕಾಲ ನಡೆದ ಬಹು-ಏಜೆನ್ಸಿ ರಕ್ಷಣಾ ಕಾರ್ಯಾಚರಣೆಯು (Rescue operation) ಹಲವಾರು ಹಿನ್ನಡೆಗಳನ್ನು ನಿವಾರಿಸಿದೆ. ಸಾಗರೋತ್ತರ ಸುರಂಗ ತಜ್ಞರನ್ನು ಒಳಗೊಂಡ ರಕ್ಷಣಾ ಕಾರ್ಯಾಚರಣೆಯು ಭಾರತದಲ್ಲಿ ಜನರ ಗಮನವನ್ನು ಸೆಳೆದಿದೆ ಮತ್ತು ಜಾಗತಿಕವಾಗಿ ಸುದ್ದಿ ಮಾಡಿದೆ.

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ನ್ಯೂಸ್ 18, ಇಂಡಿಯಾ ಟುಡೆ, ಹಿಂದೂಸ್ತಾನ್ ಟೈಮ್ಸ್, ಲೋಕಸತ್ತಾ ಸೇರಿದಂತೆ ಸುದ್ದಿವಾಹಿನಿಗಳು ಕೂಡಾ ಎಐ ರಚಿತ ಫೋಟೊಗಳನ್ನೇ ಬಳಸಿ ಕೃಪೆ ಪಿಐಟಿ ಎಂದು ಉಲ್ಲೇಖಿಸಿದ್ದವು. ಈ ಫೋಟೋ X (ಹಿಂದೆ ಟ್ವಿಟರ್) ನಲ್ಲಿ ವೈರಲ್ ಆಗಿದ್ದು ಸಿಕ್ಕಿಬಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಿದ ಸುದ್ದಿ ಹೊರಬಂದ ನಂತರ ಹಲವಾರು ಮಂದಿ ಇದೇ ಫೋಟೊಗಳನ್ನು ಶೇರ್ ಮಾಡಿದ್ದಾರೆ.

ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್  ಸೇರಿದಂತೆ ಹಲವಾರು ಮಂದಿ ಸುರಂಗ ರಕ್ಷಣಾ ಕಾರ್ಯಾಚರಣೆಯ ಇತರ ಫೋಟೋಗಳೊಂದಿಗೆ ಈ ಫೋಟೊ ಹಂಚಿಕೊಂಡಿದ್ದರು.

ಫ್ಯಾಕ್ಟ್ ಚೆಕ್

ಸುದ್ದಿವಾಹಿನಿಗಳು ಪ್ರಕಟಿಸಿದ ವೈರಲ್ ಫೋಟೋ AI- ರಚಿತವಾದ ಫೋಟೊ. ಇದು ಉತ್ತರಾಖಂಡದ ಕುಸಿದ ಸಿಲ್ಕ್ಯಾರಾ ಸುರಂಗದಿಂದ ಯಶಸ್ವಿ ರಕ್ಷಣಾ ಕಾರ್ಯಾಚರಣೆಯ ನಂತರ ತೆಗೆದ ನಿಜವಾದ ಫೋಟೋ ಅಲ್ಲ ಎಂದು BOOM ವರದಿ ಮಾಡಿದೆ. ಚಿತ್ರದಲ್ಲಿರುವ ಬೆರಳುಗಳು, ಕಣ್ಣುಗಳನ್ನು ಮತ್ತು ಸ್ಯಾಚುರೇಟೆಡ್ ಬಣ್ಣಗಳನ್ನು ಕೂಲಂಕಷವಾಗಿ ಗಮನಿಸಿದರೆ ಅಸಲಿ ಚಿತ್ರ ಮತ್ತು ಎಐ ರಚಿತ ಚಿತ್ರದಲ್ಲಿನ ವ್ಯತ್ಯಾಸಗಳನ್ನು ಕಾಣಬಹುದಾಗಿದೆ.

ವೈರಲ್ ಫೋಟೋವನ್ನು X ಹ್ಯಾಂಡಲ್ @Exclusive_Minds ನಿಂದ ಪೋಸ್ಟ್ ಮಾಡಲಾಗಿದೆ. ಇದು ಸುರಂಗ ರಕ್ಷಣಾ ಕಾರ್ಯಾಚರಣೆಯಲ್ಲಿನ ಹಲವಾರು AI- ರಚಿತ ಫೋಟೋಗಳನ್ನು ಪೋಸ್ಟ್ ಮಾಡಿದೆ.

ಚಿತ್ರವನ್ನು ಪಿಟಿಐ ತನ್ನ ಸಿಂಡಿಕೇಟೆಡ್ ಪ್ರತಿಯ ಭಾಗವಾಗಿ ಅಪ್‌ಲೋಡ್ ಮಾಡಿದೆ. ಅಲ್ಲಿಂದಲೇ ಇತರ ಸುದ್ದಿವಾಹಿನಿಗಳು ಚಿತ್ರವನ್ನು ಬಳಸಿವೆ.

ಇದನ್ನೂ ಓದಿ: Fact Check: ವಿಶ್ವಕಪ್ ಪ್ರೆಸೆಂಟೇಷನ್ ಸಮಾರಂಭದಲ್ಲಿ ಪ್ಯಾಟ್ ಕಮಿನ್ಸ್‌ ಕೈಕುಲುಕದೇ ಹೋದರೆ ಮೋದಿ?

BOOM,ಪಿಟಿಐ ಮೂಲಗಳ ಜತೆ ಮಾತನಾಡಿದ್ದು, ಇದು ಅಚಾತುರ್ಯದ ತಪ್ಪು. ರಾಜ್ಯವರ್ಧನ್ ರಾಥೋಡ್ ಅವರು ಪೋಸ್ಟ್ ಮಾಡಿದ ನಂತರ ಸುದ್ದಿ ಸಂಸ್ಥೆಯು ಫೋಟೋವನ್ನು ತೆಗೆದುಹಾಕಿದೆ ಎಂದು ಹೇಳಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್
RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಪಕ್ಷದ ಅತ್ಯಂತ ಪ್ರಭಾವಿ ನಾಯಕ
ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಪಕ್ಷದ ಅತ್ಯಂತ ಪ್ರಭಾವಿ ನಾಯಕ
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು