Fact Check ನೋಟು ರದ್ದತಿಯಿಂದ ಸಂಕಷ್ಟಕ್ಕೊಳಗಾದ ಜನರನ್ನು ಗೇಲಿ ಮಾಡಿದ್ದಾರಾ ನರೇಂದ್ರ ಮೋದಿ; ಎಡಿಟ್ ಮಾಡಿದ ವಿಡಿಯೊ ವೈರಲ್

| Updated By: ರಶ್ಮಿ ಕಲ್ಲಕಟ್ಟ

Updated on: Nov 11, 2022 | 4:16 PM

ವೈರಲ್ ವಿಡಿಯೊದ ಎರಡನೇ ಭಾಗವನ್ನು ಎಡಿಟ್ ಮಾಡಲಾಗಿದೆ. ಎಡಿಟ್ ಮಾಡದ ಆವೃತ್ತಿಯಲ್ಲಿ, ಪ್ರಧಾನಿ ಹಿಂದಿಯಲ್ಲಿ ಹೀಗೆ ಹೇಳುತ್ತಾರೆ, "ಯಾರೊಬ್ಬರ ಮಗಳ ಮದುವೆಗೆ ಹಣವಿಲ್ಲ, ಇನ್ನೊಬ್ಬರ ಬಳಿ ಅವರ ತಾಯಿಯ ಚಿಕಿತ್ಸೆಗೆ ಹಣವಿಲ್ಲ..

Fact Check ನೋಟು ರದ್ದತಿಯಿಂದ ಸಂಕಷ್ಟಕ್ಕೊಳಗಾದ ಜನರನ್ನು ಗೇಲಿ ಮಾಡಿದ್ದಾರಾ ನರೇಂದ್ರ ಮೋದಿ; ಎಡಿಟ್ ಮಾಡಿದ ವಿಡಿಯೊ ವೈರಲ್
Follow us on

ನವೆಂಬರ್ 8, 2016 ರ ಸಂಜೆ ಪ್ರಧಾನಿ ನರೇಂದ್ರ ಮೋದಿ (Narendra Modi) ರೂ. 500 ಮತ್ತು ರೂ 1,000 ಮುಖಬೆಲೆಯ ನೋಟುಗಳನ್ನು ರದ್ದು ಮಾಡುವುದಾಗಿ ಘೋಷಿಸಿದ್ದರು. ನೋಟು ಅಮಾನ್ಯೀಕರಣದ (Demonetisation) ನಂತರ ರಾಷ್ಟ್ರವ್ಯಾಪಿ ನಗದು ಕೊರತೆ ಕಂಡು ಬಂದಿದ್ದು, ಬ್ಯಾಂಕ್‌ಗಳು ಮತ್ತು ಎಟಿಎಂಗಳ ಮುಂದೆ ವಾರಗಟ್ಟಲೆ ಉದ್ದನೆಯ ಸರತಿ ಸಾಲುಗಳು ಕಂಡು ಬಂತು.ಭಾರತದಾದ್ಯಂತ ಅನೇಕ ಜನರಿಗೆ (ವಿಶೇಷವಾಗಿ ದುರ್ಬಲ ಸಾಮಾಜಿಕ ವರ್ಗಗಳಿಗೆ) ಆರ್ಥಿಕ ಸಂಕಷ್ಟವುಂಟಾಗಿದ್ದು, ನಗದು ಪಡೆಯಲು ಸರತಿ ಸಾಲಿನಲ್ಲಿ ನಿಂತು ಸಾವುಗಳೂ ಸಂಭವಿಸಿತ್ತು. ನೋಟು ಅಮಾನ್ಯೀಕರಣದ ಆರನೇ ವರ್ಷದ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಮೋದಿಯವರ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಜನರ ದುಃಖದಲ್ಲಿ ಪ್ರಧಾನಿ ಮೋದಿ ಖುಷಿ ಪಡುತ್ತಿರುವುದು ಕಂಡೀರಾ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಶೇರ್ ಮಾಡಲಾಗಿದೆ. ವಿಡಿಯೊದಲ್ಲಿ ಮೋದಿ ಸಭಿಕರನ್ನುದ್ದೇಶಿಸಿ ಮಾತನಾಡುತ್ತಿರುವುದನ್ನು ತೋರಿಸಲಾಗಿದೆ. ಮೊದಲು ಮೋದಿ ನೋಟು ಅಮಾನ್ಯೀಕರಣದ ಬಗ್ಗೆ ಮಾತನಾಡಿದ್ದು ತದನಂತರ “ನಿಮ್ಮ ಮನೆಯಲ್ಲಿ ಮದುವೆ ಆದರೆ ಹಣವಿಲ್ಲ ಎಂದು ನಗುತ್ತಾ ಹೇಳುವುದು ಇದರಲ್ಲಿದೆ.

39 ಸೆಕೆಂಡ್ ಅವಧಿಯ ವಿಡಿಯೊವನ್ನು ಹಂಚಿಕೊಂಡ ಟ್ವೀಟಿಗರೊಬ್ಬರು ಹಿಂಸಾತ್ಮಕ ಆನಂದದ ಕ್ರೂರ ಉದಾಹರಣೆ. ಯಾರಾದರೂ ಬಳಲುತ್ತಿರುವಾಗ, ಅವರು ನಗುತ್ತಾರೆ ಎಂದು ಬರೆದಿದ್ದಾರೆ.

ಈ ವೈರಲ್ ವಿಡಿಯೊ ಬಗ್ಗೆ ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಮಾಡಿದ್ದು ಇದು ಎಡಿಟ್ ಮಾಡಿದ ವಿಡಿಯೊ ಎಂದು ಹೇಳಿದೆ. ಪ್ರಧಾನಿಯವರ ಮೂಲ ಭಾಷಣದ ತುಣುಕುಗಳನ್ನು ಒಂದಕ್ಕೊಂದು ಜೋಡಿಸಿ ವೈರಲ್ ಮಾಡಲಾಗಿದೆ.

ಫ್ಯಾಕ್ಟ್ ಚೆಕ್

ವೈರಲ್ ವಿಡಿಯೊದಲ್ಲಿ ನೋಡದರೆ ಎಬಿಪಿಯ ಸುದ್ದಿ ಕ್ಲಿಪ್‌ ಅದಾಗಿದೆ. ಅದರಲ್ಲಿ ಹಿಂದಿಯಲ್ಲಿ “ಪಿಎಂ ನರೇಂದ್ರ ಮೋದಿ ಇನ್ ಜಪಾನ್ ಲೈವ್” ಎಂದು ಬರೆದಿದೆ. ಸಂಬಂಧಿತ ಕೀವರ್ಡ್‌ಗಳಿಂದ ಹುಡುಕಿದಾಗ ನೋಟು ರದ್ದತಿ ನಂತರ ಜಪಾನ್‌ಗೆ ಮೋದಿ ಭೇಟಿಯ ಕುರಿತು ಸುದ್ದಿಗಳು ಸಿಕ್ಕಿವೆ.

ವರದಿಯ ಪ್ರಕಾರ, ನವೆಂಬರ್ 12, 2016 ರಂದು ವಾರ್ಷಿಕ ಶೃಂಗಸಭೆಗಾಗಿ ಮೋದಿ ಜಪಾನ್‌ಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಭಾರತೀಯ ಸಮುದಾಯವನ್ನು ಭೇಟಿ ಮಾಡಿದರು .ಕೋಬೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ABP News YouTube ಚಾನೆಲ್‌ ಅಪ್‌ಲೋಡ್ ಮಾಡಿರುವ ಅದೇ ಕ್ಲಿಪ್‌ನ ದೀರ್ಘ ಆವೃತ್ತಿ ಇದೆ. 21 ನಿಮಿಷಗಳ ಅವಧಿಯ ವಿಡಿಯೊ ಶೀರ್ಷಿಕೆ, ” “PM Narendra Modi’s Speech: interaction with Indian Community in Japan” ಎಂದು ಇದೆ, ವೈರಲ್ ವಿಡಿಯೊದ ಮೊದಲ ಭಾಗವು ಮೂಲದಲ್ಲಿ 7.35-ನಿಮಿಷ ಮತ್ತು 8-ನಿಮಿಷದ ಅಂಕಗಳ ನಡುವೆ ಇರುವುದಾಗಿದೆ.

ವೈರಲ್ ವಿಡಿಯೊದ ಎರಡನೇ ಭಾಗವನ್ನು ಎಡಿಟ್ ಮಾಡಲಾಗಿದೆ. ಎಡಿಟ್ ಮಾಡದ ಆವೃತ್ತಿಯಲ್ಲಿ, ಪ್ರಧಾನಿ ಹಿಂದಿಯಲ್ಲಿ ಹೀಗೆ ಹೇಳುತ್ತಾರೆ, “ಯಾರೊಬ್ಬರ ಮಗಳ ಮದುವೆಗೆ ಹಣವಿಲ್ಲ, ಇನ್ನೊಬ್ಬರ ಬಳಿ ಅವರ ತಾಯಿಯ ಚಿಕಿತ್ಸೆಗೆ ಹಣವಿಲ್ಲ. ಆದರೆ ಹಲವಾರು ಸಮಸ್ಯೆಗಳಿದ್ದರೂ ಜನರು ಈ ಕ್ರಮವನ್ನು (ನೋಟು ರದ್ದತಿ) ಸ್ವಾಗತಿಸಿದ್ದಾರೆ. ನಾನು ಅವರಿಗೆ ನಮಸ್ಕರಿಸುತ್ತೇನೆ. ದೇಶದ ಸುಧಾರಣೆ, 2011 ರಲ್ಲಿ ಜಪಾನ್ ಮಾಡಿದಂತೆಯೇ ಅವರು ಮುಂದೆ ಬರುತ್ತಿದ್ದಾರೆ. ಈ ಭಾಗವು ವೀಡಿಯೊದಲ್ಲಿ 8.25 ನಿಮಿಷ ಮತ್ತು 9.37 ನಿಮಿಷಗಳ ನಡುವೆ ಇದೆ.

ಅದೇ ವಿಡಿಯೊವನ್ನು 12 ನವೆಂಬರ್ 2016 ರಂದು ಪ್ರಧಾನಿ ಕಚೇರಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ, ” PM Narendra Modi’s Speech: interaction with Indian Community in Japan” ಎಂದು ಶೀರ್ಷಿಕೆ ನೀಡಲಾಗಿದೆ.

ನವೆಂಬರ್ 13, 2016 ರಂದು ಇಂಡಿಯಾ ಟುಡೇ ಈ ಬಗ್ಗೆ ವರದಿ ಮಾಡಿದೆ. ” PM Modi in Japan: I salute the people of India for supporting demonetisation despite inconvenience” ಎಂದು ಆ ಸುದ್ದಿಗೆ ಶೀರ್ಷಿಕೆ ನೀಡಲಾಗಿತ್ತು

ಹೀಗಾಗಿ, ವೈರಲ್ ಆಗಿರುವ ವಿಡಿಯೊ 2016ರಲ್ಲಿ ಮೋದಿ ಅವರು ಜಪಾನ್‌ನಲ್ಲಿ ಮಾಡಿದ ಭಾಷಣದ ವಿಡಿಯೊ ತುಣುಕು. ಎಡಿಟ್ ಮಾಡದ ಅಥವಾ ಮೂಲ ವಿಡಿಯೊ ನೋಡಿದರೆ, ನೋಟು ಅಮಾನ್ಯೀಕರಣದ ನಂತರ ಕಷ್ಟ ಅನುಭವಿಸಿದ ಜನರನ್ನು ಪ್ರಧಾನಿ ಮೋದಿ ಗೇಲಿ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.

Published On - 4:14 pm, Fri, 11 November 22