ವಿಷಪೂರಿತ ಮದ್ಯ ಸೇವನೆ: ನಾಲ್ವರ ಸಾವು, 15 ಜನರು ಅಸ್ವಸ್ಥ
ವಿಷಪೂರಿತ ಮದ್ಯ ಸೇವಿಸಿ ನಾಲ್ವರು ಮೃತಪಟ್ಟಿದ್ದು 15 ಜನರು ಅಸ್ವಸ್ಥಗೊಂಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.
ಲಕ್ನೋ: ವಿಷಪೂರಿತ ಮದ್ಯ ಸೇವಿಸಿ ನಾಲ್ವರು ಮೃತಪಟ್ಟಿದ್ದು 15 ಜನರು ಅಸ್ವಸ್ಥಗೊಂಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಘಟನೆಯ ನಂತರ, ಕರ್ತವ್ಯನಿರ್ಲಕ್ಷ್ಯ ಆರೋಪದಡಿ ಸ್ಟೇಷನ್ ಇನ್‌ಚಾರ್ಜ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಫಟನೆ ಸಂಬಂಧಿಸಿದ ಅಪರಾಧಿ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಆದೇಶಿಸಿದ್ದಾರೆ. ಹಾಗೂ ಎಸ್‌ಎಸ್‌ಪಿ ಬುಲಂದ್‌ಶಹರ್ “ಸ್ಟೇಷನ್ ಇನ್‌ಚಾರ್ಜ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ”ಎಂದು ತಿಳಿಸಿದ್ದಾರೆ.
ಸಿಕಂದರಾಬಾದ್ ಪ್ರದೇಶದ ಜೀತ್‌ಗಡಿ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು ವರದಿಗಳ ಪ್ರಕಾರ, ಸಂತ್ರಸ್ಥರು ಮದ್ಯ ಸೇವಿಸಿ ತಮ್ಮ ತಮ್ಮ ಮನೆಗಳಿಗೆ ಹೋಗಿದ್ದರು. ಎರಡು ಮೂರು ಗಂಟೆಗಳ ನಂತರ, ಅವರೆಲ್ಲ ವಾಂತಿ ಮಾಡಲು ಪ್ರಾರಂಭಿಸಿದ್ದು ಮತ್ತು ಅವರ ಸ್ಥಿತಿ ಹದಗೆಟ್ಟಿದೆ. ಅದರಲ್ಲಿ ನಾಲ್ವರು ಮೃತಪಟ್ಟಿದ್ದು 15 ಜನರು ಅಸ್ವಸ್ಥಗೊಂಡಿದ್ದಾರೆ.
Published On - 12:05 pm, Fri, 8 January 21