ಹೆಂಡತಿಯ ಹೆಸರಿನಲ್ಲಿ ಆಸ್ತಿ ಖರೀದಿಸುವುದು ಎಂದಿಗೂ ಬೇನಾಮಿ ಅಲ್ಲ ಎಂದ ಕೋರ್ಟ್​!

|

Updated on: Jun 12, 2023 | 2:23 PM

benami transaction: ಪತ್ನಿಯ ಹೆಸರಿನಲ್ಲಿ ಖರೀದಿಸಿದ ಆಸ್ತಿಯನ್ನು ಬೇನಾಮಿ ವಹಿವಾಟು ಎಂದು ಕರೆಯಲಾಗುವುದಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ಹೇಳಿದೆ.

ಹೆಂಡತಿಯ ಹೆಸರಿನಲ್ಲಿ ಆಸ್ತಿ ಖರೀದಿಸುವುದು ಎಂದಿಗೂ ಬೇನಾಮಿ ಅಲ್ಲ ಎಂದ ಕೋರ್ಟ್​!
ಹೆಂಡತಿಯ ಹೆಸರಿನಲ್ಲಿ ಆಸ್ತಿ ಖರೀದಿಸುವುದು ಎಂದಿಗೂ ಬೇನಾಮಿ ಅಲ್ಲ ಎಂದ ಕೋರ್ಟ್​!
Image Credit source: taxguru.in
Follow us on

ಕೋಲ್ಕತ್ತಾ: ಭಾರತೀಯ ಸಮಾಜದಲ್ಲಿ(Hindu Undivided Family -HUF), ಗಂಡ (husband) ತನ್ನ ಹೆಂಡತಿಯ (wife) ಹೆಸರಿನಲ್ಲಿ ಆಸ್ತಿಯನ್ನು ಸಂಪಾದಿಸಲು ಅದಕ್ಕಾಗಿ ಹಣ ಪೂರೈಸಿದರೆ, ಅದನ್ನು ಬೇನಾಮಿ ವ್ಯವಹಾರ (benami transaction) ಎಂದು ಸೂಚಿಸುವುದಿಲ್ಲ. ಹಣದ ಮೂಲವು ನಿಸ್ಸಂದೇಹವಾಗಿ, ಒಂದು ಪ್ರಮುಖ ಅಂಶವಾಗಿದೆ. ಆದರೆ ನಿರ್ಣಾಯಕ ಅಂಶವಲ್ಲ ಎಂದು ನ್ಯಾಯಮೂರ್ತಿಗಳಾದ ತಪಬ್ರತ ಚಕ್ರವರ್ತಿ ಮತ್ತು ಪಾರ್ಥ ಸಾರ್ಥಿ ಚಟರ್ಜಿ ಅವರ ಹೈಕೋರ್ಟ್ ವಿಭಾಗೀಯ ಪೀಠವು (Calcutta high court) ಕಳೆದ ವಾರ ತನ್ನ ಆದೇಶದಲ್ಲಿ ತಿಳಿಸಿದೆ. ಕೌಟುಂಬಿಕ ಆಸ್ತಿ ವಿವಾದವೊಂದರಲ್ಲಿ ಮಗ ತನ್ನ ದಿವಂಗತ ತಂದೆ ತನ್ನ ತಾಯಿಗೆ ಬೇನಾಮಿ ಆಸ್ತಿ ನೀಡಿದ್ದಾರೆ ಎಂದು ಹೇಳಿರುವ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನಡೆಸಿದೆ. ಮಗ ತನ್ನ ಆರೋಪ ಸಾಬೀತುಪಡಿಸಲು ವಿಫಲನಾಗಿದ್ದಾನೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. “ವರ್ಗಾವಣೆಯು ಬೇನಾಮಿ ವಹಿವಾಟು ಎಂದು ಸಾಬೀತುಪಡಿಸುವ ಜವಾಬ್ದಾರಿ ಯಾವಾಗಲೂ ಅದನ್ನು ಪ್ರತಿಪಾದಿಸುವ ವ್ಯಕ್ತಿಯ ಮೇಲೆ ಇರುತ್ತದೆ” ಎಂದು ನ್ಯಾಯಾಲಯವು ಹೇಳಿದೆ.

ಎರಡು ರೀತಿಯ ಬೇನಾಮಿ ವಹಿವಾಟುಗಳನ್ನು ಸಾಮಾನ್ಯವಾಗಿ ಗುರುತಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ: ಮೊದಲ ವಿಧದಲ್ಲಿ, ಒಬ್ಬ ವ್ಯಕ್ತಿಯು ತನ್ನ ಸ್ವಂತ ಹಣದಿಂದ ಆಸ್ತಿಯನ್ನು ಖರೀದಿಸುತ್ತಾರೆ. ಆದರೆ ಇನ್ನೊಬ್ಬ ವ್ಯಕ್ತಿಗೆ ಲಾಭದಾಯಕ ಉದ್ದೇಶವಿಲ್ಲದೆ, ಆ ವ್ಯಕ್ತಿಯ ಹೆಸರಿನಲ್ಲಿ ಆಸ್ತಿಯನ್ನು ನೋಂದಾಯಿಸಿರುತ್ತಾನೆ.

Also Read:  Rs 6 Cr Alimony: ವಿಚ್ಛೇದನಕ್ಕಾಗಿ ಪತಿಗೆ ಬೆದರಿಕೆ, 6 ಕೋಟಿ ರೂ ಜೀವನಾಂಶಕ್ಕೆ ಬೇಡಿಕೆ -ಪತ್ನಿಯ ವಿರುದ್ಧ ಬೆದರಿಸುವಿಕೆ ಪ್ರಕರಣ ದಾಖಲಿಸಿದ ಪೊಲೀಸರು

ಎರಡನೆಯ ವಿಧವೆಂದರೆ, ಬೇನಾಮಿ ವಹಿವಾಟು ಎಂದು ಸಡಿಲವಾಗಿ ಹೇಳಲಾಗುತ್ತದೆ. ಆಸ್ತಿಯ ಮಾಲೀಕರು ಆಸ್ತಿಯ ಶೀರ್ಷಿಕೆಯನ್ನು ವರ್ಗಾಯಿಸುವ ಉದ್ದೇಶವಿಲ್ಲದೆ ಇನ್ನೊಬ್ಬರ ಪರವಾಗಿ ಪತ್ರವನ್ನು ನೋಂದಾಯಿಸುತ್ತಾರೆ. ನಂತರದ ಪ್ರಕರಣದಲ್ಲಿ, ವರ್ಗಾವಣೆದಾರರು ನಿಜವಾದ ಮಾಲೀಕರಾಗಿ ಮುಂದುವರಿಯುತ್ತಾರೆ ಎಂದು ನ್ಯಾಯಾಲಯ ವಿಭಾಗ ಮಾಡಿದೆ.

ಈ ವೇಳೆ ತಂದೆ 1969ರಲ್ಲಿ ಯಾವುದೇ ಆದಾಯದ ಮೂಲವಿಲ್ಲದೆ ಗೃಹಿಣಿಯಾಗಿರುವ ಪತ್ನಿಯ ಹೆಸರಿಗೆ ಆಸ್ತಿ ಖರೀದಿಸಿ ನೋಂದಣಿ ಮಾಡಿಸಿಕೊಂಡಿದ್ದರು. ಅದರ ಮೇಲೆ ಎರಡು ಅಂತಸ್ತಿನ ಮನೆ ಕಟ್ಟಿದರು. ಅವರು 1999 ರಲ್ಲಿ ನಿಧನರಾದ ನಂತರ, ಉತ್ತರಾಧಿಕಾರ ಕಾನೂನುಗಳ ಪ್ರಕಾರ ಅವರ ಪತ್ನಿ, ಮಗ ಮತ್ತು ಮಗಳು ತಲಾ ಮೂರನೇ ಒಂದು ಭಾಗದಷ್ಟು ಆಸ್ತಿಯನ್ನು ಪಡೆದರು. ಮಗ 2011 ರವರೆಗೆ ಆ ಮನೆಯಲ್ಲಿದ್ದನು. ಆದರೆ ಆತ ಮನೆಯಿಂದ ಹೊರ ಹೋದಾಗ, ಆಸ್ತಿಯನ್ನು ತನಗೆ, ಅವನ ತಾಯಿ ಮತ್ತು ಸಹೋದರಿಯ ನಡುವೆ ಹಂಚಿಕೆಯಾಗಬೇಕೆಂದು ಬಯಸಿದನು. ಆಗ ಉಳಿದಿಬ್ಬರು ಆತನ ಪ್ರಸ್ತಾಪವನ್ನು ತಿರಸ್ಕರಿಸಿದರು. ಆದರೂ ಬೇನಾಮಿ ವಹಿವಾಟಿನ ಆರೋಪದ ಮೇಲೆ ಮಗ ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಿಷಯಗಳನ್ನು ಸಂಕೀರ್ಣಗೊಳಿಸುತ್ತಿರುವ ತನ್ನ ಮಗನ ನಡವಳಿಕೆಯಿಂದ ಕೆರಳಿದ ತಾಯಿ, 2019 ರಲ್ಲಿ ಸಾಯುವ ಮೊದಲು ತನ್ನ ಮಗಳಿಗೆ ಆಸ್ತಿಯ ಪಾಲನ್ನು ಉಡುಗೊರೆಯಾಗಿ ನೀಡಿದ್ದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ