AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಯೋತ್ಪಾದಕ, ಕಲ್ಲು ತೂರಾಟಗಾರರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಇಲ್ಲ: ಅಮಿತ್​ ಶಾ

Jammu and Kashmir: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ, ಕಲ್ಲು ತೂರಾಟಗಾರರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಇಲ್ಲ ಎಂದು ಅಮಿತ್​​​ ಶಾ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಇದರ ಜತೆಗೆ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಯಾವೆಲ್ಲ ಕ್ರಮಗಳನ್ನು ತೆಗೆದುಕೊಂಡಿದೆ ಎಂಬ ಬಗ್ಗೆಯೂ ಸಂದರ್ಶನದಲ್ಲಿ ಹೇಳಿದ್ದಾರೆ. ಅವುಗಳ ಮಾಹಿತಿ ಇಲ್ಲಿದೆ.

ಭಯೋತ್ಪಾದಕ, ಕಲ್ಲು ತೂರಾಟಗಾರರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಇಲ್ಲ: ಅಮಿತ್​ ಶಾ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 27, 2024 | 3:38 PM

ಕೇಂದ್ರ ಗೃಹಸಚಿವ ಅಮಿತ್​​ ಶಾ (Union Home Minister Amit Shah) ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಭಯೋತ್ಪಾದಕರ ಹಾಗೂ ಕಲ್ಲು ತೂರಾಟಗಾರರ ಕುಟುಂಬಕ್ಕೆ ಅಥವಾ ಅವರ ನಿಕಟವರ್ತಿಗಳಿಗೆ ಸರ್ಕಾರಿ ಉದ್ಯೋಗ ಸಿಗುವುದಿಲ್ಲ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಸರ್ಕಾರವು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಹಾಗೂ ಅಂತಹ ಪರಿಸರವನ್ನು ನಿರ್ಮೂಲನೆ ಮಾಡಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಭಯೋತ್ಪಾದಕ ಘಟನೆ ಕಡಿಮೆಯಾಗಿದೆ ಎಂದು ಹೇಳಿದರು.

ಕಾಶ್ಮೀರದಲ್ಲಿ, ಯಾರಾದರೂ ಭಯೋತ್ಪಾದಕ ಸಂಘಟನೆಗೆ ಸೇರಿದರೆ, ಅವರ ಕುಟುಂಬದ ಸದಸ್ಯರಿಗೆ ಯಾವುದೇ ಸರ್ಕಾರಿ ಉದ್ಯೋಗ ನೀಡುವುದಿಲ್ಲ ಎಂಬ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದರ ಜತೆಗೆ ಯಾರಾದರೂ ಕಲ್ಲು ತೂರಾಟದಲ್ಲಿ ತೊಡಗಿದರೆ ಅವರ ಕುಟುಂಬದ ಸದಸ್ಯರಿಗೂ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ನಮ್ಮ ಈ ನಿರ್ಧಾರದ ವಿರುದ್ಧ ಕೆಲವೊಂದು ಬುದ್ಧಿಜೀವಿಗಳು ಸುಪ್ರೀಂ ಕೋರ್ಟ್​​​ನಲ್ಲಿ ಅರ್ಜಿ ಸಲ್ಲಿಸಿದರು. ಕೊನೆಗೆ ಸುಪ್ರೀಂನಲ್ಲೂ ಸರ್ಕಾರದ ನಿರ್ಧಾರವೇ ಮೇಲುಗೈ ಸಾಧಿಸಿತು. ಇನ್ನು ಭಯೋತ್ಪಾಕದ ಕುಟುಂಬದವರ ತನ್ನ ಹತ್ತಿರದ ಸಂಬಂಧಿಗಳು ಅಧಿಕಾರಿಗಳ ಮುಂದೆ ಬಂದು ನಮ್ಮ ಕುಟುಂಬದ ಈ ವ್ಯಕ್ತಿ ಭಯೋತ್ಪಾದಕ ಸಂಘಟನೆಯಲ್ಲಿ ತೋಡಗಿಸಿಕೊಂಡಿದರೆ ಎಂದು ಹೇಳಿದರೆ ಅವರಿಗೆ ವಿನಾಯಿತಿ ನೀಡಿಲಾಗುವುದು ಎಂದು ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ನಮ್ಮ ಸೇನೆ ಮತ್ತು ಅಧಿಕಾರಿಗಳು ಸರಿಯಾದ ಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿ ಅಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ. ಎಲ್ಲರೂ ನಿರ್ಭೀತವಾಗಿ ಹಾಗೂ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು. ಈ ಹಿಂದೆ ಭಯೋತ್ಪಾದಕರು ಹತ್ಯೆಯಾದರೆ ಅವರನ್ನು ಕಾಶ್ಮೀರದಲ್ಲಿ ಮೆರವಣಿಗೆ ಮಾಡಲಾಗುತ್ತಿತ್ತು. ಈ ಎಲ್ಲ ಪ್ರವೃತ್ತಿಯನ್ನು ನಿಲ್ಲಿಸಿದ್ದೇವೆ. ಭಯೋತ್ಪಾದಕನನ್ನು ಎಲ್ಲಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಮಾಧಿ ಮಾಡಲಾಗಿದೆ. ಆದರೆ ಅವರನ್ನು ಪ್ರತ್ಯೇಕ ಸ್ಥಳದಲ್ಲಿ ನಾವು ಸಮಾಧಿ ಮಾಡುತ್ತಿದ್ದೇವೆ ಎಂದರು.

ಕಾಶ್ಮೀರದಲ್ಲಿ ಒಬ್ಬ ಭಯೋತ್ಪಾದಕನನ್ನು ನಮ್ಮ ಭದ್ರತಾ ಪಡೆಗಳು ಸುತ್ತುವರೆದಾಗ, ಮೊದಲು ಶರಣಾಗಲು ಅವಕಾಶ ನೀಡಲಾಗುತ್ತದೆ. ಹಾಗೂ ನಾವು ಅವನ ತಾಯಿ ಅಥವಾ ಹೆಂಡತಿ, ಕುಟುಂಬ ಸದಸ್ಯರನ್ನು ಕರೆದು ಭಯೋತ್ಪಾದಕನಿಗೆ ಶರಣಾಗುವಂತೆ ಮನವಿ ಮಾಡುವಂತೆ ಕೇಳಿಕೊಳ್ಳುತ್ತೇವೆ. ಒಂದು ವೇಳೆ ಅವನು (ಭಯೋತ್ಪಾದಕ) ಅದಕ್ಕೆ ಒಪ್ಪದಿದ್ದರೆ ಅವನು ಸಾಯುತ್ತಾನೆ ಎಂದು ಹೇಳಿದರು.

ಇದನ್ನೂ ಓದಿ: ಆರ್ಥಿಕ ಸಂಕಷ್ಟಕ್ಕೊಳಗಾದ ಕೇರಳಕ್ಕೆ ಪ್ರಧಾನಿ ಸಹಾಯಹಸ್ತ; ಕೇಂದ್ರದಿಂದ 21,253 ಕೋಟಿ ರೂ ನೆರವು

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳು ಗಮನಾರ್ಹವಾಗಿ ಕಡಿಮೆಯಾಗಿದೆ. ಹಾಗೂ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಮೂಲಕ ನಾವು ಭಯೋತ್ಪಾದಕ ನಿಧಿಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಇನ್ನು ಮುಂದಕ್ಕೆ ಇದರ ಮುಂದುವರಿದ ಭಾಗವಾಗಿ ಕ್ರಮ ಕೈಗೊಳ್ಳತ್ತೇವೆ ಎಂದರು. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂದರ್ಭದಲ್ಲಿ, ಸರ್ಕಾರವು ಭಯೋತ್ಪಾದಕ ಸಿದ್ಧಾಂತದ ಪ್ರಕಟಣೆ ಮತ್ತು ಅದರ ಪ್ರಚಾರ ಮಾಡುವುದನ್ನು ತಡೆಯಲಾಗಿತ್ತು. ಹೀಗೆ ಅನೇಕ ಕ್ರಮಗಳನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ಅಧಿಕಾರಿಗಳನ್ನು ಬಯ್ಯುವುದು ಬಿಟ್ರೆ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಸಿಂಹ
ಅಧಿಕಾರಿಗಳನ್ನು ಬಯ್ಯುವುದು ಬಿಟ್ರೆ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಸಿಂಹ
ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ