ದೆಹಲಿ: ತಮ್ಮ ಟ್ರ್ಯಾಕ್ಟರ್-ಟ್ರಾಲಿಗಳ ಮೇಲೆ ಹಾಡು, ನೃತ್ಯ ಮತ್ತು ಹರ್ಷೋದ್ಗಾರದೊಂದಿಗೆ ರೈತರು ಶನಿವಾರ ತಮ್ಮ ಟೆಂಟ್‌ಗಳು ಕಿತ್ತುಹಾಕಿದ ನಂತರ ಕೃಷಿ ಕಾನೂನುಗಳ (Farm Laws) ವಿರುದ್ಧದ ಒಂದು ವರ್ಷದ ಪ್ರತಿಭಟನೆಯನ್ನು (Farmers Protest) ಕೊನೆಗೊಳಿಸಿ ದೆಹಲಿಯ ಗಡಿಯಿಂದ ಮನೆಗೆ ತಮ್ಮ ಪ್ರಯಾಣವನ್ನು(fateh march) ಪ್ರಾರಂಭಿಸಿದರು. ನೆರೆಯ ರಾಜ್ಯಗಳಲ್ಲಿ ಸಿಹಿತಿಂಡಿ, ಹೂಮಾಲೆ, ಭಂಗ್ರಾ, ಲಂಗರ್‌ಗಳ ಮೂಲಕ ಅದ್ದೂರಿ ಸ್ವಾಗತ ಕೋರಲಾಯಿತು. ರೈತರು ಭಗವಂತನಿಗೆ ಕೃತಜ್ಞತೆ ಸಲ್ಲಿಸಲು ಪ್ರಾರ್ಥನೆ ಮತ್ತು ಹವನಗಳನ್ನು ನಡೆಸಿದ್ದರು. ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದ ಕಡೆಗೆ ಸಾಗುವ ಟ್ರ್ಯಾಕ್ಟರ್‌ಗಳು ಬಣ್ಣಬಣ್ಣದ ಹೂವು ಮತ್ತು ದೀಪಗಳಿಂದ ಅಲಂಕರಿಸಲ್ಪಟ್ಟಿದ್ದು ಗೆಲುವಿನ ಹಾಡು ಮೊಳಗಿದವು. ಜನಪ್ರಿಯ ರೈತ ಹಾಡುಗಳನ್ನು ನುಡಿಸಿ ಟ್ರ್ಯಾಕ್ಟರ್‌ಗಳಲ್ಲಿ ಡಿಜೆ, ಸ್ಪೀಕರ್‌ಗಳನ್ನು ಇರಿಸಲಾಗಿತ್ತು. ಭಾಂಗ್ರಾ, ಧೋಲ್ ಮತ್ತು ವಿವಿಧ ರೀತಿಯ ಲಾಂಗರ್‌ಗಳನ್ನು ದಾರಿಯುದ್ದಕ್ಕೂ ಕಾಣಬಹುದಾಗಿತ್ತು. ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ, ರೈತರು ತಮ್ಮ ರಾಜ್ಯಗಳಿಗೆ ತೆರಳುವ ಮೊದಲು ಬಣ್ಣ ಎರಚಿ ಸಂಭ್ರಮ ಪಟ್ಟರು.
ಡಿಸೆಂಬರ್ 15 ರೊಳಗೆ ಎಲ್ಲಾ ರೈತರು ಪ್ರತಿಭಟನಾ ಸ್ಥಳಗಳನ್ನು ತೊರೆಯಲಿದ್ದಾರೆ. ಎಸ್‌ಕೆಎಂನ ಮುಂದಿನ ಸಭೆ ಜನವರಿ 15 ರಂದು ನಡೆಯಲಿದೆ. ಇಂದು, ಆ ಪ್ರದೇಶಗಳಲ್ಲಿನ ಪ್ರತಿಭಟನೆಯನ್ನು ಕೊನೆಗೊಳಿಸಲು ನಾನು ಹರಿಯಾಣ, ಚಂಡೀಗಢ ಮತ್ತು ಅಮೃತಸರದಲ್ಲಿ 3 ದಿನಗಳ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇವೆ ಎಂದು ಘಾಜಿಪುರ ಗಡಿಯಲ್ಲಿ ಮಾತನಾಡಿದ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
#WATCH | Delhi: Farmers at Ghazipur Border dance in celebration after suspending their year-long protest against the 3 farm laws & other related issues pic.twitter.com/MJBnq00Q3G
— ANI (@ANI) December 11, 2021
ಇದು ಇಡೀ ದೇಶವನ್ನು ಒಟ್ಟುಗೂಡಿಸಲು ಕೃಷಿ ಕಾನೂನುಗಳ ವಿರುದ್ಧದ ಆಂದೋಲನವಾಗಿದೆ. ಈ ಒಂದು ವರ್ಷದಲ್ಲಿ ನಾವು ಒಬ್ಬರಿಗೊಬ್ಬರು ಹತ್ತಿರವಾದೆವು. ನಮ್ಮ ಧರ್ಮ, ಜಾತಿ, ವರ್ಣ, ಪಂಥವನ್ನು ಲೆಕ್ಕಿಸದೆ ರೈತ ಸಮುದಾಯ ಎಂದು ಕರೆಯಲ್ಪಟ್ಟಿದ್ದೇವೆ. ಪ್ರಧಾನಿ ಕೂಡ ನಮ್ಮ ಸಹೋದರತ್ವದ ಶಕ್ತಿಯ ಮುಂದೆ ತಲೆಬಾಗಬೇಕಾಯಿತು ಎಂದು ಹರ್ಯಾಣದ ಫತೇಹಾಬಾದ್ ಜಿಲ್ಲೆಯ ಫುಲನ್ ಗ್ರಾಮದ ರೈತ ಜಗೀಶ್ ಫುಲನ್ ಹೇಳಿದ್ದಾರೆ.
ಪಂಜಾಬ್‌ಗೆ ಪ್ರವೇಶಿಸಲು ಅಂಬಾಲಾದ ಶಂಭು ಗಡಿಯನ್ನು ದಾಟಿ ರೈತರ ಮೇಲೆ ಹೂವಿನ ದಳಗಳನ್ನು ಸುರಿಸುವುದಕ್ಕಾಗಿ ಖಾಲ್ಸಾ ವಿಮಾನವನ್ನು ಬಾಡಿಗೆಗೆ ಪಡೆದಿದ್ದರೆ, ಹರ್ಯಾಣದ ಫತೇಹಾಬಾದ್ ಜಿಲ್ಲೆಯ ಮೂಲಕ ಬರುವ ರೈತರಿಗೆ ಮಾನ್ಸಾ ಜಿಲ್ಲೆಯ ಬೋಹಾದಲ್ಲಿ ಜಗ್ಸೀರ್ ಜೀದಾ ಅವರ ಪ್ರದರ್ಶನದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರೈತರು ಭಾನುವಾರ ಬೆಳಿಗ್ಗೆ ಬೋಹಾದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದು ಮಧ್ಯಾಹ್ನದ ವೇಳೆಗೆ ತಮ್ಮ ಹಳ್ಳಿಗಳನ್ನು ತಲುಪುತ್ತಾರೆ. ‘ಬೋಲೆ ಸೋ ನಿಹಾಲ್, ಸತ್ ಶ್ರೀ ಅಕಾಲ್’ ಎಂಬ ಘೋಷಗಳು ಕೂಗುತ್ತಿರುವ ಟ್ರಾಕ್ಟರ್ಗಳು , ರಾಷ್ಟ್ರಧ್ವಜ ಮತ್ತು ರೈತ ಸಂಘಟನೆಗಳ ಧ್ವಜಗಳನ್ನು ಹೊತ್ತ ಟ್ರ್ಯಾಕ್ಟರ್‌ಗಳು ವಿಜಯದ ಪಂಜಾಬಿ ಹಾಡುಗಳನ್ನು ನುಡಿಸುತ್ತಿದ್ದವು. ವಿವಿಧ ಟೋಲ್ ಪ್ಲಾಜಾಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇತರ ಸ್ಥಳಗಳಲ್ಲಿ ರೈತರನ್ನು ಸ್ವಾಗತಿಸಲು ಸಿದ್ಧತೆಗಳನ್ನು ಮಾಡಲಾಗಿದೆ. ಯುವಕರು ಮತ್ತು ಮಹಿಳೆಯರು ಪಂಜಾಬ್‌ನ ಜಾನಪದ ನೃತ್ಯ ‘ಭಾಂಗ್ರಾ’ ‘ಧೋಲ್’ ಪ್ರದರ್ಶಿಸಿದರು. ಪಂಜಾಬ್ ಸಮೀಪದ ಖಾನೌರಿಯಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಏತನ್ಮಧ್ಯೆ ಶನಿವಾರ ಅಪಘಾತದಲ್ಲಿ ಪಂಜಾಬ್‌ನ ಇಬ್ಬರು ರೈತರು ಸಾವನ್ನಪ್ಪಿದ ನಂತರ, ರಾತ್ರಿ ಸಮಯದಲ್ಲಿ ವಾಹನ ಚಲಾಯಿಸದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ. “ಕೆಲವು ರೈತರು ರೈಲುಗಳ ಮೂಲಕ ಬಂದರು ಮತ್ತು ಕೆಲವರು ಕಾರುಗಳ ಮೂಲಕ ತಮ್ಮ ಮನೆಗಳನ್ನು ತಲುಪಿದರು. ಟ್ರಾಲಿಗಳ ಮೂಲಕ ಬಂದ ಉಳಿದವರು ಹರ್ಯಾಣವನ್ನು ದಾಟಿದ ಕೂಡಲೇ ಪಂಜಾಬ್ ಗಡಿಗಳಲ್ಲಿ ರಾತ್ರಿ ತಂಗಿದ್ದರು, ”ಎಂದು ಬೋಹಾ ಧಾನ್ಯ ಮಾರುಕಟ್ಟೆಯಲ್ಲಿದ್ದ ಇಂಕ್ಲಾಬಿ ಮಂಚ್ ಪಂಜಾಬ್‌ನ ನಾರಿಯನ್ ದತ್ ಹೇಳಿದರು ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಬಿಕೆಯು ಉಗ್ರಾಹಣದ ಮೊದಲ ಜಾಥಾ ಬಟಿಂಡಾ ಜಿಲ್ಲೆಯ ಕಡೆಗೆ ದಾಟಲು ಶನಿವಾರ ಬೆಳಗ್ಗೆ 11ಗಂಟೆ ಸುಮಾರಿಗೆ ದಬ್ವಾಲಿ ತಲುಪಿತು. 20 ಜನರ ಮೊದಲ ಜಾಥಾದ ಭಾಗವಾಗಿದ್ದ ಗುರ್ಪಾಲ್ ಸಿಂಗ್ ಸಿಂಘೆವಾಲಾ, “ನಾವು ಹೊರಡುವಾಗ ಹಲವಾರು ದೆಹಲಿ ನಿವಾಸಿಗಳು ನಮ್ಮನ್ನು ಭೇಟಿ ಮಾಡಲು ಬಂದರು. ನಿವೃತ್ತ ಸೈನಿಕರೊಬ್ಬರು ಈ ಮೋರ್ಚಾದ ನೆನಪಿಗಾಗಿ ನಮ್ಮ ಗುಡಿಸಲುಗಳಿಂದ ಇಟ್ಟಿಗೆಯನ್ನು ತೆಗೆದುಕೊಂಡರು. ಅನೇಕ ಹರಿಯಾಣ ನಿವಾಸಿಗಳು ಸೈಟ್‌ನಿಂದ ಇಟ್ಟಿಗೆಗಳಿಂದ ಪಡೆದರು ಎಂದಿದ್ದಾರೆ.
ನಾವು ಎಲ್ಲವನ್ನೂ ಮರಳಿ ತರಲು ಸಾಧ್ಯವಿಲ್ಲ ಎಂದು ಗುರುದೀಪ್ ಸಿಂಗ್ ರಾಂಪುರ ಹೇಳಿದರು. “ನಾವು ಕ್ವಿಲ್ಟ್‌ಗಳು, ಹಾಸಿಗೆಗಳು ಮತ್ತು ಬಟ್ಟೆಗಳನ್ನು ಕೊಳೆಗೇರಿ ನಿವಾಸಿಗಳಿಗೆ ನೀಡಿದ್ದೇವೆ. ಬಿದಿರಿನಿಂದ ಮಾಡಿದ ತಾತ್ಕಾಲಿಕ ವಸತಿಗಳನ್ನು ಹಾಗೆಯೇ ಬಿಡಲಾಗಿದೆ ಇದರಿಂದ ಹತ್ತಿರದ ಕಾರ್ಮಿಕರು ಯಾವುದಾದರೂ ಉದ್ದೇಶಕ್ಕೆ ಆ ವಸ್ತುಗಳನ್ನು ಬಳಸಬಹುದು”ಎಂದು ಅವರು ಹೇಳಿದರು.
ಹಿಸಾರ್, ಹಂಸಿ ಮತ್ತು ರಾಟಿಯಾದಲ್ಲಿ ರೈತರನ್ನು ಜಿಲೇಬಿ, ಲಾಡೂಸ್, ಬರ್ಫಿ, ಪಕೋಡಾ, ಖೀರ್, ಹಲ್ವಾ, ಸಿಹಿ ಅನ್ನ, ತರಕಾರಿ ಪುಲಾವ್, ಟೀ, ಕಾಫಿ ಇತ್ಯಾದಿಗಳೊಂದಿಗೆ ಸ್ವಾಗತಿಸಲಾಯಿತು.
ಹರ್ಯಾಣದ ರೈತ ಜಗದೀಶ್, “ನಾವು ಪಂಜಾಬ್‌ನ ರೈತರಿಂದ ಕಳೆದ ಒಂದು ವರ್ಷದಲ್ಲಿ ಚೆನ್ನಾಗಿ ಕಲಿತದ್ದು ಲಂಗರ್‌ಗಳನ್ನು ಸಂಘಟಿಸುವ ಕಲೆ. ಹರಿಯಾಣದಲ್ಲಿ ಲಂಗರ್‌ಗಳ ಬಗ್ಗೆ ನಮಗೆ ತಿಳಿದಿದೆ ಆದರೆ ಇದು ಸಾಮಾನ್ಯ ವಿಷಯವಲ್ಲ ಎಂದಿದ್ದಾರೆ. ಹರ್ಯಾಣದ ಕಿಸಾನ್ ಸಂಗ್ರಹ ಸಮಿತಿಯು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿತ್ತು. ಪಂಜಾಬ್‌ನ ರೈತ ಸಂಘದ ಮುಖಂಡರನ್ನು ಸಿರೋಪಾ, ಶಾಲುಗಳು ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಬಿಕೆಯು ದಕೌಂಡಾದ ಅಧ್ಯಕ್ಷ ಬೂಟಾ ಸಿಂಗ್ ಬುರ್ಜ್‌ಗಿಲ್ ಮತ್ತು ಹಿರಿಯ ಉಪಾಧ್ಯಕ್ಷ ಮಂಜಿತ್ ಸಿಂಗ್ ಧನೆರ್ ಅವರನ್ನು ಫತೇಹಾಬಾದ್‌ನಲ್ಲಿ ಸನ್ಮಾನಿಸಲಾಯಿತು. “ಅನೇಕ ರೈತರು ಸೋನಿಪತ್ ಮತ್ತು ಬಹದ್ದೂರ್‌ಗಢದಿಂದ ಫಿರೋಜ್‌ಪುರ, ಮಾನ್ಸಾ, ಬಟಿಂಡಾ ಕಡೆಗೆ ರೈಲುಗಳನ್ನು ಹತ್ತಿದರು. ಆದ್ದರಿಂದ ಅವರು ಬೇಗನೆ ತಲುಪಿದರು ಮತ್ತು ತಮ್ಮ ಹಳ್ಳಿಗಳಿಗೆ ಹೋದರು, ಆದರೆ ಟ್ರ್ಯಾಕ್ಟರ್‌ಗಳ ಮೂಲಕ ಬರುವವರು ಭಾನುವಾರ ಮಧ್ಯಾಹ್ನ ಹಳ್ಳಿಗಳಿಗೆ ಬರುತ್ತಾರೆ ಎಂದು ಬಿಕೆಯು ದಕೌಂಡಾದ ಅಧ್ಯಕ್ಷ ಹರ್ನೆಕ್ ಸಿಂಗ್ ಮೆಹ್ಮಾ ಹೇಳಿದರು.
ಇದನ್ನೂ ಓದಿ: Farmers Protest: ಇಂದು ಸಂಜೆಯೊಳಗೆ ಗಡಿ ಬಿಟ್ಟು ಹೊರಡುವ ರೈತರು; ವಾಪಸ್ ಆಗುವುದಕ್ಕೂ ಮೊದಲು ವಿಜಯ ದಿವಸ್ ಆಚರಣೆ
Published On - 10:27 am, Sun, 12 December 21