ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಿ: ಪತಂಜಲಿಗೆ ಸುಪ್ರೀಂ ಎಚ್ಚರಿಕೆ
ಈ ಗುರು ಸ್ವಾಮಿ ರಾಮದೇವ್ ಬಾಬಾಗೆ ಏನಾಗಿದೆ?.ಯೋಗವನ್ನು ಜನಪ್ರಿಯಗೊಳಿಸಿದ್ದರಿಂದ ನಾವು ಅವರನ್ನು ಗೌರವಿಸುತ್ತೇವೆ. ನಾವೆಲ್ಲರೂ ಇದನ್ನು ಒಪ್ಪುತ್ತೇವೆ.ಆದರೆ, ಅವರು ಇತರ ವ್ಯವಸ್ಥೆಯನ್ನು ಟೀಕಿಸಬಾರದು. ಆಯುರ್ವೇದದಲ್ಲೇ ಗುಣಮುಖರಾಗುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ ಎಂದು ಸುಪ್ರೀಂಕೋರ್ಟ್ ಕೇಳಿದೆ.
ದೆಹಲಿ ನವೆಂಬರ್ 22: ಯೋಗ ಗುರು ರಾಮ್‌ದೇವ್ (yoga guru Ramdev) ಸಹ-ಸ್ಥಾಪಿತವಾದ ಪತಂಜಲಿ ಆಯುರ್ವೇದ್ (Patanjali Ayurved) ಕಂಪನಿಯು ಹಲವಾರು ರೋಗಗಳಿಗೆ ಚಿಕಿತ್ಸೆ ನೀಡುವ ಕುರಿತು ಜಾಹೀರಾತುಗಳಲ್ಲಿ “ಸುಳ್ಳು” ಮತ್ತು ” ದಾರಿತಪ್ಪಿಸುವ” ಕೆಲಸ ಮಾಡದಂತೆ ಸುಪ್ರೀಂಕೋರ್ಟ್ (Supreme Court) ಮಂಗಳವಾರ ಎಚ್ಚರಿಸಿದೆ. ಪತಂಜಲಿ ಆಯುರ್ವೇದದ ಇಂತಹ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಬೇಕು. ಅಂತಹ ಯಾವುದೇ ಉಲ್ಲಂಘನೆಯನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು ಮೌಖಿಕವಾಗಿ ಹೇಳಿದೆ.
ವ್ಯಾಕ್ಸಿನೇಷನ್ ಡ್ರೈವ್ ಮತ್ತು ಆಧುನಿಕ ಔಷಧಿಗಳ ವಿರುದ್ಧ ರಾಮ್‌ದೇವ್ ಅವರ ಅಭಿಯಾನವನ್ನು ಆರೋಪಿಸಿ ಐಎಂಎ ಸಲ್ಲಿಸಿದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್, ಆಗಸ್ಟ್ 23, 2022 ರಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಆಯುಷ್ ಮತ್ತು ಪತಂಜಲಿ ಆಯುರ್ವೇದ್ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಿತ್ತು.
ಸಂಕ್ಷಿಪ್ತ ವಿಚಾರಣೆಯ ಸಂದರ್ಭದಲ್ಲಿ, ಪೀಠವು ಪತಂಜಲಿ ಆಯುರ್ವೇದ್‌ಗೆ ಆಧುನಿಕ ವೈದ್ಯಕೀಯ ವ್ಯವಸ್ಥೆಗಳ ವಿರುದ್ಧ ತಪ್ಪುದಾರಿಗೆಳೆಯುವ ಹಕ್ಕುಗಳು ಮತ್ತು ಜಾಹೀರಾತುಗಳನ್ನು ಪ್ರಕಟಿಸದಂತೆ ಕೇಳಿಕೊಂಡಿತು. ಒಂದು ನಿರ್ದಿಷ್ಟ ಕಾಯಿಲೆಯನ್ನು ಗುಣಪಡಿಸಬಹುದು ಎಂದು ಸುಳ್ಳು ಹೇಳಿಕೆ ನೀಡಿದರೆ ಪ್ರತಿ ಉತ್ಪನ್ನಕ್ಕೆ ₹ 1 ಕೋಟಿ ದಂಡ ವಿಧಿಸಲು ಪೀಠವು ಪರಿಗಣಿಸಬಹುದು ಎಂದು ಅದು ಹೇಳಿದೆ.
ಕೆಲವು ಖಾಯಿಲೆಗಳಿಗೆ ಪರಿಪೂರ್ಣ ಚಿಕಿತ್ಸೆ ನೀಡುವ ಔಷಧಗಳ ಬಗ್ಗೆ ಹೇಳಿಕೊಳ್ಳಲಾಗುತ್ತಿರುವ ತಪ್ಪು ವೈದ್ಯಕೀಯ ಜಾಹೀರಾತುಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರದ ಪರ ಹಾಜರಾದ ವಕೀಲರನ್ನು ಸುಪ್ರೀಂಕೋರ್ಟ್ ಕೇಳಿದೆ.
ಪೀಠವು ಮುಂದಿನ ವರ್ಷ ಫೆಬ್ರವರಿ 5 ರಂದು ಐಎಂಎಯ ಮನವಿಯನ್ನು ವಿಚಾರಣೆ ನಡೆಸಲಿದೆ.
ಮೇಲ್ಮನವಿಯ ಮೇಲೆ ನೋಟಿಸ್ ಜಾರಿ ಮಾಡುವಾಗ, ಅಲೋಪತಿ ಮತ್ತು ಅಲೋಪತಿ ವೈದ್ಯರನ್ನು ಟೀಕಿಸಿದ್ದಕ್ಕಾಗಿ ರಾಮ್‌ದೇವ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್, ವೈದ್ಯರು ಮತ್ತು ಇತರ ಚಿಕಿತ್ಸಾ ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಬೇಕು ಎಂದು ಹೇಳಿದೆ.
“ಈ ಗುರು ಸ್ವಾಮಿ ರಾಮದೇವ್ ಬಾಬಾಗೆ ಏನಾಗಿದೆ?.ಯೋಗವನ್ನು ಜನಪ್ರಿಯಗೊಳಿಸಿದ್ದರಿಂದ ನಾವು ಅವರನ್ನು ಗೌರವಿಸುತ್ತೇವೆ. ನಾವೆಲ್ಲರೂ ಇದನ್ನು ಒಪ್ಪುತ್ತೇವೆ.ಆದರೆ, ಅವರು ಇತರ ವ್ಯವಸ್ಥೆಯನ್ನು ಟೀಕಿಸಬಾರದು. ಆಯುರ್ವೇದದಲ್ಲೇ ಗುಣಮುಖರಾಗುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ. ಎಲ್ಲ ವೈದ್ಯರನ್ನೂ ಕೊಲೆಗಾರರು ಅಥವಾ ಇನ್ನೇನೋ ಎಂದು ಆರೋಪಿಸುತ್ತಿರುವ ಜಾಹೀರಾತುಗಳನ್ನು ನೀವು ನೋಡುತ್ತೀರಿ. ಬೃಹತ್ ಜಾಹೀರಾತುಗಳನ್ನು (ನೀಡಲಾಗಿದೆ)” ಎಂದು ನಿವೃತ್ತರಾದ ನಂತರ ಆಗಿನ ಸಿಜೆಐ ಎನ್‌ವಿ ರಮಣ ನೇತೃತ್ವದ ಪೀಠ ಹೇಳಿತು.
ಇದನ್ನೂ ಓದಿ: ಕೋಟಾ: ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪೋಷಕರೇ ಕಾರಣ ಎಂದ ಸುಪ್ರೀಂಕೋರ್ಟ್
ಆಯುರ್ವೇದ ಔಷಧಿಗಳ ಉತ್ಪಾದನೆಯಲ್ಲಿ ತೊಡಗಿರುವ ಸಂಸ್ಥೆಗಳು ಸಾರ್ವಜನಿಕರನ್ನು ದಾರಿತಪ್ಪಿಸಲು ಅಲೋಪಥಿ ಮತ್ತು ವೈದ್ಯರನ್ನು ಕಳಪೆಯಾಗಿ ಬಿಂಬಿಸುವ ಹಲವಾರು ಜಾಹೀರಾತುಗಳನ್ನು IMA ಉಲ್ಲೇಖಿಸಿದೆ. ಆಧುನಿಕ ಔಷಧಗಳನ್ನು ಸೇವಿಸಿದರೂ ವೈದ್ಯಾಧಿಕಾರಿಗಳೇ ಸಾಯುತ್ತಿದ್ದಾರೆ ಎಂದು ಈ ಜಾಹೀರಾತುಗಳು ಹೇಳುತ್ತವೆ ಎಂದು ಐಎಂಎ ವಕೀಲರು ತಿಳಿಸಿದ್ದಾರೆ.
ದೇಶದಲ್ಲಿ ಕೋವಿಡ್-19 ಲಸಿಕೆ ಡ್ರೈವ್ ಮತ್ತು ಅಲೋಪತಿ ಔಷಧಿಗಳ ಬಳಕೆ ಸೇರಿದಂತೆ ವ್ಯಾಕ್ಸಿನೇಷನ್‌ಗಳನ್ನು ನಿರುತ್ಸಾಹಗೊಳಿಸಲು ಸಂಘಟಿತ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು IMA ಹೇಳಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ