ಬಾಡಿಗೆ ಪಾವತಿ ಮಾಡದೆ ಇದ್ದರೆ ತೊಂದರೆ ಆಗುವುದು ಸತ್ಯ, ಆದರೆ ಅದು ಕ್ರಿಮಿನಲ್​ ಅಪರಾಧ ಅಲ್ಲ: ಎಫ್​ಐಆರ್​ ರದ್ದುಗೊಳಿಸಿದ ಸುಪ್ರೀಂಕೋರ್ಟ್​

| Updated By: Lakshmi Hegde

Updated on: Mar 15, 2022 | 3:40 PM

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬೇಲಾ ಎಂ.ತ್ರಿವೇದಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದ್ದು, ಬಾಡಿಗೆ ನೀಡದೆ ಇರುವುದನ್ನು ಐಪಿಸಿ ಸೆಕ್ಷನ್​​ನಡಿ ಕ್ರಿಮಿನಲ್​ ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ.

ಬಾಡಿಗೆ ಪಾವತಿ ಮಾಡದೆ ಇದ್ದರೆ ತೊಂದರೆ ಆಗುವುದು ಸತ್ಯ, ಆದರೆ ಅದು ಕ್ರಿಮಿನಲ್​ ಅಪರಾಧ ಅಲ್ಲ: ಎಫ್​ಐಆರ್​ ರದ್ದುಗೊಳಿಸಿದ ಸುಪ್ರೀಂಕೋರ್ಟ್​
ಸುಪ್ರೀಂಕೋರ್ಟ್​
Follow us on

ಯಾರೇ ಆಗಲಿ ಬಾಡಿಗೆ ಕೊಡಲು ವಿಫಲವಾದರೆ, ಅದು ತಪ್ಪೇ ಇರಬಹುದು ಹಾಗೇ, ಅದನ್ನು ಪಡೆಯುವವರ ನಿತ್ಯದ ಜೀವನಕ್ಕೆ ತೊಂದರೆಗಳನ್ನು ತಂದೊಡ್ಡಬಲ್ಲದು, ಆದರೆ ಭಾರತೀಯ ದಂಡ ಸಂಹಿತೆ (Indian Penal Code)ಯಡಿ ಪರಿಗಣಿಸಲ್ಪಡುವಷ್ಟು ಶಿಕ್ಷಾರ್ಹ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ (Supreme Court) ಹೇಳಿದೆ. ಭೂಮಾಲೀಕನೊಬ್ಬ, ತನ್ನ ಬಾಡಿಗೆದಾರನ ವಿರುದ್ಧ ದಾಖಲಿಸಿದ್ದ ಎಫ್​ಐಆರ್​​ನ್ನು (FIR) ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ ಈ ತೀರ್ಪು ನೀಡಿದೆ. ಅಂದಹಾಗೇ, ದೂರುದಾರರು ತಮ್ಮ ಬಾಡಿಗಾದರರ ವಿರುದ್ಧ  ಮೊದಲು ಅಲಹಾಬಾದ್​ ಹೈಕೋರ್ಟ್​​ಗೆ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್​, ಮಾಲೀಕರಿಗೆ ಬಾಡಿಗೆದಾರರು ಬಾಡಿಗೆ ಪಾವತಿ ಮಾಡದೆ ಇರುವುದು ಸೆಕ್ಷನ್​ 415 (ವಂಚನೆ ಅಪರಾಧ) ಮತ್ತು ಸೆಕ್ಷನ್​ 403ರಡಿ (ದುರ್ಬಳಕೆ)ಯಲ್ಲಿ ಅಪರಾಧ ಎಂದು ಹೇಳಿತ್ತು. ಮತ್ತು ಇದೇ ಸೆಕ್ಷನ್​​ನಡಿ ದಾಖಲಾದ ಎಫ್​ಐಆರ್​ ರದ್ದುಗೊಳಿಸಲು ನಿರಾಕರಿಸಿತ್ತು. ನಂತರ ಬಾಡಿಗೆದಾರರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು.  

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬೇಲಾ ಎಂ.ತ್ರಿವೇದಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದ್ದು, ಬಾಡಿಗೆದಾರರ ವಿರುದ್ಧ ಐಪಿಸಿ ಸೆಕ್ಷನ್​ 415 ಮತ್ತು 403ರಡಿ ಕೇಸ್​ ದಾಖಲಿಸಿದ್ದನ್ನು ನಾವು ಒಪ್ಪಿಕೊಳ್ಳುತ್ತೇವೆ. ಎಫ್​ಐಆರ್​ನಲ್ಲಿ ಉಲ್ಲೇಖಿಸಲಾದ ಅಂಶಗಳು ಸರಿಯಾಗಿಯೇ ಇದ್ದರೂ ಕೂಡ ಅದನ್ನು ಕ್ರಿಮಿನಲ್​ ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ. ಬಾಡಿಗೆದಾರರ ಸರಿಯಾಗಿ ಬಾಡಿಗೆ ನೀಡದೆ ಇದ್ದಲ್ಲಿ, ಮಾಲೀಕರಿಗೆ ಹಲವು ತೊಂದರೆಯಾಗುತ್ತದೆ. ಹಾಗಂತ ಇದು ಕ್ರಿಮಿನಲ್ ಎನ್ನಿಸಿಕೊಳ್ಳುವುದಿಲ್ಲ ಎಂದು ಹೇಳಿದೆ.

ಹೀಗೆ ಬಾಡಿಗೆದಾರರಿಂದ ಬಾಡಿಗೆ ಪಡೆಯಲು ಸಾಧ್ಯವಾಗದ ಇಬ್ಬರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿ, ಬಾಡಿಗೆದಾರನ ಮೇಲೆ ದಾಖಲಾದ ಎಫ್​ಐಆರ್​ ದಾಖಲು ರದ್ದುಗೊಳಿಸಬಾರದು ಎಂದು ಹೇಳಿದ್ದರು. ಆದರೆ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ ಕೋರ್ಟ್​, ಕಾನೂನಿನ ಅಡಿಯಲ್ಲಿ ತಮಗೆ ಲಭ್ಯವಿರುವಂಥ ನಾಗರಿಕ ಪರಿಹಾರ ಪಡೆಯಲು ಮಾಲೀಕರಿಗೆ ಮುಕ್ತ ಅವಕಾಶವಿದೆ ಎಂದು ಹೇಳಿದೆ. ಹಾಗೇ, ಬಾಡಿಗೆದಾರರ ವಿರುದ್ಧ ಎಫ್​ಐಆರ್ ರದ್ದುಗೊಳಿಸುವ ಸಂದರ್ಭದಲ್ಲಿ, ಮೇಲ್ಮನವಿದಾರರು ಯಾವಾಗ ಮಾಲೀಕರ ಜಾಗವನ್ನು ಖಾಲಿ ಮಾಡಿದರು. ಬಾಡಿಗೆ ಎಷ್ಟು ಬಾಕಿ ಇದೆ ಎಂಬಿತ್ಯಾದಿ ವಿಚಾರಗಳನ್ನೂ ಗಮನಿಸಿದೆ.

ಇದನ್ನೂ ಓದಿ: ಹಿಜಾಬ್ ತಂಟೆಗೆ ಬಂದರೆ ತುಂಡು ತುಂಡು ಮಾಡುವುದಾಗಿ ಹೇಳಿದ್ದ ಮುಕ್ರಂ ಖಾನ್‌ಗೆ ಷರತ್ತುಬದ್ಧ ಜಾಮೀನು