Delhi Chalo: ಕೇಂದ್ರ ಸಚಿವರ ಜೊತೆ ರೈತ ನಾಯಕರ 8ನೇ ಸುತ್ತಿನ ಸಭೆ ಆರಂಭ

| Updated By: ರಾಜೇಶ್ ದುಗ್ಗುಮನೆ

Updated on: Jan 08, 2021 | 3:49 PM

ಕೇಂದ್ರ ಸರ್ಕಾರ ಮತ್ತು ರೈತ ನಾಯಕರ 8ನೇ ಸುತ್ತಿನ ಸಭೆಯಲ್ಲಾದರೂ ಒಮ್ಮತದ ತೀರ್ಮಾನ ಮೂಡುತ್ತದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.

Delhi Chalo: ಕೇಂದ್ರ ಸಚಿವರ ಜೊತೆ ರೈತ ನಾಯಕರ 8ನೇ ಸುತ್ತಿನ ಸಭೆ ಆರಂಭ
ರೈತ ನಾಯಕ ರಾಕೇಶ್ ಟಿಕಾಯತ್ (ಸಂಗ್ರಹ ಚಿತ್ರ)
Follow us on

ದೆಹಲಿ: ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಜೊತೆ 41 ರೈತ ನಾಯಕರ 8ನೇ ಸುತ್ತಿನ ಸಭೆ ದೆಹಲಿಯ ವಿಜ್ಞಾನ ಭವನದಲ್ಲಿ ಆರಂಭವಾಗಿದೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ಹನ್ನಾನ್ ಮೊಲ್ಲಾಹ್,‘ಈಗಾಗಲೇ ಕೃಷಿ ಸಚಿವರು ಕೃಷಿ ಕಾಯ್ದೆಗಳ ರದ್ದತಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವೂ ಸಹ ತಿದ್ದುಪಡಿಗೆ ಸಮ್ಮತಿ ಸೂಚಿಸಿಲ್ಲ. ಹೀಗಾಗಿ, ಇಂದಿನ ಸಭೆಯಲ್ಲಿ ಒಮ್ಮತ ಮೂಡುವ ಕುರಿತು ಸ್ಪಷ್ಟತೆಯಿಲ್ಲ. ಆದರೂ, ಆಶಾಭಾವನೆ ಇಟ್ಟುಕೊಂಡಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್​ನ ಸಂಸದರು ದೆಹಲಿಯ ಜಂತರ್ ಮಂತರ್​ನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಇತ್ತೀಚಿಗಷ್ಟೇ ರಾಷ್ಟ್ರಪತಿ ರಾಮನಾಥ್ ಕೋವಿಂದ್​ರನ್ನು ಭೇಟಿಯಾಗಲು ಹೊರಟಿದ್ದ ಕಾಂಗ್ರೆಸ್ ನಿಯೋಗಕ್ಕೆ ದೆಹಲಿ ಪೊಲೀಸರು ಅಡ್ಡಿಪಡಿಸಿದ್ದರು. ಅಲ್ಲದೇ,  ಪ್ರಿಯಾಂಕಾ ಗಾಂಧಿ ಯವರನ್ನು ಬಂಧಿಸಿ ಕೆಲ ಘಂಟೆಯ ತರುವಾಯ ಬಿಡುಗಡೆಗೊಳಿಸಿದ್ದರು.

ಇಂದು 8ನೇ ಸುತ್ತಿನ ಸಭೆ: ದೆಹಲಿ ಚಲೋ ಹಿಂದೆ ಬೇರಾವುದೋ ಉದ್ದೇಶವಿದೆ ಎಂದ ಪಂಜಾಬ್ ಬಿಜೆಪಿ ನಾಯಕ