Delhi Chalo | ರೈತ ಚಳವಳಿ ದುರ್ಬಳಕೆಗೆ ಅವಕಾಶ ನೀಡುವುದಿಲ್ಲ: ಪ್ರಧಾನಿ ಆರೋಪ ಅಲ್ಲಗಳೆದ ರೈತ ಒಕ್ಕೂಟಗಳು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 25, 2020 | 8:58 PM

ಪ್ರಧಾನಿ ನರೇಂದ್ರ ಮೋದಿಯವರ ‘ರೈತ ಚಳವಳಿಯನ್ನು ವಿಪಕ್ಷಗಳು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಮತ್ತು ‘ರೈತರ ದಾರಿ ತಪ್ಪಿಸುತ್ತಿವೆ’ ಎಂಬ ಆರೋಪವನ್ನು ರೈತ ನಾಯಕ ಅಭಿಮನ್ಯು ಕೋಹರ್ ತಳ್ಳಿಹಾಕಿದ್ದಾರೆ. ದೆಹಲಿ ಚಲೋ ಚಳವಳಿ ರಾಜಕೀಯ ರಹಿತವಾಗಿ ನಡೆಯುತ್ತಿದೆ. ಯಾವ ರಾಜಕೀಯ ಪಕ್ಷವನ್ನೂ ರೈತರ ಚಳವಳಿಯನ್ನು ದುರ್ಬಳಕೆ ಮಾಡಲು ಬಿಡುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.

Delhi Chalo | ರೈತ ಚಳವಳಿ ದುರ್ಬಳಕೆಗೆ ಅವಕಾಶ ನೀಡುವುದಿಲ್ಲ: ಪ್ರಧಾನಿ ಆರೋಪ ಅಲ್ಲಗಳೆದ ರೈತ ಒಕ್ಕೂಟಗಳು
ರೈತ ಪ್ರತಿಭಟನೆ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ರೈತ ಚಳವಳಿಯನ್ನು ವಿಪಕ್ಷಗಳು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಮತ್ತು ‘ರೈತರ ದಾರಿ ತಪ್ಪಿಸುತ್ತಿವೆ’ ಎಂಬ ಆರೋಪವನ್ನು ರೈತ ನಾಯಕ ಅಭಿಮನ್ಯು ಕೋಹರ್ ತಳ್ಳಿಹಾಕಿದ್ದಾರೆ. ದೆಹಲಿ ಚಲೋ ಚಳವಳಿ ರಾಜಕೀಯ ರಹಿತವಾಗಿ ನಡೆಯುತ್ತಿದೆ. ಯಾವ ರಾಜಕೀಯ ಪಕ್ಷವನ್ನೂ ರೈತರ ಚಳವಳಿಯನ್ನು ದುರ್ಬಳಕೆ ಮಾಡಲು ಬಿಡುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ನಿಮಿತ್ತ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 9 ಕೋಟಿ ರೈತರ ಖಾತೆಗೆ ಹಣ ಬಿಡುಗಡೆಗೊಳಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳು ರೈತರನ್ನು ದಾರಿ ತಪ್ಪಿಸುವ ಕಾರ್ಯದಲ್ಲಿ ನಿರತವಾಗಿವೆ. ದೆಹಲಿ ಚಲೋ ಚಳವಳಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಕಳೆದೊಂದು ತಿಂಗಳಿಂದಲೂ ಸರ್ಕಾರ ಚಳವಳಿಕಾರರ ಜೊತೆ ಮಾತುಕತೆ ನಡೆಸುತ್ತಿದೆ. ಆದರೆ, ರೈತ ನಾಯಕರು ಕೃಷಿ ತಿದ್ದುಪಡಿಗಿಂತ ಟೋಲ್ ಬೂತ್​ಗಳಲ್ಲಿ ಉಚಿತ ಸೇವೆ ಒದಗಿಸಲು, ಹಿಂಸಾಕೃತ್ಯಗಳಲ್ಲಿ ಬಂಧಿತರಾದವರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಪ್ರಧಾನಿ ಎಂದು ಆರೋಪಿಸಿದ್ದರು.

ಈ ಆರೋಪವನ್ನು ನಿರಾಕರಿಸಿರುವ ಅಭಿಮನ್ಯು ಕೋಹರ್, ನಮ್ಮ ಚಳವಳಿಯಲ್ಲಿ ರಾಜಕೀಯದ ಲವಲೇಶವೂ ಸುಳಿಯಲು ಅವಕಾಶ ನೀಡಿಲ್ಲ. ರಾಜಕಾರಣಿಗಳು ಭಾಗವಹಿಸುವುದನ್ನು ನಿಷೇಧಿಸಿದ್ದೇವೆ ಎಂದು ತಿಳಿಸಿದರು.ಕೇಂದ್ರ ಸರ್ಕಾರ ಹೇಳುವಂತೆ ಕನಿಷ್ಠ ಬೆಂಬಲ ಬೆಲೆ ಮುಂದುವರೆಯಲಿದೆ. ಆದರೆ, ಈ ಕುರಿತು ಸರ್ಕಾರ ಲಿಖಿತ ರೂಪದಲ್ಲಿ ಖಚಿತತೆ ನೀಡುತ್ತಿಲ್ಲ ಎಂದು ಪ್ರಶ್ನಿಸುತ್ತಾರೆ 40 ರೈತ ನಾಯಕರ ಒಕ್ಕೂಟವಾದ ಸಂಕ್ಯುತ್ ಕಿಸಾನ್ ಮೋರ್ಚಾದ ಶಿವ್ ಕುಮಾರ್ ಕಕ್ಕಾ. ಆಲ್ ಇಂಡಿಯಾ ಕಿಸಾನ್ ಸಂಘರ್ಷ್ ಕೋರ್ಡಿನೇಷನ್ ಕಮಿಟಿಯ ಕಾರ್ಯದರ್ಶಿ ಅವಿಕ್ ಸಹಾರ ಪ್ರಶ್ನೆಯೂ ಇದೇ ಆಗಿದ್ದು, ಕೆಲ ರೈತ ಸಂಘಟನೆಗಳು ನೂತನ ಕೃಷಿ ಕಾಯ್ದೆಗಳನ್ನು ಬೆಂಬಲಿಸುತ್ತಿವೆ ಎಂಬುದು ಸಹ ಸತ್ಯಕ್ಕೆ ದೂರವಾದದ್ದು ಹೇಳಿದ್ದಾರೆ.