2022 ನೊಬೆಲ್ ಶಾಂತಿ ಪ್ರಶಸ್ತಿ ಪಟ್ಟಿಯಲ್ಲಿ ಫ್ಯಾಕ್ಟ್​​​ಚೆಕರ್​​ ಮೊಹಮ್ಮದ್​​ ಜುಬೇರ್​​, ಪ್ರತೀಕ್ ಸಿನ್ಹಾ: ಟೈಮ್ ವರದಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 05, 2022 | 3:55 PM

ನೊಬೆಲ್ ಸಮಿತಿಯು ನಾಮನಿರ್ದೇಶಿತರ ಹೆಸರನ್ನು ಪ್ರಕಟಿಸದಿದ್ದರೂ ರಾಯಿಟರ್ಸ್ ಸಮೀಕ್ಷೆಯು ಬೆಲರೂಸಿಯನ್ ವಿರೋಧ ಪಕ್ಷದ ರಾಜಕಾರಣಿ ಸ್ವಿಯಾಟ್ಲಾನಾ ತ್ಸಿಖಾನೌಸ್ಕಯಾ, ಬ್ರಾಡ್ ಕಾಸ್ಟರ್ ಡೇವಿಡ್ ಅಟೆನ್‌ಬರೋ, ಹವಾಮಾನ ಕಾರ್ಯಕರ್ತೆ...

2022 ನೊಬೆಲ್ ಶಾಂತಿ ಪ್ರಶಸ್ತಿ ಪಟ್ಟಿಯಲ್ಲಿ ಫ್ಯಾಕ್ಟ್​​​ಚೆಕರ್​​ ಮೊಹಮ್ಮದ್​​ ಜುಬೇರ್​​, ಪ್ರತೀಕ್ ಸಿನ್ಹಾ: ಟೈಮ್ ವರದಿ
ಮೊಹಮ್ಮದ್ ಜುಬೇರ್ ಮತ್ತು ಪ್ರತೀಕ್ ಸಿನ್ಹಾ
Follow us on

ದೆಹಲಿ: ಫ್ಯಾಕ್ಟ್ ಚೆಕರ್ ಮೊಹಮ್ಮದ್ ಜುಬೇರ್ (Mohammed Zubair) ಮತ್ತು ಪ್ರತೀಕ್ ಸಿನ್ಹಾ (Pratik Sinha) ಅವರು 2022 ರ ನೊಬೆಲ್ ಶಾಂತಿ ಪ್ರಶಸ್ತಿಗಿರುವವರ (2022 Nobel Peace Prize) ಪಟ್ಟಿಯಲ್ಲಿದ್ದಾರೆ ಎಂದು ಟೈಮ್ ವರದಿ ಮಾಡಿದೆ. ಟೈಮ್ ವರದಿ ಪ್ರಕಾರ, ಫ್ಯಾಕ್ಟ್ ಚೆಕಿಂಗ್ ವೆಬ್ ಸೈಟ್ ಆಲ್ಟ್‌ನ್ಯೂಸ್‌ನ ಸಹ-ಸಂಸ್ಥಾಪಕರಾದ ಸಿನ್ಹಾ ಮತ್ತು ಜುಬೇರ್ ಅವರು ನಾರ್ವೇಜಿಯನ್ ಶಾಸಕರು, ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಓಸ್ಲೋ (PRIO) ಬಹಿರಂಗಪಡಿಸಿದ ನಾಮನಿರ್ದೇಶನಗಳ ಆಧಾರದ ಮೇಲೆ ಬಹುಮಾನವನ್ನು ಗೆಲ್ಲುವ ಸ್ಪರ್ಧಿಗಳಾಗಿದ್ದಾರೆ . ದೆಹಲಿ ಪೋಲೀಸ್ ಪ್ರಥಮ ಮಾಹಿತಿ ವರದಿ (FIR) ಪ್ರಕಾರ 2018 ರ ಟ್ವೀಟ್‌ಗಾಗಿ ಜುಬೇರ್ ಅವರನ್ನು ಈ ವರ್ಷದ ಜೂನ್‌ನಲ್ಲಿ ಬಂಧಿಸಲಾಯಿತು. ಜುಬೇರ್ ಮಾಡಿದ ಟ್ವೀಟ್ ಹೆಚ್ಚು ಪ್ರಚೋದನಕಾರಿ ಮತ್ತು ದ್ವೇಷದ ಭಾವನೆಗಳನ್ನು ಪ್ರಚೋದಿಸುತ್ತದೆ ಎಂಬುದು ಆರೋಪವಾಗಿತ್ತು. ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲು ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳಿಗಾಗಿ ದೆಹಲಿ ಪೊಲೀಸರು ಆತನ ಮೇಲೆ ಆರೋಪ ಹೊರಿಸಿದ್ದಾರೆ. ಜುಬೇರ್ ಅವರ ಬಂಧನಕ್ಕೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಹೇಳಿಕೆ ನೀಡಿದ್ದ ಅಮೆರಿಕದ ನಾನ್ ಪ್ರಾಫಿಟ್ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ , ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತೊಮ್ಮೆ ಕೆಳಮಟ್ಟಕ್ಕೆ ತಲುಪಿದೆ. ಅಲ್ಲಿ ಸರ್ಕಾರವು ಪಂಥೀಯ ವಿಷಯಗಳ ಬಗ್ಗೆ ವರದಿ ಮಾಡುವ ಪತ್ರಿಕಾ ಸದಸ್ಯರಿಗೆ ಪ್ರತಿಕೂಲ ಮತ್ತು ಅಸುರಕ್ಷಿತ ವಾತಾವರಣವನ್ನು ಸೃಷ್ಟಿಸಿದೆ ಎಂದು ಹೇಳಿದೆ.

ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದ ಒಂದು ತಿಂಗಳ ನಂತರ  ಜುಬೇರ್ ತಿಹಾರ್ ಜೈಲಿನಿಂದ ಹೊರನಡೆದರು. ಸುಮಾರು 343 ಅಭ್ಯರ್ಥಿಗಳ ಪೈಕಿ- 251 ವ್ಯಕ್ತಿಗಳು ಮತ್ತು 92 ಸಂಸ್ಥೆಗಳು – 2022 ರ ನೊಬೆಲ್ ಶಾಂತಿ ಪ್ರಶಸ್ತಿಯ ಪಟ್ಟಿಯಲ್ಲಿದ್ದಾರೆ.

ನೊಬೆಲ್ ಸಮಿತಿಯು ನಾಮನಿರ್ದೇಶಿತರ ಹೆಸರನ್ನು ಪ್ರಕಟಿಸದಿದ್ದರೂ ರಾಯಿಟರ್ಸ್ ಸಮೀಕ್ಷೆಯು ಬೆಲರೂಸಿಯನ್ ವಿರೋಧ ಪಕ್ಷದ ರಾಜಕಾರಣಿ ಸ್ವಿಯಾಟ್ಲಾನಾ ತ್ಸಿಖಾನೌಸ್ಕಯಾ, ಬ್ರಾಡ್ ಕಾಸ್ಟರ್ ಡೇವಿಡ್ ಅಟೆನ್‌ಬರೋ, ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್, ಪೋಪ್ ಫ್ರಾನ್ಸಿಸ್, ಟುವಾಲು ವಿದೇಶಾಂಗ ಸಚಿವ ಸೈಮನ್ ಕೋಫೆ, ಮತ್ತು ಮ್ಯಾನ್ಮಾರ್‌ನ ನ್ಯಾಷನಲ್ ಯೂನಿಟಿ ಸರ್ಕಾರ ನಾರ್ವೇಜಿಯನ್ ಶಾಸಕರಿಂದ ನಾಮನಿರ್ದೇಶನಗೊಂಡವರಲ್ಲಿ ಸೇರಿದೆ.

ನಾಮನಿರ್ದೇಶನಕಾರರ ಅಥವಾ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶಿತರಾದವರ ಹೆಸರನ್ನು ನಿರ್ದಿಷ್ಟ ಪ್ರಶಸ್ತಿಯನ್ನು ನೀಡುವ 50 ನೇ ವಾರ್ಷಿಕೋತ್ಸವವನ್ನು ಗುರುತಿಸುವ ವರ್ಷ ಪ್ರಾರಂಭವಾಗುವವರೆಗೆ ಬಹಿರಂಗಪಡಿಸಲಾಗುವುದಿಲ್ ಎಂದು ಶಾಂತಿ ಪ್ರಶಸ್ತಿಗಾಗಿ ನಾಮನಿರ್ದೇಶನಗಳ ಕುರಿತು ನೊಬೆಲ್ ಸಮಿತಿಯ ನಿಯಮ ಹೇಳಿದೆ.

ಸಿನ್ಹಾ ಮತ್ತು ಜುಬೇರ್ ಅವರಲ್ಲದೆ, ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ, ಯುಎನ್ ನಿರಾಶ್ರಿತರ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ರಷ್ಯಾದ ಭಿನ್ನಮತೀಯ ಮತ್ತು ವ್ಲಾಡಿಮಿರ್ ಪುಟಿನ್ ವಿಮರ್ಶಕ ಅಲೆಕ್ಸಿ ನವಲ್ನಿ ಸಹ ಶಾಂತಿ ಪ್ರಶಸ್ತಿಗೆ ಸ್ಪರ್ಧಿಗಳಾಗಿದ್ದಾರೆ. 2022 ರ ನೊಬೆಲ್ ಶಾಂತಿ ಪ್ರಶಸ್ತಿಯ ವಿಜೇತರನ್ನು ಓಸ್ಲೋದಲ್ಲಿ ಅಕ್ಟೋಬರ್ 7 ರಂದು ಸ್ಥಳೀಯ ಸಮಯ ಬೆಳಿಗ್ಗೆ 11 ಗಂಟೆಗೆ ಘೋಷಿಸಲಾಗುವುದು.

Published On - 3:47 pm, Wed, 5 October 22