ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಡಿಸೆಂಬರ್ 9ರಂದು ತಮ್ಮ 74ನೇ ಹುಟ್ಟುಹಬ್ಬ ಆಚರಿಸಿಕೊಂಡಿರು. ಹಲವಾರು ರಾಜಕಾರಣಿಗಳು ಟ್ವಿಟರ್ನಲ್ಲಿ ಸೋನಿಯಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಟ್ವಿಟರ್ನಲ್ಲಿ #SoniaGandhi ಟ್ರೆಂಡ್ ಆದ ದಿನವೇ ‘ಅಂತರರಾಷ್ಟ್ರೀಯ ಬಾರ್ ಡ್ಯಾನ್ಸರ್ ದಿನ’ (#अंतरराष्ट्रीय_बार_डांसर_दिवस) ಮತ್ತು ಬಾರ್ ಡ್ಯಾನ್ಸರ್ (#BarDancer) ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿತ್ತು.
ಬ್ರಾಂಡ್ ವ್ರೈ ಎಂಬ ಟ್ವಿಟರ್ ಹ್ಯಾಂಡಲ್ನಲ್ಲಿ #BarDancerDay ಎಂಬ ಹ್ಯಾಷ್ಟ್ಯಾಗ್ ಬಳಸಿ ಹಾಲಿವುಡ್ ನಟಿಯೊಬ್ಬರ ಫೋಟೊವನ್ನು ಟ್ವೀಟಿಸಲಾಗಿತ್ತು. ಈ ಟ್ವೀಟ್ 900ಕ್ಕಿಂತಲೂ ಹೆಚ್ಚು ಬಾರಿ ರೀಟ್ವೀಟ್ ಆಗಿತ್ತು. ಹಲವಾರು ಟ್ವೀಟಿಗರು ಕನಿಷ್ಠ ಬಟ್ಟೆ ತೊಟ್ಟ ಹಾಲಿವುಡ್ ನಟಿಯರ ಫೋಟೋ ಶೇರ್ ಮಾಡಿ ಸೋನಿಯಾಗಾಂಧಿ ಹುಟ್ಟುಹಬ್ಬದ ದಿನ ಮತ್ತು ಬಾರ್ ಡ್ಯಾನ್ಸರ್ ಹ್ಯಾಷ್ಟ್ಯಾಗ್ ಟ್ರೆಂಡ್ ಮಾಡಿದ್ದ್ದರು.
Please Retweet #BarDancerDay #BarDancerDay #BarDancerDay #BarDancerDay #BarDancerDay #BarDancerDay #BarDancerDay #BarDancerDay #BarDancerDay #BarDancerDay #BarDancerDay #BarDancerDay #BarDancerDay #BarDancerDay #BarDancerDay #BarDancerDay #BarDancerDay pic.twitter.com/OcAGrdy4Py
— विनय राय(ब्रह्मर्षि)? (@Brand_vrai) December 9, 2020
#अंतरराष्ट्रीय_बार_डांसर_दिवस#BarDancerDay #अंतरराष्ट्रीय_बार_डांसर_दिवस
Happy birthday antonio maino pic.twitter.com/vt50adO5jI pic.twitter.com/jLLVnToUgg— बजरंग गोदारा ?❣️ (@6OWwcX17fWGrqeD) December 9, 2020
ಸೋನಿಯಾಗಾಂಧಿ ವಿರುದ್ಧ ಈ ರೀತಿ ಸ್ತ್ರೀವಿರೋಧಿ ಟ್ವೀಟ್ ದಾಳಿಯಾಗಿದ್ದು ಇದು ಮೊದಲೇನೂ ಅಲ್ಲ. 2019 ಮಾರ್ಚ್ ತಿಂಗಳಲ್ಲಿ ನಟಿ ಮರ್ಲಿನ್ ಮನ್ರೊ ಚಿತ್ರವನ್ನು ತಿರುಚಿ ಸೋನಿಯಾಗಾಂಧಿ ಮುಖವನ್ನು ಎಡಿಟ್ ಮಾಡಿರುವ ಚಿತ್ರ ಹರಿದಾಡಿತ್ತು.
@doctorrichabjp ಎಂಬ ಟ್ವಿಟರ್ ಹ್ಯಾಂಡಲ್ನಲ್ಲಿ ಸೋನಿಯಾ ಗಾಂಧಿ ಜತೆ ಕೆಲವು ಫೋಟೊಗಳನ್ನು ಶೇರ್ ಮಾಡಲಾಗಿದೆ. ಈ ಫೋಟೊಗಳ ಪೈಕಿ ಮಧ್ಯೆ ಇರುವ ಫೋಟೊ ಸ್ವಿಸ್ ನಟಿ ಉರ್ಸುಲಾ ಆಂಡ್ರೆಸ್ ಅವರದ್ದಾಗಿದೆ. 1962ರ ಜೇಮ್ಸ್ ಬಾಂಡ್ ನಟನೆಯ ಸಿನಿಮಾದ ಫೋಟೊ ಇದಾಗಿದ್ದು ಇಂಟರ್ನೆಟ್ ಮೂವೀಸ್ ಡೇಟಾಬೇಸ್ನಲ್ಲಿ ಇದು ಲಭ್ಯವಿದೆ ಎಂದು ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಆಲ್ಟ್ ನ್ಯೂಸ್ ವರದಿ ಮಾಡಿದೆ.
सबसे छोटे कपड़ो से सबसे महँगे कपड़े वाली देवी को जन्मदिवस की शुभकामनाएं??#BarDancerDay pic.twitter.com/iot8ZOAJKz
— Dr. Richa Rajpoot (@doctorrichabjp) December 9, 2020
ಮೇಲಿನ ಟ್ವೀಟ್ನಲ್ಲಿರುವ ಇನ್ನೊಂದು ಫೋಟೊ ಕೂಡಾ ಆ್ಯಂಡ್ರೆಸ್ ಅವರದ್ದಾಗಿದ್ದು, ರಷ್ಯಾ ಮೂಲದ ಸೆಲೆಬ್ರಿಟಿ ವೆಬ್ ಲೈಟ್ ದಿ ಪ್ಲೇಸ್ ನಲ್ಲಿ ಈ ಫೋಟೊ ಇದೆ. ಕೆಳಗೆ ಇರುವ ಫೋಟೊ ಮರ್ಲಿನ್ ಮನ್ರೊ ಅವರ ತಿರುಚಿದ ಫೋಟೊ ಆಗಿದೆ.
Fact Check: ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆಯೇ ಶಾಹೀನ್ ಬಾಗ್ ದಾದಿ? ವೈರಲ್ ಫೋಟೊ ಯಾರದ್ದು?