ಹರಿಯಾಣ ಸರ್ಕಾರ ನಡೆಸುವ RD ಧ್ವಜಾರೋಹಣಕ್ಕೆ.. ಟ್ರ್ಯಾಕ್ಟರ್ ಪರೇಡ್​ ಭಯ

ಸಾವಿರಾರು ಟ್ರ್ಯಾಕ್ಟರ್​ಗಳೊಂದಿಗೆ ದೆಹಲಿಯಲ್ಲಿ ಟ್ರ್ಯಾಕ್ಟರ್​ ಪರೇಡ್ ನಡೆಸುವುದರೊಂದಿಗೆ, ಹರಿಯಾಣದ ಪ್ರಮುಖ ಸ್ಥಳಗಳಲ್ಲೂ ಮೆರವಣಿಗೆ ನಡೆಸಲು ರೈತರು ತಯಾರಿ ನಡೆಸುತ್ತಿದ್ದಾರೆ. ರೈತರ ಜತೆಗೆ ಕಾಂಗ್ರೆಸ್ ಮತ್ತು ಇಂಡಿಯನ್ ನ್ಯಾಷನಲ್ ಲೋಕದಳ್ ಪಕ್ಷಗಳು ಸಹ ವಿವಿಧೆಡೆ ಮೆರವಣಿಗೆ ನಡೆಸಲಿವೆ.

ಹರಿಯಾಣ ಸರ್ಕಾರ ನಡೆಸುವ RD ಧ್ವಜಾರೋಹಣಕ್ಕೆ.. ಟ್ರ್ಯಾಕ್ಟರ್ ಪರೇಡ್​ ಭಯ
ಟ್ರ್ಯಾಕ್ಟರ್ ಏರಿ ಕುಳಿತಿರುವ ಮಹಿಳೆಯರು (ಸಾಂಕೇತಿಕ ಚಿತ್ರ)
Updated By: ರಶ್ಮಿ ಕಲ್ಲಕಟ್ಟ

Updated on: Jan 15, 2021 | 3:56 PM

ದೆಹಲಿ: ಗಣರಾಜ್ಯೋತ್ಸವದಂದು ಧ್ವಜಾರೋಹಣ ನಡೆಸಲು ಹರಿಯಾಣದ ಮುಖ್ಯಮಂತ್ರಿ ಮನೋಹರ್​ಲಾಲ್ ಖಟ್ಟರ್ ಮತ್ತು ಉಪ ಮುಖ್ಯಮಂತ್ರಿ ದುಷ್ಯಂತ್ ಚೌತಾಲಾಗೆ ಅವಕಾಶ ನೀಡಬಾರದು ಎಂದು ವಿವಿಧ ರೈತ ಸಂಘಗಳು ಮನವಿ ಮಾಡಿವೆ. ಈ ಬಾರಿಯ 72ನೇ ಗಣರಾಜ್ಯೋತ್ಸವದಂದು ಹರಿಯಾಣ ಸರ್ಕಾರದ ಸಚಿವರು ನಡೆಸಲಿರುವ ಧ್ವಜಾರೋಹಣಕ್ಕೆ ಭಂಗ ತರುವ ಸಾಧ್ಯತೆಗಳು ದಟ್ಟವಾಗಿದೆ.

ಸಾವಿರಾರು ಟ್ರ್ಯಾಕ್ಟರ್​ಗಳೊಂದಿಗೆ ದೆಹಲಿಯಲ್ಲಿ ಟ್ರ್ಯಾಕ್ಟರ್​ ಪರೇಡ್ ನಡೆಸುವುದರೊಂದಿಗೆ, ಹರಿಯಾಣದ ಪ್ರಮುಖ ಸ್ಥಳಗಳಲ್ಲೂ ಮೆರವಣಿಗೆ ನಡೆಸಲು ರೈತರು ತಯಾರಿ ನಡೆಸುತ್ತಿದ್ದಾರೆ. ರೈತರ ಜತೆಗೆ ಕಾಂಗ್ರೆಸ್ ಮತ್ತು ಇಂಡಿಯನ್ ನ್ಯಾಷನಲ್ ಲೋಕದಳ ಪಕ್ಷಗಳು ಸಹ ವಿವಿಧೆಡೆ ಮೆರವಣಿಗೆ ನಡೆಸಲಿವೆ.

ಗಣರಾಜ್ಯೋತ್ಸವದಂದು ಧ್ವಜಾರೋಹಣಕ್ಕೆ ಯಾವುದೇ ಅಡ್ಡಿಯಾಗದಂತೆ ತಡೆಯಲು ಪೊಲೀಸರು ಯೋಜನೆ ರೂಪಿಸಿದ್ದಾರೆ. ಹರಿಯಾಣ ಸರ್ಕಾರ ಸಚಿವರು ನಡೆಸಲಿರುವ ಧ್ವಜಾರೋಹಣಕ್ಕೆ ಭಂಗ ತರಲು ರೈತ ಹೋರಾಟಗಾರರು ಯೋಜನೆ ರೂಪಿಸಿದ ಕುರಿತು ಪೊಲೀಸರಿಗೆ ಮಾಹಿತಿ ದೊರೆತಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ತಡೆಯಲು ಎಲ್ಲ ರೀತಿಯ ಮುಂಜಾಗ್ರತೆ  ಕ್ರಮಗಳನ್ನು ರೂಪಿಸುತ್ತಿದ್ದಾರೆ.

ಕಾಂಗ್ರೆಸ್​ನಿಂದಲೂ ಮೆರವಣಿಗೆ
ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್​ ಮುಖಂಡರು ಕಿಸಾನ್ ಅಧಿಕಾರ್ ದಿವಸ್​ ಪ್ರಯುಕ್ತ ದೆಹಲಿ ಮತ್ತು ಉತ್ತರ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಲಿದ್ದಾರೆ.

ಟ್ರ್ಯಾಕ್ಟರ್​ ಪೆರೇಡ್​ಗೆ​ ಹರಿಯಾಣ ಯುವತಿಯರ ಸಿದ್ಧತೆ; ಗಣರಾಜ್ಯೋತ್ಸವದಂದು ಇವರೂ ದೆಹಲಿಗೆ ಧಾವಿಸಲಿದ್ದಾರೆ

Published On - 11:37 am, Fri, 15 January 21