ದೆಹಲಿ: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಗೆ ಹೆರಿಗೆ ಮಾಡಿಸಿದ ಪ್ರಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಎಸ್.ಕೆ.ಭಂಡಾರಿ ಕೊವಿಡ್ 19 ಸೋಂಕಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳಿಂದಾಗಿ ನಿಧನರಾಗಿದ್ದಾರೆ. ಸಂಸದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಹುಟ್ಟುವಾಗ ಡಾ.ಎಸ್.ಕೆ.ಬಂಡಾರಿಯವರೇ ಚಿಕಿತ್ಸೆ ನೀಡಿದ್ದರು. ಅಲ್ಲದೇ, ಪ್ರಿಯಾಂಕಾ ಗಾಂಧಿಯವರ ಇಬ್ಬರು ಮಕ್ಕಳು ಹುಟ್ಟುವಾಗಲೂ ದಿವಂಗತ ಡಾ.ಎಸ್.ಕೆ.ಭಂಡಾರಿಯವರೇ ಚಿಕಿತ್ಸೆ ನೀಡಿದ್ದರು. ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಅವರ ನಿಧನಕ್ಕೆ ಪ್ರಿಯಾಂಕಾ ಗಾಂಧಿ ಶೋಕ ವ್ಯಕ್ತಪಡಿಸಿದ್ದಾರೆ.
ಎರಡು ವಾರಗಳ ಹಿಂದೆ ಹೃದಯ ಸಂಬಂಧಿ ಖಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಕೊವಿಡ್ ಸೋಂಕು ಪತ್ತೆಯಾಗಿತ್ತು. ಕೊವಿಡ್ ಲಸಿಕೆಯ ಎರಡೂ ಡೋಸ್ ಪಡೆದಿದ್ದ ಅವರು ಗುರುವಾರ ರಾತ್ರಿ 2 ಗಂಟೆಯ ಹೊತ್ತಿಗೆ ಅಸು ನೀಗಿದ್ದಾರೆ ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ಮುಖ್ಯಸ್ಥ ಡಾ.ಡಿ.ಎಸ್.ರಾಣಾ ತಿಳಿಸಿದ್ದಾರೆ.
ಅವರ ಪತಿ, 97 ವರ್ಷದ ನಿವೃತ್ತ ಐಎಎಸ್ ಅಧಿಕಾರಿ. ಸದ್ಯ ಅವರೂ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತ್ನಿಯ ನಿಧನದ ಸುದ್ದಿಯನ್ನು ಅವರಿಗೆ ತಿಳಿಸಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅಲ್ಲದೇ ಈ ಅಪರೂಪದ ಜೋಡಿಯ ಮಗಳೂ ಸಹ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Dr. S.K. Bhandari, Emeritus Consultant, Sir Ganga Ram Hospital, who delivered my brother, me, my son and my daughter passed away today. Even in her late seventies, she would drive early morning to the hospital herself. A leader to the end, she upheld every noble trait of… 1/2
— Priyanka Gandhi Vadra (@priyankagandhi) May 13, 2021
humanity. A woman I will always respect and admire, a friend I will always miss 2/2
— Priyanka Gandhi Vadra (@priyankagandhi) May 13, 2021
ಇದನ್ನೂ ಓದಿ: ಮೈಕ್ರೋ ರೈಟಿಂಗ್ ಕಲಾವಿದ ರಾಜೇಶ್ ವರ್ಣೇಕರ್ ನಿಧನ; ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್‌ಗೆ ಬಲಿ
ಮನೆಯ ಪಕ್ಕದ ಸಭಾಭವನವನ್ನೇ ಕೊವಿಡ್ ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ
9Famous gynaecologist died by Covid 19 who delivered Priyanka Gandhi Rahul Gandhi )
Published On - 2:45 pm, Fri, 14 May 21