Delhi Chalo: ಕೇಂದ್ರ ಸರ್ಕಾರಕ್ಕೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ ಪಂಜಾಬ್ ರೈತರು
ಪಟ್ಟು ಬಿಡದೆ ಪ್ರತಿಭಟನೆ ಮುಂದುವರೆಸಿರುವ ಪಂಜಾಬ್ ರೈತರು ಡಿಸೆಂಬರ್ 14ರಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ವಿಧಿಸಿದ್ದಾರೆ. ಇತ್ತ ಮೋದಿಯನ್ನು ವಿರೋಧಿಸುವವರು ರಾಷ್ಟ್ರ ವಿರೋಧಿಗಳಲ್ಲ ಎಂದು ಕಾಂಗ್ರೆಸ್ ಹರಿಹಾಯ್ದಿದೆ.
ದೆಹಲಿ: ಪಟ್ಟು ಬಿಡದೆ ಪ್ರತಿಭಟನೆ ಮುಂದುವರೆಸಿರುವ ಪಂಜಾಬ್ ರೈತರು ಡಿಸೆಂಬರ್ 14ರಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಜೊತೆ ಇನ್ನೊಂದು ಸುತ್ತಿನ ಸಭೆ ನಡೆಸಿದ ರೈತ ಒಕ್ಕೂಟಗಳ ನಾಯಕರು ಈ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ನಾಳೆ ರಾಜಸ್ಥಾನದ ಶಹಜಹಾನ್ಪುರದಿಂದ ಸಾವಿರಾರು ರೈತರು ಮೆರವಣಿಗೆಗಳಲ್ಲಿ ರಾಷ್ಟ್ರ ರಾಜಧಾನಿಯತ್ತ ಹೆಜ್ಜೆಹಾಕಲಿದ್ದಾರೆ. ಟ್ರ್ಯಾಕ್ಟರ್, ಟ್ರಾಲಿಗಳಲ್ಲಿ ಹೊರಟಿರುವ ರೈತರು, ದೆಹಲಿ-ಜೈಪುರ ಮುಖ್ಯ ಹೆದ್ದಾರಿ ಬಂದ್ ಮಾಡುವ ಸಾಧ್ಯತೆಯಿದೆ.
ಮೋದಿ ವಿರೋಧಿಗಳು ರಾಷ್ಟ್ರವಿರೋಧಿಗಳಲ್ಲ ಎಂದ ಕಾಂಗ್ರೆಸ್ ಮೋದಿ ವಿರೋಧಿಗಳನ್ನು ಮಾವೋವಾದಿ, ರಾಷ್ಟ್ರವಿರೋಧಿಗಳೆಂದು ಬಿಂಬಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮತ್ತೊಮ್ಮೆ ದೂರಿದೆ. ಮಾವೋವಾದಿ, ಎಡಪಂಥೀಯ ಮತ್ತು ಸಮಾಜ ಘಾತುಕ ಶಕ್ತಿಗಳು ದೆಹಲಿ ಚಲೋವನ್ನು ಬಳಸಿಕೊಳ್ಳುತ್ತಿವೆ ಎಂಬ ನರೇಂದ್ರ ಸಿಂಗ್ ತೋಮರ್ ಹೇಳಿಕೆಗೆ ಈ ಮೂಲಕ ಕಾಂಗ್ರೆಸ್ ತಿರುಗೇಟು ನೀಡಿದೆ. .
ಕೃಷಿ ಸಚಿವರನ್ನು ಭೇಟಿಯಾದ ಹರಿಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಕೇಂದ್ರ ಕೃಷಿ ಸಚಿವರನ್ನು ಹರಿಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಭೇಟಿಯಾಗಿ ಚರ್ಚಿಸಿದ್ದಾರೆ. 20ರಿಂದ 24 ಘಂಟೆಗಳಲ್ಲಿ ಒಂದು ನಿರ್ಧಾರ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಕೃಷಿ ಕಾಯ್ದೆ ಮಂಡನೆಯಾಗುವಾಗ ನಾನು ಸಂಸತ್ತಿನಲ್ಲಿರಲಿಲ್ಲ: ಹನುಮಾನ್ ಬೇನಿವಾಲ್ ನೂತನ ಕೃಷಿ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ ಎನ್ಡಿಎ ಅಂಗಪಕ್ಷ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿಯ ಮುಖಂಡ ಹನುಮಾನ್ ಬೇನಿವಾಲ್ ಮತ್ತೊಮ್ಮೆ ಗುಡುಗಿದ್ದಾರೆ. ಕೃಷಿ ಕಾಯ್ದೆ ಮಂಡನೆಯಾಗುವಾಗ ನಾನು ಲೋಕಸಭೆಯಲ್ಲಿರಲಿಲ್ಲ. ಹಾಗೇನಾದರೂ ಇದ್ದರೆ, ಅಂದೇ, ಶಿರೋಮಣಿ ಅಕಾಲಿದಳದಂತೆಯೇ ಎನ್ಡಿಎಯಿಂದ ಹೊರಬರುತ್ತಿದ್ದೆ ಎಂದು ಗುಡುಗಿದ್ದಾರೆ.
Published On - 7:42 pm, Sat, 12 December 20