ಜಮ್ಮು ಕಾಶ್ಮೀರದಲ್ಲಿ 75 ವರ್ಷಗಳಲ್ಲಿ ಮೆಹಬೂಬಾ-ಫಾರೂಕ್-ಗಾಂಧಿ ಕುಟುಂಬಗಳು ಏನು ಮಾಡಿವೆ? ಅಮಿತ್ ಶಾ ಕಿಡಿಕಿಡಿ
Baramulla: ಬಾರಾಮುಲ್ಲಾದಲ್ಲಿ ರಾಜಕೀಯ ಸಮಾವೇಶದಲ್ಲಿ ಭಾಷಣ ಮಾಡಿದ ಅಮಿತ್ ಶಾ 3 ಕುಟುಂಬಗಳ ವಿರುದ್ಧ ಹರಿಹಾಯ್ದರು. ಮೆಹಬೂಬಾ, ಫಾರೂಕ್, ಗಾಂಧಿ ಕುಟುಂಬಗಳ ವಿರುದ್ಧ ಕಿಡಿಕಾರಿದ ಅವರು 75 ವರ್ಷಗಳಲ್ಲಿ ಜಮ್ಮು-ಕಾಶ್ಮೀರಕ್ಕಾಗಿ ಆ ಕುಟುಂಬಸ್ಥರು ಏನು ಮಾಡಿದ್ದಾರೆ? -ಅಮಿತ್ ಶಾ
ಬಾರಾಮುಲ್ಲಾ (ಉತ್ತರ ಕಾಶ್ಮೀರ): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು (Home minister Amit Shah) 3 ದಿನಗಳ ಕಾಲ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ (Baramulla) ರಾಜಕೀಯ ಸಮಾವೇಶದಲ್ಲಿ ಭಾಷಣ ಮಾಡಿದ ಅಮಿತ್ ಶಾ 3 ಕುಟುಂಬಗಳ ವಿರುದ್ಧ ಹರಿಹಾಯ್ದರು. ಮೆಹಬೂಬಾ, ಫಾರೂಕ್, ಗಾಂಧಿ ಕುಟುಂಬಗಳ ವಿರುದ್ಧ ಕಿಡಿಕಾರಿದ ಅವರು 75 ವರ್ಷಗಳಲ್ಲಿ ಜಮ್ಮು-ಕಾಶ್ಮೀರಕ್ಕಾಗಿ ಆ ಕುಟುಂಬಸ್ಥರು ಏನು ಮಾಡಿದ್ದಾರೆ? ಮೂರೂ ಕುಟುಂಬಗಳು ನಾನಾ ಕಾಲಘಟ್ಟಗಳಲ್ಲಿ ತಮ್ಮ ಕೈಯಲ್ಲೇ ಅಧಿಕಾರ ಇಟ್ಟುಕೊಂಡಿದ್ದರು. ಎಸಿಬಿಯನ್ನ ಜಮ್ಮು-ಕಾಶ್ಮೀರ ಪ್ರವೇಶಿಸಲು ಬಿಡಲಿಲ್ಲ. ಕಾಶ್ಮೀರದ ವಿದ್ಯಾವಂತ ಯುವಕರು ಈಗ ಕೈಗಾರಿಕೆಗಳಿಗೆ ಸೇರುತ್ತಾ ಇದ್ದಾರೆ. ಆ ಕೆಲಸವನ್ನು ಪ್ರಧಾನಿ ಮೋದಿಯವರು ಮಾಡುತ್ತಿದ್ದಾರೆ. ನೀವು ಇದನ್ನ ಬೆಂಬಲಿಸಬೇಕು ಎಂದು ಅಮಿತ್ ಶಾ ಮನವಿ ಮಾಡಿದರು.
ಕೇಂದ್ರ ಸಚಿವ ಅಮಿತ್ ಶಾ ಭಾಷಣ ಆಲಿಸಲು ಕೆಳಗಿನ ಲಿಂಕ್ ಒತ್ತಿ
Massive gathering at a public rally in Baramula, J&K…Watch my address! https://t.co/7SG6JwrBAD
— Amit Shah (@AmitShah) October 5, 2022
ರಾಜ್ಯದಲ್ಲಿ ಮತದಾರರ ಪಟ್ಟಿ ಸಿದ್ಧವಾಗುತ್ತಿದ್ದಂತೆ ಜಮ್ಮು ಕಾಶ್ಮೀರದಲ್ಲಿ ಅತ್ಯಂತ ಪಾರದರ್ಶಕವಾಗಿ ನಡೆಸಲಾಗುವುದು ಎಂದು ಅಮಿತ್ ಶಾ ಇದೆ ವೇಳೆ ಹೇಳಿದ್ದಾರೆ.
Published On - 1:49 pm, Wed, 5 October 22