AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Farmer’s Protest: ಹಿಸಾರ್‌ನಲ್ಲಿ ರೈತ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ; ಹಲವರ ಬಂಧನ

ಪಂಜಾಬ್-ಹರ್ಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ಬೆಂಬಲಿಸಿ ರೈತರು ಕಳೆದ ಐದು ದಿನಗಳಿಂದ ಖೇಡಿ ಚೋಪ್ಟಾದಲ್ಲಿ ಧರಣಿ ಕುಳಿತಿದ್ದರು.ಹರ್ಯಾಣ ಪೊಲೀಸರು ಧರಣಿ ನಿರತ ರೈತರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಬಳಸಿದ್ದು, ರೈತ ಮುಖಂಡ ಸುರೇಶ್ ಕೋತ್ ಸೇರಿದಂತೆ ಹಲವಾರು ರೈತರನ್ನು ಬಂಧಿಸಲಾಗಿದೆ.ಪಂಜಾಬ್‌ನ ಖಾನೌರಿ ಗಡಿಯತ್ತ ತೆರಳಲು ಯೋಚಿಸಿದ್ದ ರೈತರನ್ನು ಪೊಲೀಸ್ ತಡೆದಿದ್ದು ಸಂಘರ್ಷಕ್ಕೆ ಕಾರಣವಾಗಿದೆ.

Farmer’s Protest: ಹಿಸಾರ್‌ನಲ್ಲಿ ರೈತ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ; ಹಲವರ ಬಂಧನ
ರೈತರನ್ನು ವಶಕ್ಕೆ ತೆಗೆದುಕೊಂಡ ಪೊಲೀಸ್
Follow us
ರಶ್ಮಿ ಕಲ್ಲಕಟ್ಟ
|

Updated on: Feb 23, 2024 | 7:52 PM

ಹಿಸಾರ್ ಫೆಬ್ರುವರಿ 23: ಹರ್ಯಾಣ ಪೊಲೀಸರು (Haryana Police) ಶುಕ್ರವಾರ ಹಿಸಾರ್ (Hisar) ಜಿಲ್ಲೆಯ ಖೇಡಿ ಚೋಪ್ಟಾದಲ್ಲಿ ಧರಣಿ ನಿರತ ರೈತರ (Farmer’s protest) ಮೇಲೆ ಅಶ್ರುವಾಯು ಶೆಲ್‌ಗಳನ್ನು ಬಳಸಿದ್ದು, ರೈತ ಮುಖಂಡ ಸುರೇಶ್ ಕೋತ್ ಸೇರಿದಂತೆ ಹಲವಾರು ರೈತರನ್ನು ಬಂಧಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಪಂಜಾಬ್-ಹರ್ಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ಬೆಂಬಲಿಸಿ ರೈತರು ಕಳೆದ ಐದು ದಿನಗಳಿಂದ ಖೇಡಿ ಚೋಪ್ಟಾದಲ್ಲಿ ಧರಣಿ ಕುಳಿತಿದ್ದರು. ‘ದಿಲ್ಲಿ ಚಲೋ’ ಬೃಹತ್ ಆಂದೋಲನವನ್ನು ಬೆಂಬಲಿಸಿ ಶುಕ್ರವಾರ ಪಂಜಾಬ್‌ನ ಖಾನೌರಿ ಗಡಿಯತ್ತ ತೆರಳಲು ಅವರು ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಪೊಲೀಸರು ಅವರನ್ನು ತಡೆಯಲು ಯತ್ನಿಸಿದ್ದು, ಘರ್ಷಣೆಗೆ ಕಾರಣವಾಯಿತು.

ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು,ಜಲ ಫಿರಂಗಿಗಳನ್ನು ಬಳಸಿದರು.ಆಗ ಪ್ರತಿಭಟನಾಕಾರರು ಕಲ್ಲು ತೂರಿದ್ದಾರೆ. ಕಲ್ಲು ತೂರಾಟದಲ್ಲಿ ಕೆಲ ರೈತರಿಗೆ ಗಾಯಗಳಾಗಿವೆ. ಹಿಂದಿನ ದಿನ, ಪಂಜಾಬ್-ಹರ್ಯಾಣ ಗಡಿಯಲ್ಲಿ ಘರ್ಷಣೆಯ ಸಂದರ್ಭದಲ್ಲಿ ಸಾವಿಗೀಡಾದ ರೈತ ಶುಭಕರನ್ ಸಿಂಗ್ (22) ಅವರ ಕುಟುಂಬವು ರಾಜ್ಯ ಸರ್ಕಾರ ನೀಡಿದ್ದ 1 ಕೋಟಿ ರೂವನ್ನು ಸ್ವೀಕರಿಸಲು ನಿರಾಕರಿಸಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಯುವಕನ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ.

ಹಿಸಾರ್​​ನಲ್ಲಿ ಸಂಘರ್ಷ

ಸಂಘಟಿತ ಪ್ರತಿಭಟನೆಯನ್ನು ಮುಂದುವರಿಸಲು ಸಾಮಾನ್ಯ ಸಮಿತಿ ರಚನೆಗೆ ವಿನಂತಿ

“ಕೆಲವು ರೈತರು ಪ್ರತಿಭಟನೆಯನ್ನು ತರಾತುರಿಯಲ್ಲಿ ಪ್ರಾರಂಭಿಸಿದರು. ಅದು ತುಂಬಾ ಅಸ್ತವ್ಯಸ್ತವಾಗಿದೆ. ಆದ್ದರಿಂದ  ಎಸ್‌ಕೆಎಂ ಮತ್ತು ಎಸ್‌ಕೆಎಂ (ರಾಜಕೀಯೇತರ) ಎರಡೂ ಗುಂಪುಗಳನ್ನು ಸಾಮಾನ್ಯ ಸಮಿತಿ ರಚಿಸಿ ನಂತರ ಆ ಸಮಿತಿಯ ಅಡಿಯಲ್ಲಿ ಪ್ರತಿಭಟನೆಯನ್ನು ಮುಂದುವರಿಸಲು ಕೋರುತ್ತೇವೆ ಎಂದು ನಾವು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಿದ್ದೇವೆ. ಇದು ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜನರ ಸ್ಥೈರ್ಯವನ್ನು ಹೆಚ್ಚಿಸುತ್ತದೆ, ನಮ್ಮ ಬೇಡಿಕೆಗಳನ್ನು ಆಲಿಸುವುದನ್ನು ಖಾತ್ರಿಪಡಿಸುತ್ತದೆ” ಎಂದು BKU (ಚಾರುಣಿ) ನಾಯಕ ಗುರ್ನಾಮ್ ಸಿಂಗ್ ಚಾರುಣಿ ಭಾರತೀಯ ಕಿಸಾನ್ ಒಕ್ಕೂಟದ ಕೋರ್ ಕಮಿಟಿ ಸಭೆಯ ಕುರಿತು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತು ಎಐ ಜೆಮಿನಿ ತಾರತಮ್ಯದ ಉತ್ತರ; ಗೂಗಲ್​​ಗೆ ನೋಟಿಸ್ ನೀಡಲು ಕೇಂದ್ರ ಚಿಂತನೆ

ಪಂಜಾಬ್ ಸರ್ಕಾರ ಎಫ್‌ಐಆರ್ ದಾಖಲಿಸುವವರೆಗೆ ಶುಭಕರನ್ ಅಂತ್ಯಕ್ರಿಯೆ ನಡೆಯುವುದಿಲ್ಲ

ಶುಕ್ರವಾರ ನಡೆದ ‘ದಿಲ್ಲಿ ಚಲೋ’ ಆಂದೋಲನದಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು, ಹರ್ಯಾಣ ಪೊಲೀಸರು ಮತ್ತು ಪಂಜಾಬ್ ರೈತರ ನಡುವಿನ ಘರ್ಷಣೆಯ ನಡುವೆ ಸಾವಿಗೀಡಾದ ಶುಭಕರನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಪಂಜಾಬ್ ಸರ್ಕಾರವು ಇದಕ್ಕೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುವವರೆಗೆ ನಡೆಸುವುದಿಲ್ಲ ಎಂದು ಹೇಳಿದರು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು 1 ಕೋಟಿ ರೂಪಾಯಿ ಪರಿಹಾರ ಮತ್ತು ಶುಭಕರನ್ ಸಹೋದರಿಗೆ ಸರ್ಕಾರಿ ಉದ್ಯೋಗವನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ. ಹರ್ಯಾಣ ಪೊಲೀಸರು ಮತ್ತು ಪಂಜಾಬ್ ರೈತರ ನಡುವಿನ ಘರ್ಷಣೆಯ ನಡುವೆ ಬುಧವಾರ ಪಂಜಾಬ್-ಹರ್ಯಾಣ ಗಡಿಯಲ್ಲಿರುವ ಖಾನೌರಿ ಗಡಿ ಬಿಂದುವಿನಲ್ಲಿ ಸುಭಕರನ್ ಸಿಂಗ್ ಸಾವಿಗೀಡಾದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ