Wedding in Graveyard: ಮಗಳ ಪ್ರೇಮ ವಿವಾಹವನ್ನು ಸ್ಮಶಾನದಲ್ಲಿ ಅದ್ಧೂರಿಯಾಗಿ ನಡೆಸಿದ ಅಪ್ಪ: ಕಾರಣ ಮಾರ್ಮಿಕವಾಗಿದೆ, ಓದಿ

|

Updated on: Jul 27, 2023 | 8:49 AM

ಸ್ಮಶಾನದಲ್ಲಿ ಪ್ರೇಮ ವಿವಾಹ. ಮಗಳ ದಾಂಪತ್ಯ ಗೀತೆಗೆ ನಾಂದಿ ಹಾಡಿದ ಅಪ್ಪ. ಅಹಮದ್‌ನಗರ ಜಿಲ್ಲೆಯ ಶಿರಡಿ ಸಮೀಪ ಗ್ರಾಮವೊಂದರಲ್ಲಿ ಜೋಗಿ ಗಂಗಾಧರ ಗಾಯಕವಾಡ ತಮ್ಮ ಮಗಳಿಗೆ ಈ ವಿಶೇಷ ಮದುವೆಯನ್ನು ಮಾಡಿಸಿದ್ದಾರೆ. 

Wedding in Graveyard: ಮಗಳ ಪ್ರೇಮ ವಿವಾಹವನ್ನು ಸ್ಮಶಾನದಲ್ಲಿ ಅದ್ಧೂರಿಯಾಗಿ ನಡೆಸಿದ ಅಪ್ಪ: ಕಾರಣ ಮಾರ್ಮಿಕವಾಗಿದೆ, ಓದಿ
ಶಿರಡಿ ಸಮೀಪ ಅಂತರ್ಜಾತೀಯ ವಿವಾಹಕ್ಕೆ ವೇದಿಕೆಯಾದ ಸ್ಮಶಾನ!
Follow us on

ಮುಂಬೈ, ಜುಲೈ 27: ಮದುವೆ ಅಂದರೆ ಮಸಣ, ಮದುವೆಗೂ ಮಸರಣಕ್ಕು ಎಲ್ಲಿಯ ಸಂಬಂಧ ಎಂಬೆಲ್ಲಾ ವ್ಯಾಖ್ಯಾನಗಳು ಆಗಾಗ ಕೇಳಿಬರುತ್ತಿರುತ್ತವೆ. ಅದೇ ದಾಠಿಯಲ್ಲಿ ಮುಂದುವರಿದಾಗ ಇಲ್ಲೊಂದು ತಾಜಾ ನಿದರ್ಶನ ಏರ್ಪಟ್ಟಿದೆ. ತಂದೆಯೊಬ್ಬರು ತಮ್ಮ ಮಗಳ ಪ್ರೇಮ ವಿವಾಹವನ್ನು ಸ್ಮಶಾನದಲ್ಲಿ ಅದ್ಧೂರಿಯಾಗಿ ನಡೆಸಿದ್ದಾರೆ. ಸಾಂಪ್ರದಾಯಿಕವಾಗಿ ಮದುವೆ ಮಾಡಿ ಮಗಳು-ಅಳಿಯನನ್ನು ಆಶೀರ್ವದಿಸಿದ್ದಾರೆ. ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಶಿರಡಿ ಸಮೀಪ ಅಂತರ್ಜಾತೀಯ ವಿವಾಹಕ್ಕೆ ವೇದಿಕೆಯಾದ ಸ್ಮಶಾನ!

ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಶಿರಡಿ ಸಮೀಪದ ರಹತಾ ಗ್ರಾಮದ ಜೋಗಿ ಗಂಗಾಧರ ಗಾಯಕವಾಡ ಮತ್ತು ಗಂಗೂಬಾಯಿ ಗಾಯಕವಾಡ ದಂಪತಿಗೆ ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ಗಂಗಾಧರ್ ಸ್ಥಳೀಯ ಚಿತಾಗಾರದಲ್ಲಿ ಕಾವಲುಗಾರನಾಗಿ ಕೆಲಸ ಮಾಡುವ ಮೂಲಕ ಕುಟುಂಬವನ್ನು ಪೋಷಿಸುತ್ತಿದ್ದಾನೆ.

ಮಹಾಸಂಜೋಗಿ ಸಮುದಾಯಕ್ಕೆ ಸೇರಿದ ಗಂಗಾಧರ್ ಹಲವು ವರ್ಷಗಳಿಂದ ಕುಟುಂಬ ಸಮೇತ ಚಿತಾಗಾರದಲ್ಲಿ ವಾಸವಾಗಿದ್ದಾರೆ. ಇವರ ಕಿರಿಯ ಮಗಳು ಮಯೂರಿ ಕಳೆದ ಕೆಲ ದಿನಗಳಿಂದ ಶಿರಡಿಯ ಮನೋಜ್ ಜೈಸ್ವಾಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರ ಜಾತಿ ಬೇರೆಯಾದರೂ ಹಿರಿಯರು ಇವರ ಮದುವೆಗೆ ಒಪ್ಪಿಗೆ ಸೂಚಿಸಿದ್ದರು.

ಹಾಗಾಗಿ ಮಯೂರಿ ಎಲ್ಲಿ ಬೆಳೆದಳೋ ಅಲ್ಲಿಯೇ ಮದುವೆಯಾಗಬೇಕು ಎಂದು ಗಂಗಾಧರ್​ ಯೋಚಿಸಿದರು! ಆ ನಿಟ್ಟಿನಲ್ಲಿ ಎಲ್ಲ ಬಂಧುಗಳ ಸಮ್ಮುಖದಲ್ಲಿ ತಮ್ಮ ಮಗಳ ದಾಂಪತ್ಯ ಗೀತೆಗೆ ನಾಂದಿ ಹಾಡಿದರು. ವಿಭಿನ್ನವಾಗಿರುವ ಇವರ ಮದುವೆ ಸಮಾರಂಭಕ್ಕೆ ಅನೇಕರು ಶುಭ ಹಾರೈಸಿದ್ದರೆ, ಬಹಳಷ್ಟು ಮಂದಿ ಚರ್ಚೆಯ ವಿಷಯವಾಗಿಸಿಕೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ