ಆಂಧ್ರಪ್ರದೇಶ: ವಜ್ರ ಬೇಟೆ, ನಾಲ್ಕು ಕಡೆ ಲಕ್ಷ ಲಕ್ಷ ಬೆಲೆ ಬಾಳುವ ವಜ್ರಗಳು ಪತ್ತೆ

ಆಂಧ್ರಪ್ರದೇಶದ ನಾಲ್ಕು ಪ್ರದೇಶಗಳಲ್ಲಿ ಲಕ್ಷ ಲಕ್ಷ ಬೆಲೆ ಬಾಳುವ ವಜ್ರಗಳು ಪತ್ತೆಯಾಗಿವೆ. ಜೊನ್ನಗಿರಿಯ ರೈತರೊಬ್ಬರಿಗೆ ವಜ್ರ ಸಿಕ್ಕಿದ್ದು, ವಜ್ರ ವ್ಯಾಪಾರಿಗೆ ಮಾರಾಟ ಮಾಡಿ 6 ಲಕ್ಷ ರೂ. ಗಳಿಸಿದ್ದಾರೆ. ಶನಿವಾರ ಮಡ್ಡಿಕೇರ ಮಂಡಲದ ಹಂಪಾದಲ್ಲಿ ರೈತನಿಗೆ ವಜ್ರ ಸಿಕ್ಕಿದ್ದು 5 ಲಕ್ಷ ರೂ.ಗೆ ವರ್ತಕರೊಬ್ಬರು ಖರೀದಿಸಿದ್ದಾರೆ. ಎರಡು ದಿನಗಳಲ್ಲಿ ನಾಲ್ಕು ವಜ್ರಗಳು ಪತ್ತೆಯಾಗಿವೆ.

ಆಂಧ್ರಪ್ರದೇಶ: ವಜ್ರ ಬೇಟೆ, ನಾಲ್ಕು ಕಡೆ ಲಕ್ಷ ಲಕ್ಷ ಬೆಲೆ ಬಾಳುವ ವಜ್ರಗಳು ಪತ್ತೆ
ವಜ್ರ
Follow us
ನಯನಾ ರಾಜೀವ್
|

Updated on: May 27, 2024 | 2:03 PM

ಪ್ರತಿವರ್ಷ ಮಳೆಗಾಲದ ಆರಂಭದಲ್ಲಿ ಕರ್ನೂಲ್​ನಲ್ಲಿ ರೈತರು ತಮ್ಮ ಗದ್ದೆಗಳಲ್ಲಿ ವಜ್ರ(Diamond)ದ ಹುಡುಕಾಟ ನಡೆಸುತ್ತಾರೆ. ಕೆಲವೊಮ್ಮೆ ಬಣ್ಣದ ಕಲ್ಲು ಕಂಡರೂ ಅದನ್ನು ವಜ್ರವೆಂದು ಪರೀಕ್ಷಿಸಲು ಚಿನ್ನದಂಗಡಿಗೆ ಓಡುತ್ತಾರೆ. ಒಂದು ವಜ್ರ ಸಿಕ್ಕಿ ತಮ್ಮ ಎಲ್ಲಾ ತಲೆಮಾರುಗಳ ಬಡತನ ದೂರವಾಗಲಿ ಎಂದು ಆಶಿಸುತ್ತಾ ವಜ್ರಗಳನ್ನು ಹುಡುಕುತ್ತಾರೆ. ಈ ವರ್ಷವೂ ಕರ್ನೂಲ್​ನಲ್ಲಿ ಕೆಲವರಿಗೆ ವಜ್ರ ಸಿಕ್ಕಿದೆ ಎನ್ನುವ ಮಾಹಿತಿ ಇದೆ.

ಜೊನ್ನಗಿರಿಯ ರೈತರೊಬ್ಬರಿಗೆ ವಜ್ರ ಸಿಕ್ಕಿದ್ದು, ವಜ್ರ ವ್ಯಾಪಾರಿಗೆ ಮಾರಾಟ ಮಾಡಿ 6 ಲಕ್ಷ ರೂ. ಗಳಿಸಿದ್ದಾರೆ. ಶನಿವಾರ ಮಡ್ಡಿಕೇರ ಮಂಡಲದ ಹಂಪಾದಲ್ಲಿ ರೈತನಿಗೆ ವಜ್ರ ಸಿಕ್ಕಿದ್ದು 5 ಲಕ್ಷ ರೂ.ಗೆ ವರ್ತಕರೊಬ್ಬರು ಖರೀದಿಸಿದ್ದಾರೆ. ಎರಡು ದಿನಗಳಲ್ಲಿ ನಾಲ್ಕು ವಜ್ರಗಳು ಪತ್ತೆಯಾಗಿವೆ.ಒಟ್ಟು 70 ಲಕ್ಷ ರೂ. ಬೆಲೆಬಾಳುವ ವಜ್ರಗಳು ಪತ್ತೆಯಾಗಿವೆ.

2023ರ ಜೂನ್​ನಲ್ಲಿ ರೈತರೊಬ್ಬರು ಬರೋಬ್ಬರಿ 2 ಕೋಟಿ ರೂ,ಗೆ ವಜ್ರವನ್ನು ಮಾರಾಟ ಮಾಡಿದ್ದರು. 2021ರಲ್ಲಿ ರೈತರೊಬ್ಬರು 2.4 ಕೋಟಿ ರೂ., 2020 ಹಾಗೂ 2019ರಲ್ಲಿ ರೈತರು ಉತ್ತಮ ಲಾಭ ಗಳಿಸಿದ್ದರು.

ಮತ್ತಷ್ಟು ಓದಿ: ಚಿಕ್ಕಮಗಳೂರು: 4 ಕೋಟಿ ಮೌಲ್ಯದ ಚಿನ್ನ, ವಜ್ರ ಬೆಳ್ಳಿ ವಶಕ್ಕೆ ಪಡೆದ ಪೊಲೀಸರು

ಅನಂತಪುರ ಜಿಲ್ಲೆಯ ತುಗ್ಗಲಿ, ಜೊನ್ನಗಿರಿ, ಕರ್ನೂಲ್​ ಜಿಲ್ಲೆಯ ಮಡ್ಡಿಕೇರಾ ಹಾಗೂ ಸಮೀಪದ ಮಂಡಲಗಳಿಗೆ ಜನಸಾಗರವೇ ಹರಿದುಬರುತ್ತಿದ್ದು, ವಜ್ರಗಳ ಹುಡುಕಾಟ ಶುರುವಾಗಿದೆ.

ಆಂಧ್ರಪ್ರದೇಶ ವಿಶೇಷವಾಗಿ ಅನಂತತಪುರ, ಕಡಪ, ಕರ್ನೂಲ್​, ಕೃಷ್ಣ, ಗುಂಟೂರು ಜಿಲ್ಲೆಗಳು ಭಾರತದ ವಜ್ರ ಸಂಪನ್ಮೂಲಗಳ ಶೇಕಡಾವಾರು ಪಾಲುಗಳನ್ನು ಹೊಂದಿದೆ.

ಮಳೆಗಾಲದ ಆರಂಭದಲ್ಲಿ ಮೊದಲ ಮಳೆಗೆ ಮಣ್ಣಿನ ಮೇಲ್ಪದರಗಳು ಕೊಚ್ಚಿಕೊಂಡು ಹೋದಾಗ ವಜ್ರಗಳು ಮೇಲ್ಮೈಗೆ ಬರುತ್ತವೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ರಾಯಲಸೀಮಾವು ವಜ್ರಗಳ ವ್ಯಾಪಾರಕ್ಕೆ ಪ್ರಸಿದ್ಧಿಯಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ